Home
Tablets

Xiaomi: ಹೊಸ ಟ್ಯಾಬ್‌ನ ಸೇಲ್ ಶುರು; ದೊಡ್ಡ ಡಿಸ್ಪ್ಲೇ, ಬಿಗ್ ಬ್ಯಾಟರಿ.. ಬೆಲೆ, ಡಿಸ್ಕೌಂಟ್‌ ಎಷ್ಟು?

ಶಿಯೋಮಿ ಇತ್ತೀಚೆಗೆ ಭಾರತದಲ್ಲಿ ಹೊಸ ಟ್ಯಾಬ್ ಬಿಡುಗಡೆ ಮಾಡಿದೆ. ಇದು ಶಿಯೋಮಿ ಪ್ಯಾಡ್ 7 (Xiaomi Pad 7) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಟ್ಯಾಬ್ಲೆಟ್‌ ಇಂದಿನಿಂದ (ಜನವರಿ 13) ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಿದೆ. ಕಂಪನಿಯು 1,000 ರೂ. ರಿಯಾಯಿತಿ ಮತ್ತು 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡುತ್ತಿದೆ. ಬನ್ನಿ, ಈ ಹೊಸ ಟ್ಯಾಬ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

Xiaomi Pad 6 ಟ್ಯಾಬ್‌ನ ಉತ್ತರಾಧಿಕಾರಿಯಾಗಿ ಶಿಯೋಮಿ ಪ್ಯಾಡ್ 7 ಬಿಡುಗಡೆಯಾಗಿದೆ. ಈ ಟ್ಯಾಬ್ಲೆಟ್ 8850mAh ದೊಡ್ಡ ಬ್ಯಾಟರಿ ಹೊಂದಿದೆ. ಇದರಲ್ಲಿ 11.2 ಇಂಚಿನ ದೊಡ್ಡ ಡಿಸ್ಪ್ಲೇ ಲಭ್ಯವಿದೆ. ಈ ಟ್ಯಾಬ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಶ್ರೇಣಿಯ ಟ್ಯಾಬ್ಲೆಟ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿದೆ. ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಇದರ ಬೆಲೆ ತಿಳಿಯಲು ಮುಂದೆ ಓದಿ.

Xiaomi Pad 7 ಸೇಲ್ ಶುರು; ದೊಡ್ಡ ಡಿಸ್ಪ್ಲೇ, ಬಿಗ್ ಬ್ಯಾಟರಿ; ಬಜೆಟ್ ಬೆಲೆ!

ಶಿಯೋಮಿ ಪ್ಯಾಡ್ 7: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ 144Hz ರಿಫ್ರೆಶ್ ದರದೊಂದಿಗೆ 11.2 ಇಂಚಿನ 3.2K ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 3200 x 2136 ಪಿಕ್ಸೆಲ್‌ ರೆಸಲ್ಯೂಶ್‌, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಡಾಲ್ಬಿ ವಿಷನ್ ಸಪೋರ್ಟ್‌ ಪಡೆದಿದೆ. ಈ ಡಿಸ್ಪ್ಲೇಯು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್

ಶಿಯೋಮಿ ಪ್ಯಾಡ್ 7 ಟ್ಯಾಬ್‌ ಸ್ನಾಪ್‌ಡ್ರಾಗನ್ 7+ ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಟ್ಯಾಬ್ಲೆಟ್‌ ಆಂಡ್ರಾಯ್ಡ್‌ 15 ಆಧಾರಿತ ಹೈಪರ್‌ ಓಎಸ್‌ 2.0 ಜೊತೆಗ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 732 ಜಿಪಿಯು ಸಹ ಒಳಗೊಂಡಿದೆ. ಈ ಟ್ಯಾಬ್ಲೆಟ್ 8GB ಮತ್ತು 12GB RAM ಹೊಂದಿದೆ. ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ಬೊಂಬಾಟ್ ಕ್ಯಾಮೆರಾ

ಹೊಸ ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಬೊಂಬಾಟ್ ಕ್ಯಾಮೆರಾ ಹೊಂದಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.

Xiaomi Pad 7 ಸೇಲ್ ಶುರು; ದೊಡ್ಡ ಡಿಸ್ಪ್ಲೇ, ಬಿಗ್ ಬ್ಯಾಟರಿ; ಬಜೆಟ್ ಬೆಲೆ!

ದೊಡ್ಡ ಬ್ಯಾಟರಿ

ಶಿಯೋಮಿ ಪ್ಯಾಡ್ 7 ಟ್ಯಾಬ್ 8850mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಶಿಯೋಮಿ ಪ್ಯಾಡ್ 7 ಟ್ಯಾಬ್‌ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಜೊತೆಗೆ ಯುಎಸ್‌ಬಿ ಟೈಪ್ ಸಿ ಆಡಿಯೋ, ಡಾಲ್ಬಿ ಅಟ್ಮಾಸ್, 4 ಸ್ಪೀಕರ್‌ಗಳು ಮತ್ತು 4 ಮೈಕ್ರೊಫೋನ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ 6E, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಬೆಲೆ ಮತ್ತು ಆಫರ್‌ಗಳು

8GB + 128GB ಸ್ಟೋರೇಜ್‌ ಬೆಲೆ = 27,999 ರೂ.
8GB + 256GB ಸ್ಟೋರೇಜ್‌ ಬೆಲೆ = 30,999 ರೂ.
12GB + 256GB ಸ್ಟೋರೇಜ್‌ ಬೆಲೆ = 32,999. ರೂ.

ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಬ್‌ನ ಆರಂಭಿಕ ಬೆಲೆ 27,999 ರೂ. ಆಗಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಕೆಲವು ಆಫರ್‌ ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಾವತಿ ಮೇಲೆ 1,000 ರೂ. ಡಿಸ್ಕೌಂಟ್ ಲಭ್ಯವಿದೆ. ಹಾಗೆಯೇ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಸಿಗುತ್ತದೆ. ಈ ಟ್ಯಾಬ್ ಇಂದಿನಿಂದ (ಜನವರಿ 13) ಅಮೆಜಾನ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಶಿಯೋಮಿ ರಿಟೇಲ್ ಸ್ಟೋರ್‌ಗಳ ಮೂಲಕ ಮಾರಾಟ ಶುರು ಮಾಡಿದೆ. ನೀವು ಟ್ಯಾಬ್ಲೆಟ್ ಅನ್ನು ಗ್ರ್ಯಾಫೈಟ್ ಗ್ರೇ, ಮಿರಾಜ್ ಪರ್ಪಲ್ ಮತ್ತು ಸೇಜ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

Best Mobiles in India

English summary
Xiaomi Pad 7 Tablet Now Available for Purchase in India via Amazon: Price, Offer, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+