ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವುದು ಹೇಗೆ? ಉಪಯೋಗಗಳೇನು?

ಪೇಮೆಂಟ್ ಬ್ಯಾಂಕ್ ಗ್ರಾಹಕರುಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಬಹುದಾಗಿದ್ದು, ಗರಿಷ್ಟ 1 ಲಕ್ಷ ಠೇವಣಿ ಇಡಬಹುದು.

Written By:

ಇತ್ತೀಚಿಗಷ್ಟೆ RBI ನಿಂದ ಪೇಮೆಂಟ್ ಬ್ಯಾಂಕ್ ಲೈಸೆನ್ಸ್ ಪಡೆದ 11 ಕಂಪೆನಿಗಳಲ್ಲಿ ಟೆಲಿಕಾಂ ದಿಗ್ಗಜ ಏರ್‌ಟೆಲ್‌ ದೇಶದಲ್ಲಿಯೇ ಮೊದಲ ಪೇಮೆಂಟ್ ಬ್ಯಾಂಕ್ ತೆರೆದಿದೆ. ಈ ಮೂಲಕ ಬ್ಯಾಂಕಿಗ್ ಕ್ಷೇತ್ರದ ಮತ್ತೊಂದು ಮಗ್ಗುಲಿಗೆ ಏರ್‌ಟೆಲ್‌ ಕಾಲಿಟ್ಟಿದೆ.

ಹಾಗಾದರೆ ಈ ಪೇಮೆಂಟ್ ಬ್ಯಾಂಕ್ ಎಂದರೆ ಏನು? ಎಂದರೆ, ಹಣಪಾವತಿ ಸೇವೆಗಳಿಗೆ ಸೀಮಿತ ಪ್ರಮಾಣದಲ್ಲಿ ಬ್ಯಾಂಕಿಂಗ್ ಕಾರ್ಯ ನಡೆಸುವುದನ್ನು ಪೇಮೆಂಟ್ ಬ್ಯಾಂಕ್ ಎನ್ನಬಹುದು. ಇಲ್ಲಿ ಗ್ರಾಹಕರು ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಬಹುದಾಗಿದ್ದು, ಗರಿಷ್ಟ 1 ಲಕ್ಷ ರೂ.ಠೇವಣಿ ಇಡಬಹುದು.

ಸೆಕೆಂಡ್ಸ್‌ನಲ್ಲಿ ಮೊಬೈಲ್ ಬ್ಯಾಟರಿ ಫುಲ್: ವಿಸ್ಮಯಗೊಳಿಸುವ ಟೆಕ್ನಾಲಜಿ ಯಾವುದು ಗೊತ್ತಾ?

ಟೆಲಿಕಾಂನಲ್ಲಿ ಉತ್ತಮ ಸೇವೆಗಳನ್ನು ನಿಡುತ್ತಿರುವ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕವೂ ಉತ್ತಮ ಸೌಲಭ್ಯವನ್ನು ನೀಡುವ ಭರವಸೆ ಇದ್ದು, ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆಯುವುದು ಹೇಗೆ? ಮತ್ತು ಅದರೆ ಉಪಯೋಗಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಅಕೌಂಟ್

ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆಯಬಹುದು. ನೀವು ಏರ್‌ಟೆಲ್ ಸಿಮ್‌ ಹೊಂದಿಲ್ಲದೆ ಇದ್ದರೂ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್ ಅಕೌಂಟ್ ಹೊಂದಬಹುದು.

ಅಕೌಂಟ್ ತೆರೆಯುವುದು ಹೇಗೆ?

ಏರ್‌ಟೆಲ್ ಎಲ್ಲೆಡೆ ತನ್ನ ಪೇಮೆಂಟ್ ಬ್ಯಾಂಕ್ ಕಛೇರಿಗಳನ್ನು ತೆರೆಯಲಿದ್ದು, ನಿಮ್ಮ ಹತ್ತಿರದ ಕಛೇರಿಯಲ್ಲಿ ಕೆಲವೇ ನಿಮಿಷಗಳಲ್ಲಿ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆಯಬಹುದು. ನಿಮ್ಮ ಭಾವಚಿತ್ರದ ಸಾಫ್ಟ್‌ಕಾಪಿ ಮತ್ತು ನಿಮ್ಮ ಆಧಾರ್ ಇರುವುದು ಕಡ್ಡಾಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೆಬಿಟ್ ಕಾರ್ಡ್ ಸೌಲಭ್ಯ

ಪೇಮೆಂಟ್ ಬ್ಯಾಂಕ್ ನಲ್ಲಿ ಮೊಬೈಲ್ ಬ್ಯಾಕಿಂಗ್ ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಸೌಲಭ್ಯವಿರುತ್ತದೆ. ಆದರೆ ಸಾಲ ಸೌಲಭ್ಯವಿರುವುದಿಲ್ಲ.

ಓಂದೇ ಆಪ್‌ನಲ್ಲಿ ಎಲ್ಲಾ!

ಬ್ಯಾಂಕಿಂಗ್ ಕ್ಷೇತ್ರ ಡಿಜಿಟಲ್‌ಗೆ ತೆರೆದನಂತರ ಎಲ್ಲಾ ಸೇವೆಗಳೂ ಇಂದು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. ಇನ್ನು ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಎಲ್ಲಾ ವ್ಯವಹಾರ ಏರ್‌ಟೆಲ್ ಆಪ್‌ನಲ್ಲಿಯೇ ನಡೆಯುತ್ತದೆ.

ನಿಮ್ಮ ಹಣಕ್ಕೆ ಬಡ್ಡಿ ಎಷ್ಟು?

ಪೇಮೆಂಟ್ ಬ್ಯಾಂಕ್‌ಗಳ ಉದ್ದೇಶವೆ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ನೀಡುವುದು. ಹಾಗಾಗಿ ನೀವು ಠೇವಣಿ ಇಟ್ಟ ಹಣಕ್ಕೆ ವಾರ್ಷಿಕ 7.5 ರಷ್ಟು ಬಡ್ಡಿ ಹಣ ನಿಮಗೆ ದೊರೆಯುತ್ತದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Here's everything you need to know about Airtel's Payments Bank and its services in 5 simple points. to know more visit to kannada.gizbot.com
Please Wait while comments are loading...
Opinion Poll

Social Counting