Home
Tablets

ರೆಡ್ಮಿಯಿಂದ ಹೊಸ ಟ್ಯಾಬ್‌ ಬಿಡುಗಡೆ; ಅಚ್ಚರಿ ಫೀಚರ್ಸ್‌, ಬಜೆಟ್‌ ಬೆಲೆ?

ಒನ್‌ಪ್ಲಸ್‌ಗೆ ಸೆಡ್ಡು ಹೊಡೆಯಲು ಬಂತು ಹೊಸ ರೆಡ್ಮಿ ಟ್ಯಾಬ್‌! ಇದು ಒನ್‌ಪ್ಲಸ್‌ ಪ್ಯಾಡ್‌ಗಿಂತ ತುಂಬಾ ಅಗ್ಗ..! ಹೌದು, ಶಿಯೋಮಿ (Xiaomi) ಎರಡು ಹೊಸ ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಒಂದು Redmi Pad Pro 5G, ಮತ್ತೊಂದು Redmi Pad SE 4G ಪ್ಯಾಡ್‌. Redmi Pad Pro 5G ಚೀನಾದಲ್ಲಿ ಬಿಡುಗಡೆಯಾಗಿರುವ ಟ್ಯಾಬ್ಲೆಟ್ ಆಗಿದ್ದರೆ, ಇನ್ನೊಂದು ಈ ವರ್ಷ ಭಾರತದಲ್ಲಿ ಬಿಡುಗಡೆಯಾದ Redmi Pad SEಯ 4G ಆವೃತ್ತಿಯಾಗಿದೆ. ಈ ಟ್ಯಾಬ್ಲೆಟ್‌ ಒನ್‌ಪ್ಲಸ್ ಪ್ಯಾಡ್‌ಗೆ ತೀವ್ರ ಪೈಪೋಟಿ ನೀಡುವುದು ಪಕ್ಕಾ!

ಹೌದು, ಹೊಸ ಟ್ಯಾಬ್ಲೆಟ್ 12.1 ಇಂಚಿನ ದೊಡ್ಡ ಡಿಸ್ಲ್ಪೇಯೊಂದಿಗೆ ಬರುತ್ತದೆ. ಇದು Snapdragon 7s Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ಯಾಬ್ಲೆಟ್ ಜೊತೆಗೆ, ಕಂಪನಿಯು Redmi Pad SE 4G ಮತ್ತು Xiaomi 14 CIVI Panda Limited Edition ಸ್ಮಾರ್ಟ್‌ಫೋನ್‌ ಸಹ ಪರಿಚಯಿಸಿದೆ. Redmi Pad Pro 5G ಬಗ್ಗೆ ಹೇಳುವುದಾದರೆ, ಈ ಟ್ಯಾಬ್ಲೆಟ್ ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಬರುತ್ತದೆ. ಬೆಲೆಗೆ ಅನುಗುಣವಾಗಿ, ಇದು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ರೆಡ್ಮಿಯಿಂದ ಹೊಸ ಟ್ಯಾಬ್‌ ಬಿಡುಗಡೆ; ಇದು OnePlusಗಿಂತ ತುಂಬಾ ಅಗ್ಗ!

ರೆಡ್ಮಿ ಪ್ಯಾಡ್ ಪ್ರೊ ಬೆಲೆ ಎಷ್ಟು?

Redmi Pad Pro ಅನ್ನು Wi-Fi ಮತ್ತು 5G ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. Wi-Fi ರೂಪಾಂತರವು 21,999 ರೂ.ಗೆ (6GB + 128GB) ಲಭ್ಯವಿರುತ್ತದೆ. Redmi Pad Pro 5G ಟ್ಯಾಬ್ಲೆಟ್, 8GB + 128GB ಮತ್ತು 8GB + 256GB ಸ್ಟೋರೇಜ್‌ನಲ್ಲಿ ಬಿಡುಗಡೆಯಾಗಿದೆ. 8GB + 128GB ಸ್ಟೇರೇಜ್‌ನ ಬೆಲೆ 24,999 ರೂ. ಇದೆ. ಮತ್ತು 8GB + 256GB ಸ್ಟೋರೇಜ್‌ನ ಬೆಲೆ 26,999 ರೂ.ಗೆ ಲಭ್ಯವಿದೆ.

ರೆಡ್ಮಿ ಸ್ಮಾರ್ಟ್ ಪೆನ್ ಬೆಲೆ 3,999 ರೂ., Redmi Pad Pro ಕೀಬೋರ್ಡ್ ಸಹ 3,999 ರೂ. ಮತ್ತು Redmi Pad Pro ಕವರ್ ಬೆಲೆ 1499 ರೂ. ಇರಲಿದೆ. Redmi Pad Pro ಟ್ಯಾಬ್ಲೆಟ್ ಮಿಸ್ಟ್ ಬ್ಲೂ ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳಲ್ಲಿ ಬರುತ್ತದೆ. ಇನ್ನೂ, Redmi Pad Pro 5G ಪ್ಯಾಡ್ ಕ್ವಿಕ್ ಸಿಲ್ವರ್ ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳಲ್ಲಿ ಬರುತ್ತದೆ.

ಈ ದಿನದಿಂದ ಮಾರಾಟ ಪ್ರಾರಂಭ

ಟ್ಯಾಬ್ಲೆಟ್‌ಗಳ ಮೊದಲ ಮಾರಾಟವು mi.com, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು Xiaomiನ ಅಧಿಕೃತ ಚಾನಲ್‌ಗಳಲ್ಲಿ ಆಗಸ್ಟ್ 2 ರಿಂದ ಮಾರಾಟ ಪ್ರಾರಂಭವಾಗುತ್ತದೆ. ಗ್ರಾಹಕರು ಬ್ಯಾಂಕ್ ಕೊಡುಗೆಯ ಮೂಲಕ ಟ್ಯಾಬ್ಲೆಟ್‌ಗಳ ಮೇಲೆ 2,000 ರೂಪಾಯಿಗಳ ಡಿಸ್ಕೌಂಟ್ ಪಡೆಯಬಹುದು.

Redmi Pad Pro 5G ಟ್ಯಾಬ್ಲೆಟ್‌ನ ವಿಶೇಷತೆಗಳು

ಡಿಸ್‌ಪ್ಲೇ: ಇದು 12.1-ಇಂಚಿನ 2.5K ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 600nits ಬ್ರೈಟ್‌ನೆಸ್ ಹೊಂದಿದೆ. 180Hz ಟಚ್ ಸ್ಯಾಂಪ್ಲಿಂಗ್ ದರ, ಡಾಲ್ಬಿ ವಿಷನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ.

ಪ್ರೊಸೆಸರ್: ಈ ಟ್ಯಾಬ್ಲೆಟ್ Qualcomm Snapdragon 7s Gen 2 ಚಿಪ್‌ಸೆಟ್, Adreno 710 GPU ಜೊತೆಗೆ 8GB RAM ಮತ್ತು 256GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ನೀವು ಮೈಕ್ರೊ SD ಕಾರ್ಡ್ ಮೂಲಕ ಪ್ಯಾಡ್‌ನ ಸ್ಟೋರೇಜ್ ಅನ್ನು 1.5TB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ: ಇದು ಮುಂಭಾಗ ಮತ್ತು ಹಿಂಭಾಗದಲ್ಲಿ 8MP ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ, ಇದು ಆಂಡ್ರಾಯ್ಡ್ 14 ಆಧಾರಿತ Xiaomi HyperOSನಲ್ಲಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ: ಹೊಸ Redmi ಟ್ಯಾಬ್ಲೆಟ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 10,000mAh ಬ್ಯಾಟರಿಯನ್ನು ಹೊಂದಿದೆ.

Redmi Pad SE 4G ಪ್ಯಾಡ್‌ನ ಫೀಚರ್ಸ್‌

ಇದು 8.7 ಇಂಚಿನ HD LCD ಡಿಸ್ಪ್ಲೇ, 90Hz ರಿಫ್ರೆಶ್ ದರವನ್ನು ಹೊಂದಿದೆ. MediaTek Helio G99 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 4GB RAM ಮತ್ತು 128GB ವರೆಗೆ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು 2TB ವರೆಗೆ ಸ್ಟೋರೇಜ್‌ ವಿಸ್ತರಿಸಲು ಮೈಕ್ರೊ SD ಕಾರ್ಡ್ ಸ್ಲಾಟ್ ಸಹ ಹೊಂದಿದೆ. 8MP ಹಿಂಭಾಗದ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಹೊಂದಿದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,650mAh ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Redmi Pad Pro and Redmi Pad Pro 5G with 12.1 display, quad speakers launched in India starting at Rs. 21,999 : Check price, offer, sale date and specs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+