OPPO: ಹೊಸ ಟ್ಯಾಬ್ ಲಾಂಚ್; 9510mAh ಬ್ಯಾಟರಿ.. 256GB ಸ್ಟೋರೇಜ್.. ಬೆಲೆ ನೋಡಿ
ಒಪ್ಪೋ ಭಾರತದಲ್ಲಿ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳೇ, OPPO Find X8 ಮತ್ತು OPPO Find X8 Pro ಸ್ಮಾರ್ಟ್‌ಫೋನ್‌ಗಳು. ಈ ಫೋನ್‌ಗಳ ಜೊತೆಗೆ, ಕಂಪನಿಯು ಹೊಸ ಒಪ್ಪೋ ಪ್ಯಾಡ್ 3 ಪ್ರೊ (OPPO Pad 3 Pro) ಟ್ಯಾಬ್ಲೆಟ್ ಸಹ ಅನಾವರಣಗೊಳಿಸಿದೆ. ಇದು 12GB RAM ಮತ್ತು 9510mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಬನ್ನಿ, ಈ ಹೊಸ ಟ್ಯಾಬ್ಲೆಟ್‌ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಬರಲಿದೆ. ಈ ಟ್ಯಾಬ್ಲೆಟ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಟ್ಯಾಬ್ 12.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 256GB ಸ್ಟೋರೇಜ್ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್‌ನ ಬೆಲೆ
ಕಂಪನಿಯು ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ ಅನ್ನು 12GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ನ ಬೆಲೆ 53,500 ರೂ. (599.99 ಯುರೋ) ಆಗಿದೆ. ಕಂಪನಿಯು ಈ ಟ್ಯಾಬ್ಲೆಟ್‌ನೊಂದಿಗೆ ಪೆನ್ಸಿಲ್ 2 ಪ್ರೊ ಸ್ಟೈಲಸ್ ಮತ್ತು ಸ್ಮಾರ್ಟ್ ಕೀಬೋರ್ಡ್ ಉಚಿತವಾಗಿ ನೀಡುತ್ತದೆ. ಈ ಆಫರ್ ಡಿಸೆಂಬರ್ 31 ರವರೆಗೆ ಮಾತ್ರ ಲಭ್ಯವಿರುತ್ತದೆ.
ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್‌ನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ 12.1 ಇಂಚಿನ 3K ಡಿಸ್ಪ್ಲೇಯನ್ನು ಹೊಂದಿದೆ. ಇದು 3200 x 2120 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇಯು 144Hz ರಿಫ್ರೆಶ್ ದರ, 540Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 900 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು ಇಂಟೆಲಿಜೆಂಟ್ ಐ ಕೇರ್ ವೈಶಿಷ್ಟ್ಯವನ್ನು ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ ಅನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 750 ಜಿಪಿಯು ಹೊಂದಿದೆ. ಈ ಟ್ಯಾಬ್ ಆಂಡ್ರಾಯ್ಡ್ 15 ಆಧಾರಿತ ColorOS 14.1 ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಹೊಸ ಟ್ಯಾಬ್ಲೆಟ್ 12GB RAM ನೊಂದಿಗೆ ಬಿಡುಗಡೆಯಾಗಿದೆ. ಇದು 12GB RAM ಮತ್ತು 256GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ಸೆಟಪ್
ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ನೂತನ ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ 9510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ, 12 ಗಂಟೆಗಳ ಕಾಲ ವಿಡಿಯೋಗಳನ್ನು ವೀಕ್ಷಿಸಬಹುದು ಎಂದು ಕಂಪನಿ ಹೇಳಿದೆ.
ಇತರೆ ವೈಶಿಷ್ಟ್ಯಗಳು
ಒಪ್ಪೋ ಪ್ಯಾಡ್ 3 ಪ್ರೊ ಟ್ಯಾಬ್ಲೆಟ್ ಹಾಡನ್ನು ಕೇಳಲು 6 ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು 5G ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








