Year Ender 2024: 2024ರಲ್ಲಿ ಬಿಡುಗಡೆಯಾದ ಅದ್ಭುತ ಟ್ಯಾಬ್‌ಗಳಿವು! ನಂ.1 ಯಾವುದು? ಇಲ್ಲಿದೆ ಪಟ್ಟಿ
Year Ender 2024: ಪ್ರತಿವರ್ಷದಂತೆ ಈ ವರ್ಷವೂ ಸಹ ಮಾರುಕಟ್ಟೆಯಲ್ಲಿ ಹೊಸ ಟ್ಯಾಬ್ಲೆಟ್‌ಗಳು (Tablets) ಸದ್ದು ಮಾಡಿವೆ. ಒನ್‌ಪ್ಲಸ್, ಆಪಲ್, ಪೊಕೊ, ರೆಡ್ಮಿ ಸೇರಿದಂತೆ ದೈತ್ಯ ಟೆಕ್ ಕಂಪನಿಗಳು ಹಲವು ಅದ್ಭುತ ಟ್ಯಾಬ್ಲೆಟ್‌ಗಳನ್ನು 2024 ರಲ್ಲಿ (Best Tablets of 2024) ಬಿಡುಗಡೆ ಮಾಡಿವೆ. ಈ ಟ್ಯಾಬ್‌ಗಳಲ್ಲಿ ನಾನಾ ಬಗೆಯ ಹೊಸ ಆವಿಷ್ಕಾರಗಳನ್ನು ಕಾಣಬಹುದು. ಇವುಗಳು ಹೊಸ ಪ್ರೊಸೆಸರ್, ಬೊಂಬಾಟ್ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯನ್ನು ಹೊಂದಿವೆ.
ನಾವು ಈ ಲೇಖನದಲ್ಲಿ 20,000 ರೂ. ನಿಂದ 1 ಲಕ್ಷ ರೂ. ವರೆಗೆ ಲಭ್ಯವಿರುವ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಿಳಿಸಿದ್ದೇವೆ. ನೀವು, ಮಧ್ಯಮ ಶ್ರೇಣಿಯಿಂದ ಪ್ರೀಮಿಯಂ ಟ್ಯಾಬ್ಲೆಟ್‌ಗಳನ್ನು ಹುಡುಕುತ್ತಿದ್ದರೆ, ಈ ಪಟ್ಟಿಯು ನಿಮಗೆ ಉಪಯುಕ್ತವಾಗಬಹುದು. ಹಾಗಿದ್ರೆ, 2024 ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಟ್ಯಾಬ್ಲೆಟ್‌ಗಳ ಪಟ್ಟಿ, ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ ಬನ್ನಿ.

2024 ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಟ್ಯಾಬ್ಲೆಟ್‌ಗಳಿವು!
ಒನ್‌ಪ್ಲಸ್ ಪ್ಯಾಡ್ 2
ಒನ್‌ಪ್ಲಸ್ ಪ್ಯಾಡ್ 2 (OnePlus Pad 2) 12.1 ಇಂಚಿನ 3K ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 144Hz ರಿಫ್ರೆಶ್ ದರ ಮತ್ತು 900 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಟ್ಯಾಬ್ ಸ್ಮಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಒನ್‌ಪ್ಲಸ್ ಪ್ಯಾಡ್ 2 ಟ್ಯಾಬ್ 9510mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ ಫೈ 7, ಬ್ಲೂಟೂತ್ 5.4 ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸಹ ಹೊಂದಿದೆ. ನೀವು, ಟ್ಯಾಬ್‌ನ 8GB + 128GB ಸ್ಟೋರೇಜ್ ರೂಪಾಂತರವನ್ನು 39,999 ರೂ.ಗೆ ಖರೀದಿಸಬಹುದು.

ಆಪಲ್ ಐಪ್ಯಾಡ್ ಮಿನಿ 7
ಆಪಲ್ ಐಪ್ಯಾಡ್ ಮಿನಿ 7 (Apple iPad Mini 7) ಟ್ಯಾಬ್ 8.3 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ. ಇದು A17 ಪ್ರೊ ಪ್ರೊಸೆಸರ್ ಹೊಂದಿದೆ.ಇದನ್ನು iPhone 15 ನಲ್ಲಿಯೂ ಬಳಸಲಾಗಿದೆ. ಇದು iPadOS ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ಸುಧಾರಿತ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಟ್ರೂ ಟೋನ್ ಮತ್ತು P3 ವೈಡ್ ಕಲರ್ ಬೆಂಬಲಿಸುತ್ತದೆ.
ಈ ಟ್ಯಾಬ್ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 290 ಗ್ರಾಂ ತೂಕದ ಈ ಟ್ಯಾಬ್ ವೈ-ಫೈ 6e, ಬ್ಲೂಟೂತ್ 5.3 ಮತ್ತು 5G ಬೆಂಬಲವನ್ನು ಸೆಲ್ಯುಲಾರ್ ರೂಪಾಂತರಗಳಲ್ಲಿ ಹೊಂದಿದೆ. ಈ ಮಿನಿ ಟ್ಯಾಬ್ ಟಚ್ ಐಡಿ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಈ ಆಪಲ್ ಐಪ್ಯಾಡ್ ಮಿನಿ 7 ಟ್ಯಾಬ್ 49,900 ರೂ. ಆರಂಭಿಕ ಬೆಲೆ ಮತ್ತು ಟಾಪ್ ವೇರಿಯಂಟ್ ಬೆಲೆ 94,900 ರೂ. ಇದೆ.
ಪೊಕೊ ಪ್ಯಾಡ್ 5G
ಪೊಕೊ ಪ್ಯಾಡ್ 5G (Poco Pad 5G) 12.1 ಇಂಚಿನ 1.5K ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ ಬೆಂಬಲ ಪಡೆದಿದೆ. ಈ ಟ್ಯಾಬ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಇದು 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಟ್ಯಾಬ್ 10,000mAh ಸಾಮರ್ಥ್ಯದ ಬ್ಯಾಟರಿ, 33W ವೇಗದ ಚಾರ್ಜಿಂಗ್, ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್ ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ನೀವು ಪೊಕೊ ಪ್ಯಾಡ್ 5G ಟ್ಯಾಬ್‌ನ 8GB + 128GB ಸ್ಟೋರೇಜ್ ರೂಪಾಂತರವನ್ನು 23,999 ರೂ.ಗೆ ಮತ್ತು 8GB + 256GB ರೂಪಾಂತರವನ್ನು 25,999 ರೂ.ಗೆ ಖರೀದಿಸಬಹುದು.
ರೆಡ್ಮಿ ಪ್ಯಾಡ್ ಪ್ರೊ 5G
ರೆಡ್ಮಿ ಪ್ಯಾಡ್ ಪ್ರೊ 5G (Redmi Pad Pro 5G) ಟ್ಯಾಬ್ 12.1 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಟ್ಯಾಬ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಟ್ಯಾಬ್‌ನಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಕಂಪನಿಯು 10,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ನೀವು ರೆಡ್ಮಿ ಪ್ಯಾಡ್ ಪ್ರೊ 5G ಅನ್ನು 21,999 ರೂ.ಗೆ ಖರೀದಿಸಬಹುದು.


Click it and Unblock the Notifications








