ಕನ್ನಡದಲ್ಲಿಯೇ ಮೀಮ್ ತಯಾರಿಸುವುದು ಹೇಗೆ?
ಫೋಟೊಗಳ ಮೇಲೆ ಅಥವಾ ಕಲಾಚಿತ್ರಗಳ ಮೇಲೆ ಅಥವಾ ಕೆಳಗೆ ವಿಚಿತ್ರ ವಾಕ್ಯಗಳನ್ನು ಅಥವಾ ಉಕ್ತಿಗಳನ್ನು ಬರೆದು ಹಂಚುವುದನ್ನು ಮೀಮ್ ಎನ್ನುತ್ತಾರೆ.!!
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಆಪ್, ಟ್ವಿಟರ್ಗಳಲ್ಲಿ ಹೆಚ್ಚು ಮೀಮ್ಗಳು ಹರಿದಾಡುತ್ತಿವೆ. ಇದು ಈಗಿನ ಟ್ರೆಂಡ್ ಕೂಡ ಆಗಿದೆ.! ಅಯ್ಯೋ ಮೊದಲು ಮೀಮ್ ಎಂದರೆ ಏನು ಎನ್ನುತ್ತೀರಾ ಎಂದರೆ, ಫೋಟೊಗಳ ಮೇಲೆ ಅಥವಾ ಕಲಾಚಿತ್ರಗಳ ಮೇಲೆ ಅಥವಾ ಕೆಳಗೆ ವಿಚಿತ್ರ ವಾಕ್ಯಗಳನ್ನು ಅಥವಾ ಉಕ್ತಿಗಳನ್ನು ಬರೆದು ಹಂಚುವುದನ್ನು ಮೀಮ್ ಎನ್ನುತ್ತಾರೆ.!!
ನೀವು ನೋಡಬಹುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಹುತೇಕ ಕನ್ನಡ ಮೀಮ್ಗಳು ಕನ್ನಡ ಪಠ್ಯವನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆದಿರುತ್ತವೆ.! ಇವುಗಳನ್ನು ನಾವು ಕಂಗ್ಲಿಷ್ ಮೀಮ್ಗಳು ಎಂದು ಕರೆಯಬಹುದೇನೊ?!! ಆದರೆ, ಕನ್ನಡ ಲಿಪಿಯಲ್ಲಿಯೇ ಇಂತಹ ಮೀಮ್ಗಳನ್ನು ತಯಾರಿಸಿದರೆ ಎಷ್ಟು ಚೆನ್ನಾಗಿರುತ್ತದೆ.? ಅಲ್ಲವೇ?

ಹಾಗಾಗಿಯೇ, ಕನ್ನಡದಲ್ಲೇ ಮೀಮ್ ತಯಾರಿಸುವ ಆಪ್ ಕೂಡ ಲಭ್ಯವಿದೆ.! ಹೌದು, ಈ ಆಪ್ ಮೂಲಕ ಕನ್ನಡ ಅಕ್ಷರದಲ್ಲಿಯೇ ಮೀಮ್ ತಯಾರಿಸುವುದಲ್ಲದೇ ಅದನ್ನು ಯಾವ ರೀತಿಯಾದರೂ ಎಡಿಟ್ ಮಾಡುವ ಅವಕಾಶ ಲಭ್ಯವಿದೆ.!! ಈ ಆಪ್ ಮತ್ತೊಂದು ವಿಶೇಷ ಎಂದರೆ ಇದರಲ್ಲಿ ಕನ್ನಡ ಯುನಿಕೋಡ್ನಲ್ಲೇ ಪದ ಸೇರಿಸಬಹುದು.!!

ಗೂಗಲ್ ಪ್ಲೇ ಸ್ಟೋರಿನಲ್ಲಿ Kannada Image Editor - Troll Meme Text Creator ಎಂದು ಹುಡುಕಿದರೆ ಆ ಜಾಲತಾಣಕ್ಕೆ ನೀವು ಭೇಟಿ ನೀಡುತ್ತೀರಾ. ನಂತರ ಚಿತ್ರಗಳನ್ನು ನಿಮಗೆ ಬೇಕಾದ ರಗೀತಿಯಲ್ಲಿ ಎಡಿಟ್ ಮಾಡಿಕೊಂಡು ನೀವು ಸಹ ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.!!
ಓದಿರಿ: ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ ನಂತರ ಹಣಪಾವತಿಸಿ!! ಹೊಸ ಆಯ್ಕೆ ಹೇಗೆ ಗೊತ್ತಾ?


Click it and Unblock the Notifications








