ಹೊಸ Xiaomi Pad 7 ಟ್ಯಾಬ್ ಲಾಂಚ್; 11.2 ಇಂಚಿನ ಡಿಸ್ಪ್ಲೇ.. 8850mAh ಬಿಗ್ ಬ್ಯಾಟರಿ.. ಕಡಿಮೆ ಬೆಲೆ!
ಶಿಯೋಮಿ ಭಾರತದಲ್ಲಿ ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಈ ಮೂಲಕ ಟ್ಯಾಬ್ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಹೌದು, ಕಂಪನಿಯು ತನ್ನ ಶಿಯೋಮಿ ಪ್ಯಾಡ್ 7 (Xiaomi Pad 7) ಟ್ಯಾಬ್ಲೆಟ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಕಳೆದ ಅಕ್ಟೋಬರ್‌ನಲ್ಲಿ Xiaomi Pad 7 Pro ಜೊತೆಗೆ ಮೊದಲ ಬಾರಿಗೆ ಈ ಟ್ಯಾಬ್ಲೆಟ್ ಚೀನಾದಲ್ಲಿ ರಿಲೀಸ್ ಆಗಿತ್ತು. ಇದೀಗ, ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಬನ್ನಿ, ಈ ಹೊಸ ಟ್ಯಾಬ್‌ನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಂಪನಿಯು ಶಿಯೋಮಿ ಪ್ಯಾಡ್ 7 ಅನ್ನು Xiaomi Pad 6 ಟ್ಯಾಬ್‌ನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಮಧ್ಯಮ ಶ್ರೇಣಿಯ ಟ್ಯಾಬ್ಲೆಟ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿದೆ. ಈ ಟ್ಯಾಬ್ಲೆಟ್ 8850mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದರಲ್ಲಿ 11.2 ಇಂಚಿನ ದೊಡ್ಡ ಡಿಸ್ಪ್ಲೇ ಲಭ್ಯವಿದೆ. ಈ ಟ್ಯಾಬ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಟ್ಯಾಬ್‌ನ ಬೆಲೆ ತಿಳಿಯಲು ಮುಂದೆ ಓದಿ.

ಶಿಯೋಮಿ ಪ್ಯಾಡ್ 7 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಶಿಯೋಮಿ ಪ್ಯಾಡ್ 7 ಟ್ಯಾಬ್ 11.2 ಇಂಚಿನ 3.2K ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 3200 x 2136 ಪಿಕ್ಸೆಲ್ ರೆಸಲ್ಯೂಶ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಡಾಲ್ಬಿ ವಿಷನ್ ಬೆಂಬಲ ಹೊಂದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 7+ ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 15 ಆಧಾರಿತ ಹೈಪರ್ ಓಎಸ್ 2.0 ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ ಅಡ್ರಿನೊ 732 ಜಿಪಿಯು ಸಹ ಹೊಂದಿದೆ. ಈ ಟ್ಯಾಬ್ 8GB, 12GB RAM ಜೊತೆಗೆ 128GB, 256GB ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಶಿಯೋಮಿ ಪ್ಯಾಡ್ 7 ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಲಭ್ಯದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ 8,850mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಬೆಲೆ
ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಚೀನಾದಲ್ಲಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಟ್ಯಾಬ್‌ನ 8GB + 128GB ಸ್ಟೋರೇಜ್ ರೂಪಾಂತರವನ್ನು 27,999 ರೂ.ಗೆ ಪರಿಚಯಿಸಲಾಗಿದೆ. 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 30,999 ರೂ. ಇದೆ. ಹಾಗೆಯೇ 12GB + 256GB ಸ್ಟೋರೇಜ್ ಆಯ್ಕೆಯು 32,999. ರೂ.ಗೆ ಬಿಡುಗಡೆಯಾಗಿದೆ.
ಶಿಯೋಮಿ ಪ್ಯಾಡ್ 7 ಟ್ಯಾಬ್ಲೆಟ್ ಗ್ರ್ಯಾಫೈಟ್ ಗ್ರೇ, ಮಿರಾಜ್ ಪರ್ಪಲ್ ಮತ್ತು ಸೇಜ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 1000 ರಿಯಾಯಿತಿ ನೀಡುತ್ತದೆ. ಜೊತೆಗೆ 6 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ಸಿಗುತ್ತದೆ. ಈ ಟ್ಯಾಬ್ ಜನವರಿ 13 ರಿಂದ ಅಮೆಜಾನ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಶಿಯೋಮಿ ರಿಟೇಲ್ ಸ್ಟೋರ್‌ಗಳ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.


Click it and Unblock the Notifications








