ಸಿಹಿಸುದ್ದಿ: 8000 ಡಿಸ್ಕೌಂಟ್! 10,000mAh ಬ್ಯಾಟರಿ.. 12.1 ಇಂಚಿನ ಡಿಸ್‌ಪ್ಲೇ.. ಈ Poco ಟ್ಯಾಬ್‌ಗೆ ಬಿಗ್ ಆಫರ್
ನೀವು ಹೊಸ ಟ್ಯಾಬ್ಲೆಟ್ ಖರೀದಿಸುವ ಬಯಸಿದರೆ, ನಿಮಗಿದೆ ಸಿಹಿ ಸುದ್ದಿ. ಬಜೆಟ್ ಬೆಲೆಯಲ್ಲಿ ಟ್ಯಾಬ್ ಕೊಳ್ಳುವ ಮನಸ್ಸು ಇದ್ದರೆ, ಇಲ್ಲಿದೆ ಸಖತ್ ಆಫರ್. ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಹೌದು, ಪೊಕೊ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ ಪೊಕೊ ಪ್ಯಾಡ್ 5G (Poco Pad 5G) ಟ್ಯಾಬ್. ಈ ಹೊಸ ಟ್ಯಾಬ್ ಸಖತ್ ಸ್ಟೈಲಿಶ್ ಆಗಿದೆ. ಬನ್ನಿ, ಈ ಹೊಸ ಟ್ಯಾಬ್‌ನ ವಿಶೇಷತೆಗಳನ್ನು ತಿಳಿಯೋಣ.
ಪೊಕೊ ಪ್ಯಾಡ್ 5G (Poco Pad 5G) ಟ್ಯಾಬ್ಲೆಟ್ 120Hz ರಿಫ್ರೆಶ್ ದರದೊಂದಿಗೆ ದೊಡ್ಡ 12.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ನೀವು ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಮತ್ತು 8GB RAM ಪಡೆಯಬಹುದು. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 33W ವೇಗದ ಚಾರ್ಜಿಂಗ್‌ನೊಂದಿಗೆ 10,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ಮತ್ತು ಲಭ್ಯತೆ ತಿಳಿಯಲು ಮುಂದೆ ಓದಿ.

ಪೊಕೊ ಪ್ಯಾಡ್ 5G ಟ್ಯಾಬ್‌ನ ಬೆಲೆ ಮತ್ತು ಆಫರ್‌ಗಳು
ಪೊಕೊ ಪ್ಯಾಡ್ 5G ಟ್ಯಾಬ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಟ್ಯಾಬ್‌ನ 8GB + 128GB ಸ್ಟೋರೇಜ್ ರೂಪಾಂತರವು 23,999 ರೂ.ಗೆ ಬಿಡುಗಡೆಯಾಗಿತ್ತು. ಹಾಗೆಯೇ 8GB + 256GB ಸ್ಟೋರೇಜ್ ರೂಪಾಂತರವನ್ನು 25,999 ರೂ.ಗೆ ಪರಿಚಯಿಸಲಾಗಿತ್ತು. ಪ್ರಸ್ತುತ ಈ ಟ್ಯಾಬ್‌ನ 8GB RAM + 256GB ಸ್ಟೋರೇಜ್ ವೇರಿಯಂಟ್ ಖರೀದಿ ಮೇಲೆ ಶೇ.39 ರಷ್ಟು ರಿಯಾಯಿತಿ ಲಭ್ಯವಿದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 19,999 ರೂ.ಗೆ ಖರೀದಿಸಬಹುದು.
ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು, ಇಎಂಐ ಪಾವತಿ ಮೂಲಕ ಈ ಟ್ಯಾಬ್ಲೆಟ್ ಖರೀದಿಸಿದರೆ 2,000 ರೂ. ಹೆಚ್ಚುವರಿ ಡಿಸ್ಕೌಂಟ್ ಸಿಗುತ್ತದೆ. ಒಟ್ಟಾರೆಯಾಗಿ, ನೀವು ಈ ಟ್ಯಾಬ್ಲೆಟ್ ಅನ್ನು 17,999 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಟ್ಯಾಬ್ಲೆಟ್ ಪಿಸ್ತಾ ಗ್ರೀನ್ ಮತ್ತು ಕೋಬಾಲ್ಟ್ ಬ್ಲೂಸ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಪೊಕೊ ಪ್ಯಾಡ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಪೊಕೊ ಪ್ಯಾಡ್ 5G ಟ್ಯಾಬ್ 12.1 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಆಗಿದೆ. ಈ 180Hz ಟಚ್ ಸ್ಯಾಂಪ್ಲಿಂಗ್ ದರ, ಡಿಸ್ಪ್ಲೇಯು 120Hz ರಿಫ್ರೆಶ್ ದರ, 600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಮತ್ತು ಸ್ಟೋರೇಜ್
ಪೊಕೊ ಪ್ಯಾಡ್ 5G ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಪ್ಯಾಡ್ ಆಂಡ್ರಾಯ್ಡ್ 14 ಆಧಾರಿತ HyperOS ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಟ್ಯಾಬ್ಲೆಟ್ Adreno 710 GPU ಗ್ರಾಫಿಕ್ಸ್ ಕಾರ್ಡ್ ಹೊಂದಿದೆ. ಇದು 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

ಅದ್ಭುತ ಕ್ಯಾಮೆರಾ ಸೆಟಪ್
ಪೊಕೊ ಪ್ಯಾಡ್ 5G ಟ್ಯಾಬ್ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಟ್ಯಾಬ್, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ದೊಡ್ಡ ಬ್ಯಾಟರಿ
ಪೊಕೊ ಪ್ಯಾಡ್ 5G ಟ್ಯಾಬ್ಲೆಟ್ 10,00mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ ಪ್ಯಾಡ್ 5G ಟ್ಯಾಬ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಕ್ವಾಡ್ ಸ್ಪೀಕರ್ ಸೆಟಪ್, ಎರಡು ಮೈಕ್ರೊಫೋನ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ಗೆ ಸಪೋರ್ಟ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ 6 ಮತ್ತು ಬ್ಲೂಟೂತ್ 5.2 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








