Subscribe to Gizbot

ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ ನಂತರ ಹಣಪಾವತಿಸಿ!! ಹೊಸ ಆಯ್ಕೆ ಹೇಗೆ ಗೊತ್ತಾ?

Written By:

ತತ್ಕಾಲ್ ಟಿಕೆಟ್ ಬುಕ್ ಮಾಡುವವರಿಗೊಂದು ಸಿಹಿಸುದ್ದಿ ದೊರೆತಿದೆ.! ಕೊನೇ ಕ್ಷಣದಲ್ಲಿ ರೈಲು ಟಿಕೆಟ್‌ ಬುಕ್‌ ಮಾಡುವುದು ಈಗ ಇನ್ನೂ ಸುಲಭವಾಗಿದ್ದು, ಆನ್‌ಲೈನ್‌ನಲ್ಲಿ ಹಣ ನೀಡದೆಯೇ ರೈಲ್ವೆ ಟಿಕೆಟ್ ಬುಕ್ ಮಾಡಿ ನಂತರ ಹಣ ಪಾವತಿ ಮಾಡಬಹುದಾಗಿದೆ.!!

ಜನರಲ್‌ ರಿಸರ್ವೇಶನ್‌ಗೆ ಮಾತ್ರವೇ ಲಭ್ಯವಿದ್ದ ಈ ಸೇವೆಯನ್ನು ರೈಲ್ವೇ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಶನ್‌ (IRCTC) ವೆಬ್‌ಸೈಟಿನಲ್ಲಿ ನೀಡಲಾಗಿದ್ದು, ತತ್ಕಾಲ್ ಕೋಟಾದಡಿ ಹಣ ನೀಡದೆಯೇ ಟಿಕೆಟ್ ಬುಕ್‌ ಮಾಡಬಹುದಾಗಿದೆ.ನಂತರ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪೇಮೆಂಟ್ ಮಾಬಹುದಾಗಿದೆ.

IRCTC ಬಳಕೆದಾರರು ಈಗಿನ್ನು ತತ್ಕಾಲ್‌ ಟಿಕೆಟ್‌ಗಳನ್ನು ನಗದು, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಿ ಆ ಟಿಕೆಟ್‌ಗಳು ತಮ್ಮ ಮನೆ ಬಾಗಿಲಿಗೇ ಡೆಲಿವರಿ ಮಾಡಿಸಿಕೊಳ್ಳುವ ಸೇವೆಯನ್ನು ಪಡೆಯಬಹುದಾಗಿದೆ ಎಂದು IRCTC ಪಾವತಿ ಪೂರೈಕೆದಾರ ಆನ್‌ಡ್ಯೂರಿಯಲ್ ಟೆಕ್ನಾಲಿಜಿಸ್ ಹೇಳಿದೆ.!!

ಇನ್ನು ಈ ಹೊಸ ಸೇವೆಯಿಂದ ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿದ್ದ "ವಹಿವಾಟು ವೈಫ‌ಲ್ಯ'ವನ್ನು ನಿವಾರಣೆಯಾಗುತ್ತದೆ. ಹಾಗಾದರೆ, ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
www.IRCTC.co.in ವೆಬ್‌ಸೈಟ್ ತೆರೆಯಿರಿ.!

www.IRCTC.co.in ವೆಬ್‌ಸೈಟ್ ತೆರೆಯಿರಿ.!

ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡಲು ಭಾರತ ಸರ್ಕಾದ ಅಧೀನ ಸಂಸ್ಥೆ IRCTC(Indian Railway Catering and Turism Corporationlimited) ವೆಬ್‌ಸೈಟ್ ತೆರೆಯಿರಿ

IRCTC ವೆಬ್‌ಸೈಟ್‌ಗೆ ಸೈನ್ ಅಪ್ ಆಗಿ

IRCTC ವೆಬ್‌ಸೈಟ್‌ಗೆ ಸೈನ್ ಅಪ್ ಆಗಿ

ವೆಬ್‌ಸೈಟ್ ಪೇಜ್ ತೆರೆದ ನಂತರ ಲಾಗಿನ್ ಅನ್ನುವ ಆಯ್ಕೆ ನಿಮಗೆ ಕಾಣಿಸುತ್ತದೆ. ಅದರ ಕೆಳಬಾಗದಲ್ಲಿರುವ ಸೈನ್‌ಅಪ್ ಐಕಾನ್ ಅನ್ನು ಕ್ಲಿಕ್ ಮಾಡಿ.

ಮಾಹಿತಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ

ಮಾಹಿತಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ

ಸೈನ್ ಅಪ್ ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೆ ಒಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮಾಹಿತಿಗಳನ್ನು ನೀಡಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ತಯಾರಿಸಿಕೊಳ್ಳಿ

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ಸೈನ್ ಅಪ್ ಆದ ನಂತರ ಮತ್ತೆ ವೆಬ್‌ಸೈಟ್‌ ಮುಖಪುಟಕ್ಕೆ ಬನ್ನಿ. ಅಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿರಿ.

ಪ್ರಯಾಣದ ವಿವರ ನಮುದಿಸಿ.

ಪ್ರಯಾಣದ ವಿವರ ನಮುದಿಸಿ.

ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ನೀವು ಪ್ರಯಾಣಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ನಮೂದಿಸಿ. ನಂತರ ಇ-ಟಿಕೆಟ್ ಎಂದು ಸೆಲೆಕ್ಟ್‌ ಮಾಡಿ ಮತ್ತು ಕೋಟಾ ನಮೂದಿಸಿ.

ರೈಲಿನಲ್ಲಿ ಸೀಟು ಇದೆಯಾ ಖಚಿತಮಾಡಿಕೊಳ್ಳಿ.!

ರೈಲಿನಲ್ಲಿ ಸೀಟು ಇದೆಯಾ ಖಚಿತಮಾಡಿಕೊಳ್ಳಿ.!

ನೀವು ಪ್ರಯಾಣಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ನಮೂದಿಸಿದ ನಂತರ ಆ ದಿನಾಂಕದಲ್ಲಿ ನೀವು ಪ್ರಯಾಣಿಸಬೇಕಾ ದರೈಲುಗಳ ಲೀಸ್ಟ್ ತೆರೆಯುತ್ತದೆ. ರೈಲಿನಲ್ಲಿ ಸೀಟು ಇದೆ ಎಂಬುದನ್ನು ಖಚಿತಮಾಡಿಕೊಳ್ಳಿ. Wl (waiting list), RAC(Reservation Against Cancellation ) and Available (Seat Available).

ಟಿಕೆಟ್ ಫಾರ್ಮ್ ತುಂಬಿರಿ.!

ಟಿಕೆಟ್ ಫಾರ್ಮ್ ತುಂಬಿರಿ.!

ಎಷ್ಟು ಜನರಿಗೆ ಟಿಕೆಟ್ ಬೇಕಾಗಿದೆ. ಅವರ ವಯಸ್ಸು ಎಲ್ಲವನ್ನು ಟಿಕೆಟ್ ಫಾರ್ಮ್ ಫಿಲ್ ಮಾಡಿ. ನಂತ ನಿಮ್ಮ ಎಲ್ಲಾ ಮಾಹಿತಿಗಳನ್ನು ನಮೂದಿಸಿದ ನಂತರ ಮೇಕ್ ಪೇಮೆಂಟ್ ಎಂಬ ಆಯ್ಕೆ ಕಾಣಿಸುತ್ತದೆ. ಆನ್‌ಲೈನ್ ಪೇಮೆಂಟ್ ಮಾಡಿ ನಂತರ ನಿಮಗೆ ಟಿಕೆಟ್ ಬುಕ್ ಆಗಿರುವ ಬಗ್ಗೆ ಎಸ್‌ಎಂಎಸ್ ಬರುತ್ತದೆ. ನಿಮ್ಮ ಟಿಕೆಟ್ ಬಕ್ ಆಗಿರುತ್ತದೆ.

ಓದಿರಿ:ಜಿಯೋ ಎಫೆಕ್ಟ್..ಭಾರತದಲ್ಲಿ ಯಾವಾಗಲೂ ಆನ್‌ಲೈನ್‌ನಲ್ಲಿ ಇರೋರು ಎಷ್ಟು ಜನ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
For tatkal tickets, IRCTC users will be able to pay via cash, debit card or credit card. to knannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot