Home
Tablets

Poco Pad 5G ಟ್ಯಾಬ್‌ ಬಿಡುಗಡೆ; ಕಡಿಮೆ ಬೆಲೆ.. ವಿದ್ಯಾರ್ಥಿಗಳಿಗೆ ಸಖತ್ ಆಫರ್!

ನೀವು ಹೊಸ ಟ್ಯಾಬ್ಲೆಟ್ ಖರೀದಿಸುವ ಬಯಸಿದರೆ, ನಿಮಗಿದೆ ಸಿಹಿ ಸುದ್ದಿ. ಬಜೆಟ್‌ ಬೆಲೆಯಲ್ಲಿ ಟ್ಯಾಬ್‌ ಕೊಳ್ಳುವ ಮನಸ್ಸು ಇದ್ದರೆ, ಇಲ್ಲಿದೆ ಸಖತ್ ಆಫರ್‌. ವಿದ್ಯಾರ್ಥಿಗಳಿಗೆ ಈ ಟ್ಯಾಬ್ಲೆಟ್ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಹೌದು, ಪೊಕೊ ಕಂಪನಿಯು ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದುವೇ ಪೊಕೊ ಪ್ಯಾಡ್ 5G (Poco Pad 5G) ಟ್ಯಾಬ್. ಈ ಹೊಸ ಟ್ಯಾಬ್ ಸಖತ್‌ ಸ್ಟೈಲಿಶ್‌ ಆಗಿದೆ. ಬನ್ನಿ, ಈ ಹೊಸ ಟ್ಯಾಬ್‌ನ ವಿಶೇಷತೆಗಳನ್ನು ತಿಳಿಯೋಣ.

ಪೊಕೊ ಪ್ಯಾಡ್ 5G (Poco Pad 5G) ಟ್ಯಾಬ್ಲೆಟ್ 120Hz ರಿಫ್ರೆಶ್ ದರದೊಂದಿಗೆ ದೊಡ್ಡ 12.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ನೀವು ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಮತ್ತು 8GB RAM ಪಡೆಯಬಹುದು. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 33W ವೇಗದ ಚಾರ್ಜಿಂಗ್‌ನೊಂದಿಗೆ 10,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ಮತ್ತು ಲಭ್ಯತೆ ತಿಳಿಯಲು ಮುಂದೆ ಓದಿ.

Poco Pad 5G ಟ್ಯಾಬ್‌ ಬಿಡುಗಡೆ; ಕಡಿಮೆ ಬೆಲೆ.. ವಿದ್ಯಾರ್ಥಿಗಳಿಗೆ ಸಖತ್ ಆಫರ್!

ಪೊಕೊ ಪ್ಯಾಡ್ 5G ಟ್ಯಾಬ್‌ನ ಬೆಲೆ ಮತ್ತು ಆಫರ್‌ಗಳು

ಪೊಕೊ ಕಂಪನಿಯು ಪೊಕೊ ಪ್ಯಾಡ್ 5G ಅನ್ನು ಭಾರತದಲ್ಲಿ ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. 8GB ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 23,999 ರೂ. ಇದೆ. 8GB ಮತ್ತು 256GB ಸ್ಟೋರೇಜ್ ರೂಪಾಂತರವು 25,999 ರೂ.ಗೆ ಬಿಡುಗಡೆಯಾಗಿದೆ. ಈ ಟ್ಯಾಬ್ಲೆಟ್ ಪಿಸ್ತಾ ಗ್ರೀನ್ ಮತ್ತು ಕೋಬಾಲ್ಟ್ ಬ್ಲೂಸ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದೇ ಆಗಸ್ಟ್ 27 ರಿಂದ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ.

ವಿದ್ಯಾರ್ಥಿಗಳಿಗೆ ಭಾರೀ ಡಿಸ್ಕೌಂಟ್!

ಕಂಪನಿಯು ಪೊಕೊ ಪ್ಯಾಡ್ ಖರೀದಿಸುವ ಗ್ರಾಹಕರಿಗೆ ಬ್ಯಾಂಕ್ ಆಫರ್‌ಗಳನ್ನು ಸಹ ಘೋಷಿಸಿದೆ. ನೀವು ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ 3,000 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಪೊಕೊ ಮಾರಾಟದ ಮೊದಲ ದಿನದಂದು ವಿದ್ಯಾರ್ಥಿಗಳಿಗೆ ಹೆಚ್ಚುವರಿ 1,000 ರೂ.ಗಳ ರಿಯಾಯಿತಿಯನ್ನು ನೀಡಲಿದೆ. 8GB ಮತ್ತು 128GB ಸ್ಟೋರೇಜ್ ರೂಪಾಂತರವು 19,999 ರೂ. ಮತ್ತು 8GB ಮತ್ತು 256GB ಸ್ಟೋರೇಜ್ ರೂಪಾಂತರವನ್ನು 21,999 ರೂ. ಬೆಲೆಯಲ್ಲಿ ಖರೀದಿಸಬಹುದು.

ಪೊಕೊ ಪ್ಯಾಡ್ 5G ಟ್ಯಾಬ್‌ನ ವೈಶಿಷ್ಟ್ಯಗಳು

ಡಿಸ್ಪ್ಲೇ: ಪೊಕೊ ಪ್ಯಾಡ್ 5G 12.1 ಇಂಚಿನ 1.5K IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, ಡಾಲ್ಬಿ ವಿಷನ್ ಮತ್ತು 600 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಕ್ವಾಡ್-ಸ್ಪೀಕರ್ ಸೆಟಪ್, ಎರಡು ಮೈಕ್ರೊಫೋನ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ಗೆ ಸಪೋರ್ಟ್‌ ಪಡೆದಿದೆ.

ಪ್ರೊಸೆಸರ್: ಹೊಸ ಪೊಕೊ ಪ್ಯಾಡ್ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್‌ ಅನ್ನು ಹೊಂದಿದೆ. ಇದು 8GB ಯ LPDDR4X RAM ಮತ್ತು 256GB UFS 2.2 ಸ್ಟೋರೇಜ್‌ ಒಳಗೊಂಡಿದೆ. ನೀವು ಮೀಸಲಾದ MicroSDXC ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಈ ಪ್ಯಾಡ್ ಬಾಕ್ಸ್ ಹೊರಗೆ Android 14 ಆಧಾರಿತ HyperOS ನಲ್ಲಿ ಕಾರ್ಯನಿರ್ವಹಿಸುತ್ತದೆ.

Poco Pad 5G ಟ್ಯಾಬ್‌ ಬಿಡುಗಡೆ; ಕಡಿಮೆ ಬೆಲೆ.. ವಿದ್ಯಾರ್ಥಿಗಳಿಗೆ ಸಖತ್ ಆಫರ್!

ಬ್ಯಾಟರಿ: ಪೊಕೊ ಪ್ಯಾಡ್ 5G ಟ್ಯಾಬ್ಲೆಟ್ 10,00mAh ಸಾಮರ್ಥ್ಯ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಈ ಪೊಕೊ ಪ್ಯಾಡ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್‌ನೊಂದಿಗೆ ಬರುತ್ತದೆ.

ಕ್ಯಾಮೆರಾ: ಈ ಟ್ಯಾಬ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು 8 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಕ್ಲಿಕ್ಕಿಸಲು ಮತ್ತು ವಿಡಿಯೋ ಕರೆಗಳಿಗಾಗಿ ಈ ಟ್ಯಾಬ್‌ನ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Best Mobiles in India

English summary
Poco has launched its first tablet Poco Pad 5G in India. The company has given many features in this tablet, including a large 12.1-inch display with 120Hz refresh rate, Snapdragon 7S Gen 2 processor with a large 10,000mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+