ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರ ನೆರವಿಗಿದೆ ಸುರಕ್ಷಾ ಆಪ್‌!.ಆಪ್ ಹೀಗೆ ಬಳಸಿ!


ಮಹಿಳೆಯರ ಸುರಕ್ಷತೆಗಾಗಿ ರಾಜ್ಯದಲ್ಲಿ 2017ರಲ್ಲಿ 'ಸುರಕ್ಷಾ ಆಪ್‌' ಅನ್ನು ಪರಿಚಯಿಸಲಾಗಿದ್ದು, ಈ ಆಪ್‌ ಈಗಾಗಲೇ ಸುಮಾರು 1 ಲಕ್ಷ ಡೌನ್‌ಲೋಡ್ ಕಂಡಿದೆ. ಇತ್ತೀಚಿಗೆ ಹೈದ್ರಾಬಾದ್ ನಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಘಟನೆ ನಂತರ ರಾಜ್ಯ ಪೊಲೀಸ್ ಇಲಾಖೆ ಹೈಅಲರ್ಟ್ ಆಗಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಸುರಕ್ಷತಎಗಾಗಿ ಬೆಂಗಳೂರು ಪೊಲೀಸ್‌ ಕಮಿಷನರ್ ಭಾಸ್ಕರ ರಾವ್ ಮಹಿಳೆಯರಿಗೆ 'ಸುರಕ್ಷಾ ಆಪ್‌' ಬಳಸಲು ಸೂಚನೆ ನೀಡಿದ್ದಾರೆ.

ಸದ್ಯ, ಸುರಕ್ಷಾ ಆಪ್ ಡೌನ್‌ಲೋಡ್ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಮತ್ತೆ 40 ಸಾವಿರ ಡೌನ್‌ಲೋಡ್ ಕಂಡಿದೆ. ಆದರೆ ಇನ್ನು ಅನೇಕ ಮಹಿಳೆಯರಿಗೆ ಈ ಆಪ್‌ ಬಗ್ಗೆ ಮಾಹಿತಿ ತಿಳಿದಿಲ್ಲ. ಆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಮಹಿಳೆಯು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ, ಸುರಕ್ಷಾ ಆಪ್‌ ಬಳಕೆ ಮಾಡಿದರೇ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಹಾಯ ಮಾಡುತ್ತಾರೆ. ಇನ್ನು ಸುರಕ್ಷಾ ಆಪ್ ಬಳಕೆ ಮಾಡುವುದು ಹೇಗೆ?..ಆಪ್‌ನಲ್ಲಿ ಏನೆಲ್ಲಾ ಮಾಹಿತಿ ಭರ್ತಿ ಮಾಡಬೇಕು ಎನ್ನುವ ಬಗ್ಗೆ ಕೆಲವು ಅಂಶಗಳ ಬಗ್ಗೆ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಸುರಕ್ಷಾ ಆಪ್‌ ಹೇಗೆ ಕೆಲಸ ಮಾಡುತ್ತದೆ

ಮಹಿಳೆಯರು ತುರ್ತು ಪರಿಸ್ಥಿತಿಯಲ್ಲಿದ್ದಾಗ ಸುರಕ್ಷಾ ಆಪ್ ನೆರವಿನಿಂದ ತ್ವರಿತವಾಗಿ ಪೊಲೀಸ್‌ರ ಸಹಾಯ ಪಡೆಯಬಹುದಾಗಿದೆ. ಈ ಆಪ್‌ನಲ್ಲಿ ಮಹಿಳೆಯರು ರೆಡ್ ಬಟನ್ ಪ್ರೆಸ್ ಮಾಡಿದರೇ ತಕ್ಷಣಕ್ಕೆ ಅಲ್ಲಿಯ ಮಾಹಿತಿ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಜೊತೆಗೆ ಆ ಸ್ಥಳದ 10 ಸೆಕೆಂಡ್‌ನ ಲೈವ್ ವಿಡಿಯೊ ಸಹ ತಲುಪುವುದು. ಇದರೊಂದಿಗೆ ಮಹಿಳೆಯ ಇಬ್ಬರು ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ತುರ್ತು ಪರಿಸ್ಥಿತಿ ಇರುವ ಬಗ್ಗೆ ಸಂದೇಶ ಹೋಗುತ್ತದೆ. ಆಗ ಫೋನ್ ಜಿಪಿಎಸ್‌ ಆಧಾರದ ಮೇಲೆ ಸ್ಥಳಕ್ಕೆ ಪೊಲೀಸರು ಬರುತ್ತಾರೆ. ಪೊಲೀಸ ಸಹಾಯವಾಣಿ 100 ಕರೆ ಗಿಂತ ವೇಗವಾಗಿ ಸುರಕ್ಷಾ ಆಪ್ ಕೆಲಸ ಮಾಡುತ್ತದೆ.

ಸುರಕ್ಷಾ ಆಪ್ ಬಳಕೆ ಹೇಗೆ

* ತುರ್ತು ಪರಿಸ್ಥಿತಿಯಲ್ಲಿದ್ದಾಗ ಸುರಕ್ಷಾ ಆಪ್‌ ತೆರೆಯುವುದು

* ಪೊಲೀಸರ ಸಹಾಯ ಪಡೆಯಲು ಆಪ್‌ನಲ್ಲಿನ ರೆಡ್‌ ಬಟನ್‌ ಅನ್ನು 5 ಬಾರಿ ಒತ್ತುವುದು

* ಆಗ ಅಲ್ಲಿನ ಪರಿಸ್ಥಿಯ ಬಗ್ಗೆ 10 ಸೆಕೆಂಡುಗಳ ಲೈವ್ ವಿಡಿಯೊ ಮಾಹಿತಿ ಪೊಲೀಸರಿಗೆ ತಲುಪುವುದು.

* ಹಾಗೆಯೇ ಮಹಿಳೆಯ ಇಬ್ಬರು ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ತಲುಪುವುದು.

* ಸುಮಾರು 9 ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಬರುತ್ತಾರೆ.

ಆಪ್ ಡೌನ್‌ಲೋಡ್ ಮಾಡಿಕೊಳ್ಳಿ

ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರ ನೆರವಿಗೆ ಸುರಕ್ಷಾ ಆಪ್ ಅನುಕೂಲವಾಗಿದ್ದು, ಅವಶ್ಯವಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Suraksha app ಉಚಿತವಾಗಿ ಲಭ್ಯವಿದೆ. ಆಪ್ ಇನ್​ಸ್ಟಾಲ್ ಆದ ಬಳಿಕ ನೋಂದಣಿಗೆ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ತುರ್ತು ಸಂದರ್ಭದಲ್ಲಿ ನಿಮಗೆ ತಕ್ಷಣ ಸ್ಪಂದಿಸುವ ಕೆಲ ವ್ಯಕ್ತಿಗಳ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಬಳಿಕವಷ್ಟೇ ಈ ಆಪ್ ಸೇವೆ ಲಭ್ಯವಾಗಲಿದೆ.

Most Read Articles
Best Mobiles in India
Read More About: App how to google women

Have a great day!
Read more...

English Summary

The police will track the person with the help of GPS in not more than nine minutes. to know more visit to kannada.gizbot.com