ಕೇವಲ 10 ನಿಮಿಷದಲ್ಲಿ ಉಚಿತವಾಗಿ ಇ-ಪ್ಯಾನ್‌ ಕಾರ್ಡ್‌ ಪಡೆಯಬಹುದು!..ಹೇಗೆ ಗೊತ್ತಾ?


ಆಧಾರ್‌ ಕಾರ್ಡ್‌ನ ಮಾಹಿತಿ ನೀಡಿ ಆನ್‌ಲೈನ್‌ ಮೂಲಕ ಪ್ಯಾನ್‌ ನಂಬರ್ ಪಡೆಯುವ ಸೇವೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದ್ದಾರೆ. ಆನ್‌ಲೈನ್‌ ಮೂಲಕ ಪ್ಯಾನ್‌ ಪಡೆಯುವ ಈ ಪ್ರಕ್ರಿಯೆಯು ಉಚಿತವಾಗಿದ್ದು, ಈ ಸೇವೆಯಿಂದ ಜನರು ತ್ವರಿತವಾಗಿ ಇ-ಪ್ಯಾನ್‌ ಕಾರ್ಡ್‌ ಪಡೆದುಕೊಳ್ಳಬಹುದಾಗಿದೆ.

Advertisement

ಹೌದು, ಕೇಂದ್ರ ಬಜೆಟ್ ಮಂಡನೆಯಲ್ಲಿ ಪ್ಯಾನ್‌ ನೀಡುವ ಪ್ರಕ್ರಿಯೆಯನ್ನು ಬದಲಾವಣೆ ತರುವ ಬಗ್ಗೆ ಕ್ರೇಂದ್ರ ಬಜೆಟ್ 2020-21ರ ಮಂಡನೆಯಲ್ಲಿ ವಿತ್ತ ಸಚಿವರು ತಿಳಿಸಿದ್ದರು. ಆ ನಿಟ್ಟಿನಲ್ಲಿ ಈಗ ಆನ್‌ಲೈನ್‌ ಮೂಲಕ ಪ್ಯಾನ್ ನಂಬರ್ ಪಡೆಯುವ ಸೇವೆಯನ್ನು ಶುರುಮಾಡಿದ್ದಾರೆ. ಹೀಗಾಗಿ ಆಧಾರ್‌ ಕಾರ್ಡ್ ಇದ್ದರೆ ಇನ್ನು ಪ್ಯಾನ್ ಕಾರ್ಡ್‌ ಪಡೆಯುವುದು ಅತೀ ಸರಳವಾಗಿದೆ. ಹಾಗೆಯೇ ಇದು ತೆರೆಗೆ ಪಾವತಿದಾರರಿಗೂ ಅನುಕೂಲಕರವಾಗಲಿದೆ.

Advertisement

ಆಧಾರ್‌ ಕಾರ್ಡ್‌ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆ OTP ಲಭ್ಯವಾಗುತ್ತದೆ. OTP ನಮೂದಿಸಿದ ನಂತರ ಸುಮಾರು 10 ನಿಮಿಷಗಳಲ್ಲಿ ಇ-ಪ್ಯಾನ್‌ ದೊರೆಯುತ್ತದೆ. ಆಧಾರ್‌ ಕಾರ್ಡ್‌ನಲ್ಲಿ ನೋಂದಾಯಿಸಿರುವ ಇ-ಮೇಲ್‌ಗೂ ಸಹ ಇ-ಪ್ಯಾನ್‌ ಕಾರ್ಡ್‌ ರವಾನೆಯಾಗುತ್ತದೆ. ಇನ್ನು ಇ-ಪ್ಯಾನ್‌ ಕಾರ್ಡ್‌ ಅನ್ನು ಅರ್ಜಿದಾರರು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ಆನ್‌ಲೈನ್‌ನಲ್ಲಿ ಇ-ಪ್ಯಾನ್‌ ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಇ-ಪ್ಯಾನ್ ಪಡೆಯುವುದು ಹೇಗೆ

* ಬಳಕೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡುವುದು.

* ಅಲ್ಲಿ ಆಧಾರ್ ಕಾರ್ಡ್‌ ನಂಬರ್ ನಮೂದಿಸುವುದು.

* ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಿರುವ ರಿಜಿಸ್ಟರ್ ಮೊಬೈಲ್ ನಂಬರ್‌ಗೆ ಓಟಿಪಿ ಬರುತ್ತದೆ.

* ಆ ಓಟಿಪಿಯನ್ನು ನಮೂದಿಸುವುದು.

* ನಂತರ ಇ-ಪ್ಯಾನ್ ಕಾರ್ಡ್ ಕಾಣಿಸುತ್ತದೆ.

* ಬಳಕೆದಾರರು ಇ-ಪ್ಯಾನ್ ಕಾರ್ಡ್‌ ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಇ-ಪ್ಯಾನ್ ಕಾರ್ಡ್‌ ಪ್ರಯೋಜನ

ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್‌ ಪಡೆಯಲು ಅಪ್ಲಿಕೇಶನ್ ಫಾರ್ಮ್ ತುಂಬುವ ರಗಳೆ ಇರುವುದಿಲ್ಲ. ಬಳಕೆದಾರರು ಅರ್ಜಿಯನ್ನು ತೆರೆಗೆ ಇಲಾಖೆಗೆ ಅಲ್ಲಿಸುವ ಅಗತ್ಯವು ಇರಲ್ಲ. ಹಾಗೆಯೆ ತೆರೆಗೆ ಇಲಾಖೆ ಪ್ಯಾನ್‌ ಕಾರ್ಡ್‌ ಅನ್ನು ತೆರಿಗೆ ಪಾವತಿದಾರರ ಮನೆ ವಿಳಾಸಕ್ಕೆ ತಲುಪಿಸುವ ಪ್ರಮೇಯವು ಇರಲ್ಲ. ಆನ್‌ಲೈನ್‌ ಮೂಲಕ ಉಚಿತವಾಗಿ ಮತ್ತು ತ್ವರಿತವಾಗಿ ಪ್ಯಾನ್‌ ಪಡೆಯಬಹುದು.

Best Mobiles in India

English Summary

PAN Card: Now get instant PAN card through Aadhaar based e-KYC – Here’s how to apply online.