Home
Tablets

ಜ.10ಕ್ಕೆ Xiaomi Pad 7 ಟ್ಯಾಬ್ ಲಾಂಚ್; 8850mAh ಬಿಗ್ ಬ್ಯಾಟರಿ.. 256GB ಸ್ಟೋರೇಜ್‌.. ಬೆಲೆಯೂ ಕಡಿಮೆ!

ಟ್ಯಾಬ್‌ ಪ್ರಿಯರಿಗೆ ಶಿಯೋಮಿ ಸಿಹಿಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿ ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ಕಂಪನಿಯು ತನ್ನ ಶಿಯೋಮಿ ಪ್ಯಾಡ್ 7 (Xiaomi Pad 7) ಟ್ಯಾಬ್ಲೆಟ್‌ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ಅಕ್ಟೋಬರ್‌ನಲ್ಲಿ Xiaomi Pad 7 Pro ಜೊತೆಗೆ ಚೀನಾದಲ್ಲಿ ಮೊದಲ ಬಾರಿಗೆ ಈ ಟ್ಯಾಬ್ಲೆಟ್ ಪರಿಚಯಿಸಲಾಗಿತ್ತು. ಇದೀಗ, ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಬನ್ನಿ, ಈ ಹೊಸ ಟ್ಯಾಬ್‌ನ ಬಿಡುಗಡೆ ದಿನಾಂಕ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಶಿಯೋಮಿ ಪ್ಯಾಡ್ 7 ಅನ್ನು ಕಂಪನಿಯು Xiaomi Pad 6 ಟ್ಯಾಬ್‌ನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಿದೆ. ಇದು ಮಾರುಕಟ್ಟೆಯಲ್ಲಿರುವ ಮಧ್ಯಮ ಶ್ರೇಣಿಯ ಟ್ಯಾಬ್ಲೆಟ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿದೆ. ಈ ಟ್ಯಾಬ್ಲೆಟ್ 8850mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಇದರಲ್ಲಿ 11.2 ಇಂಚಿನ ದೊಡ್ಡ ಡಿಸ್ಪ್ಲೇ ಲಭ್ಯವಿರುತ್ತದೆ. ಈ ಟ್ಯಾಬ್ ಸ್ನಾಪ್‌ಡ್ರಾಗನ್ 7+ ಜೆನ್ 3 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ, 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ.

ಜ.10 ರಂದು Xiaomi Pad 7 ಟ್ಯಾಬ್ ಲಾಂಚ್; ಬೆಲೆ, ವಿಶೇಷತೆಗಳೇನು?

ಶಿಯೋಮಿ ಪ್ಯಾಡ್ 7 ಭಾರತದಲ್ಲಿ ಬಿಡುಗಡೆ ಯಾವಾಗ?

ಕಂಪನಿಯು ಅಮೆಜಾನ್‌ನಲ್ಲಿ (Amazon) ಶಿಯೋಮಿ ಪ್ಯಾಡ್ 7 ಟ್ಯಾಬ್‌ನ ಮೈಕ್ರೋಸೈಟ್ ಲೈವ್ ಮಾಡಿದೆ. ಇದರ ಪ್ರಕಾರ, ಜನವರಿ 10, 2025 ರಂದು ಭಾರತದಲ್ಲಿ ಶಿಯೋಮಿ ಪ್ಯಾಡ್ 7 ಅದ್ದೂರಿಯಾಗಿ ಲಾಂಚ್ ಆಗಲಿದೆ. ಇದಲ್ಲದೆ, ಈ ಟ್ಯಾಬ್ಲೆಟ್ ಅನ್ನು ಇ-ಕಾಮರ್ಸ್ ಸೈಟ್ ಅಮೆಜಾನ್ ಮೂಲಕ ಮಾರಾಟ ಮಾಡಲಾಗುತ್ತದೆ. ನೀವು, ಈ ಟ್ಯಾಬ್ಲೆಟ್ ಅನ್ನು ಕಪ್ಪು, ನೀಲಿ ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಟ್ಯಾಬ್‌ನ ಬೆಲೆ ತಿಳಿಯಲು ಮುಂದೆ ಓದಿ.

ಶಿಯೋಮಿ ಪ್ಯಾಡ್ 7 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಶಿಯೋಮಿ ಪ್ಯಾಡ್ 7 ಟ್ಯಾಬ್‌ 11.2 ಇಂಚಿನ 3.2K ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 2,136 x 3,200 ಪಿಕ್ಸೆಲ್‌ ರೆಸಲ್ಯೂಶ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು ಡಾಲ್ಬಿ ವಿಷನ್ ಬೆಂಬಲ ಹೊಂದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 7+ ಜೆನ್ 3 SoC ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಟ್ಯಾಬ್ಲೆಟ್‌ ಆಂಡ್ರಾಯ್ಡ್‌ 15 ಆಧಾರಿತ ಹೈಪರ್‌ ಓಎಸ್‌ 2.0 ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ಜ.10 ರಂದು Xiaomi Pad 7 ಟ್ಯಾಬ್ ಲಾಂಚ್; ಬೆಲೆ, ವಿಶೇಷತೆಗಳೇನು?

ಕ್ಯಾಮೆರಾ ಸೆಟಪ್

ಶಿಯೋಮಿ ಪ್ಯಾಡ್ 7 ಟ್ಯಾಬ್‌ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ 8,850mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು

ಶಿಯೋಮಿ ಪ್ಯಾಡ್ 7 ಡಾಲ್ಬಿ ಅಟ್ಮಾಸ್ ಜೊತೆಗೆ 4 ಸ್ಪೀಕರ್‌ಗಳನ್ನು ಹೊಂದಿದೆ. ಉತ್ತಮ ವಿಡಿಯೋ ಕರೆಗಾಗಿ 4 ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 7, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ 3.2 ಜೆನ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಬೆಲೆ

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಚೀನಾದಲ್ಲಿ ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಟ್ಯಾಬ್‌ನ 8GB + 128GB ಸ್ಟೋರೇಜ್‌ ರೂಪಾಂತರವನ್ನು 23,500 ರೂ.ಗೆ (CNY 1,999) ಬಿಡುಗಡೆ ಮಾಡಲಾಗಿದೆ. 8GB + 256GB ಸ್ಟೋರೇಜ್‌ ವೇರಿಯಂಟ್ ಬೆಲೆ 26,800 ರೂ. (CNY 2,299) ಆಗಿದೆ. ಇನ್ನು ಟಾಪ್ ಎಂಡ್ 12GB + 256GB ಸ್ಟೋರೇಜ್‌ ಆಯ್ಕೆಯು 30,000 ರೂ.ಗೆ (CNY 2,599) ಮಾರಾಟವಾಗುತ್ತಿದೆ. ಭಾರತದಲ್ಲಿ ಇದೇ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Best Mobiles in India

English summary
Xiaomi Pad 7 launching in India on January 10: to be available on Amazon: Expected price, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+