2 ಶತಕೋಟಿ ತಲುಪಿದ ಫೇಸ್‌ಬುಕ್ ಬಳಕೆದಾರರ ಸಂಖ್ಯೆ...!

2016ರ ವರ್ಷಾಂತ್ಯಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಶೇ.10 ರಷ್ಟು ಏರಿಕೆಯಾಗಿದ್ದು, ಇದೀಗ ಸದ್ಯ ಫೇಸ್‌ಬುಲ್ ಬಳಕೆದಾರರ ಸಂಖ್ಯೆ 2 ಶತಕೋಟಿಗೇರಿದೆ ಎನ್ನಲಾಗಿದೆ.

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಹಿರಿಮೆಗೆ ಮತ್ತೊಂದು ಗರಿ ಸೇರಿಸಿಕೊಂಡಿದೆ. ಸದ್ಯ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 2 ಶತಕೋಟಿ ಶತಕೋಟಿ ತಲುಪಿದ್ದು, ಈ ಮೂಲಕ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ಯಾರು ಮುಟ್ಟಲಾಗದ ಸಂಖ್ಯೆಯನ್ನು ಫೇಸ್‌ಬುಕ್ ತಲುಪಿದೆ.

2 ಶತಕೋಟಿ ತಲುಪಿದ ಫೇಸ್‌ಬುಕ್ ಬಳಕೆದಾರರ ಸಂಖ್ಯೆ...!

ಓದಿರಿ: 39 ರೂಗಳಿಗೆ 1GB ಡೇಟಾ ನೀಡಿದ್ದ ಬಿಎಸ್ಎನ್‌ಎಲ್ ನಿಂದ ಮತ್ತೊಂದು ಭರ್ಜರಿ ಕೊಡುಗೆ..!

ಈ ಕುರಿತು ಮಾಹಿತಿ ನೀಡಿರುವ ಫೇಸ್‌ಬುಕ್ ತ್ರೈಮಾಸಿಕ ವರದಿಯನ್ವಯ 2016ರ ವರ್ಷಾಂತ್ಯಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಶೇ.10 ರಷ್ಟು ಏರಿಕೆಯಾಗಿದ್ದು, ಇದೀಗ ಸದ್ಯ ಫೇಸ್‌ಬುಲ್ ಬಳಕೆದಾರರ ಸಂಖ್ಯೆ 2 ಶತಕೋಟಿಗೇರಿದೆ ಎನ್ನಲಾಗಿದೆ.

ಫೇಸ್‌ಬುಕ್ ಸ್ಮಾರ್ಟ್‌ಪೋನಿನಲ್ಲಿ ಬಳಸುವ ಆಪ್‌ ಬಳಕೆ ಹೆಚ್ಚಾದ ಹಿನ್ನಲೆಯಲ್ಲಿ ಈ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಿದ್ದು, ಅದರಲ್ಲೂ ಭಾರತದಂತಹ ಅತೀದೊಡ್ಡ ಜನಸಂಖ್ಯಾ ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿರುವ ಕಾರಣ ಫೇಸ್‌ಬುಕ್‌ಗೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳು ಸಾಧ್ಯವಾಗಿದೆ.

2 ಶತಕೋಟಿ ತಲುಪಿದ ಫೇಸ್‌ಬುಕ್ ಬಳಕೆದಾರರ ಸಂಖ್ಯೆ...!

ಓದಿರಿ: ಕೇವಲ ರೂ. 3,333 ಕ್ಕೆ ಲಾವಾ 4G ಪೋನು: ಹೇಗಿದೆ ಈ ಪೋನು..? ವಿಶೇಷತೆಗಳೇನು..?

ಅದರಲ್ಲೂ ಭಾರತದಲ್ಲಿ ಜಿಯೋ ಉಚಿತ ಸೇವೆಯನ್ನು ನೀಡಲು ಮುಂದಾದ ನಂತರದಲ್ಲಿ ಫೇಸ್‌ಬುಕ್ ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಸ್ಮಾರ್ಟ್‌ಪೋನ್‌ಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಲೇ ಸಾಗಿದೆ.

ತನ್ನ ಬಳಕೆದಾರು ಹೆಚ್ಚಿದಂತೆ ಫೇಸ್‌ಬುಕ್ ಆದಾಯವೂ ಅಧಿಕವಾಗುತ್ತಲೇ ಸಾಗುತ್ತಿದ್ದು, ಫೇಸ್‌ಬುಕ್ ಅಮೆರಿಕವೊಂದರಲ್ಲೇ ಅತೀ ಹೆಚ್ಚಿನ ಆದಾಯವನ್ನು ಹೊಂದಿದ್ದು, ಅಲ್ಲಿ ಪ್ರತಿಯೊಬ್ಬ ಬಳಕೆದಾರನಿಂದಲೂ ಸುಮಾರು 20 ಡಾಲರ್ ಆದಾಯ ಫೇಸ್‌ಬುಕ್ಕಿದೆ. ಅದಲ್ಲದೇ ಇನ್ನು ಮುಂದೆ ವಿಡಿಯೋ ನಡುವೆ ಜಾಹಿರಾತು ಸೇರಿಸುವ ಪ್ರಕ್ರಿಯೇ ಸಹ ಜಾರಿಯಲ್ಲಿದ್ದು, ಇದರಿಂದ ಫೇಸ್‌ಬುಕ್ ಆದಾಯ ಮತ್ತಷ್ಟು ಏರಿಕೆಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Popular social network Facebook is set to become the first 2 billion-user company this year, according to a media report. to know more visit kannada.gizbot.com
Please Wait while comments are loading...
Opinion Poll

Social Counting