ಸೆಪ್ಟೆಂಬರ್ 5 ರಿಂದ ಭಾರತದಲ್ಲಿ OnePlus Pad 3 ಲಭ್ಯ: ಸಂಪೂರ್ಣ ವಿವರಗಳು ಇಲ್ಲಿದೆ!
ಒನ್‌ಪ್ಲಸ್‌ನ ಹೊಸ OnePlus Pad 3 ಫ್ಲ್ಯಾಗ್‌ಶಿಪ್ ಟ್ಯಾಬ್ಲೆಟ್ ಭಾರತದಲ್ಲಿ ಸೆಪ್ಟೆಂಬರ್ 5, 2025 ರಂದು ಖರೀದಿಗೆ ಲಭ್ಯವಾಗಲಿದೆ ಎಂದು ಕಂಪನಿಯು ಖಚಿತಪಡಿಸಿದೆ.! OnePlus Pad 3 ಟ್ಯಾಬ್ಲೆಟ್ ಅನ್ನು ಜೂನ್‌ನಲ್ಲಿ OnePlus 13s ಜೊತೆಗೆ ಪರಿಚಯಿಸಲಾಯಿತು, ಆದರೆ ಆ ಸಮಯದಲ್ಲಿ ಕಂಪೆನಿಯು ಲಭ್ಯತೆಯ ವಿವರಗಳನ್ನು ಹಂಚಿಕೊಂಡಿರಲಿಲ್ಲ. ಆದರೆ ಈಗ, ಭಾರತದಲ್ಲಿ OnePlus Pad 3 ಮಾರಾಟ ದಿನಾಂಕವನ್ನು ಕಂಪೆನಿಯು ಅಧಿಕೃತಪಡಿಸಿದೆ. ಹಾಗಾದರೆ, ಹೊಸ OnePlus Pad 3 ಫ್ಲ್ಯಾಗ್‌ಶಿಪ್ ಟ್ಯಾಬ್ಲೆಟ್ ಹೇಗಿದೆ?, ಬೆಲೆ ಎಷ್ಟಿರಬಹುದು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.
OnePlus Pad 3: ಭಾರತದಲ್ಲಿ ಬಿಡುಗಡೆ ಮಾಹಿತಿ
OnePlus Pad 3 ಭಾರತದಲ್ಲಿ ಸೆಪ್ಟೆಂಬರ್ 5 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿದೆ ಎಂದು ಕಂಪನಿಯು X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮೂಲಕ ದೃಢಪಡಿಸಿದೆ. ಟ್ಯಾಬ್ಲೆಟ್‌ನ ಬೆಲೆಯನ್ನು ಅದೇ ದಿನ ಬಹಿರಂಗಪಡಿಸುವ ಸಾಧ್ಯತೆಯಿದೆ. ಆದರೆ, ಈ ಟ್ಯಾಬ್ಲೆಟ್ 12GB + 256GB ಮತ್ತು 16GB + 512GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ, ಫ್ರಾಸ್ಟೆಡ್ ಸಿಲ್ವರ್ ಮತ್ತು ಸ್ಟಾರ್ಮ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ.
OnePlus Pad 3: ಪ್ರಮುಖ ವೈಶಿಷ್ಟ್ಯಗಳು
OnePlus Pad 3 ಟ್ಯಾಬ್ ತನ್ನ ಶಕ್ತಿಶಾಲಿ ಪ್ರೊಸೆಸರ್ ಮೂಲಕ ಗಮನ ಸೆಳೆದಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ, ಅಡ್ರಿನೊ 830 ಗ್ರಾಫಿಕ್ಸ್ ಮತ್ತು ಕ್ವಾಲ್ಕಾಮ್ ಓರಿಯಾನ್ ಸಿಪಿಯು ಇದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಸಾಧನವು 13.2-ಇಂಚಿನ ಎಲ್‌ಸಿಡಿ ಎಲ್‌ಟಿಪಿಎಸ್ (LCD LTPS) ಡಿಸ್ಪ್ಲೇಯನ್ನು ಹೊಂದಿದೆ, ಅದು 144Hz ಅಡಾಪ್ಟಿವ್ ರಿಫ್ರೆಶ್ ರೇಟ್, 3.4k ರೆಸಲ್ಯೂಶನ್ ಮತ್ತು 600nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು ಗೇಮಿಂಗ್, ಮತ್ತು ಸೃಜನಶೀಲ ಕೆಲಸಗಳಿಗೆ ಸೂಕ್ತವಾದ ಅನುಭವವನ್ನು ಒದಗಿಸುತ್ತದೆ.

ಕ್ಯಾಮೆರಾದ ವಿಷಯದಲ್ಲಿ, ಟ್ಯಾಬ್ಲೆಟ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ, OnePlus Pad 3 ಬೃಹತ್ 12,140mAh ಬ್ಯಾಟರಿಯನ್ನು ಹೊಂದಿದೆ, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದು ಕೇವಲ 35 ನಿಮಿಷಗಳಲ್ಲಿ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡುತ್ತದೆ.ಇನ್ನು ಈ ಟ್ಯಾಬ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್‌ಓಎಸ್ 15 (OxygenOS 15) ನಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ ಬೆಲೆ
OnePlus Pad 3 ಬೆಲೆ ಕುರಿತು ಕಂಪನಿಯು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಅನೇಕ ತಂತ್ರಜ್ಞಾನ ಸಂಬಂಧಿತ ವೆಬ್‌ಸೈಟ್‌ಗಳ ಪ್ರಕಾರ, ಇದರ ಬೆಲೆ ₹50,000 ಕ್ಕಿಂತ ಕಡಿಮೆ ಇರುವ ನಿರೀಕ್ಷೆ ಇದೆ. 12GB/256GB ಆವೃತ್ತಿಯ ಆರಂಭಿಕ ಬೆಲೆ ಸುಮಾರು ₹44,990 ರಿಂದ ₹45,999 ಇರಬಹುದೆಂದು ಅಂದಾಜಿಸಲಾಗಿದೆ. ಅಧಿಕೃತ ಬೆಲೆ ಸೆಪ್ಟೆಂಬರ್ 5, 2025 ರಂದು ಬಿಡುಗಡೆಯ ಸಮಯದಲ್ಲಿ ಘೋಷಣೆಯಾಗಲಿದೆ. ಒಟ್ಟಾರೆಯಾಗಿ, OnePlus Pad 3 ಅದರ ಉತ್ತಮ ವೈಶಿಷ್ಟ್ಯಗಳು, ಶಕ್ತಿಶಾಲಿ ಪ್ರೊಸೆಸರ್, ದೀರ್ಘಕಾಲದ ಬ್ಯಾಟರಿ ಬಾಳಿಕೆ ಮತ್ತು ವಿಶಿಷ್ಟ ವಿನ್ಯಾಸದೊಂದಿಗೆ ಪ್ರೀಮಿಯಂ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುವ ಸಾಧ್ಯತೆ ಇದೆ. ಇದು ಬಳಕೆದಾರರಿಗೆ ಐಪ್ಯಾಡ್‌ಗೆ ಪರ್ಯಾಯವಾಗಿ ಹೊಸ ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








