Home
ಟೆಕ್ ನೌಕರಿ

Gruha Jyothi Scheme:200 ಯೂನಿಟ್‌ ಫ್ರೀ ವಿದ್ಯುತ್‌ ಪಡೆಯಲು ಈಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ! ಇಲ್ಲಿದೆ ಸರಳ ಮಾರ್ಗ

ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಹಾಗೂ ಭಾರೀ ಕುತೂಹಲ ಹುಟ್ಟುಹಾಕಿದ್ದ ಗೃಹ ಜ್ಯೋತಿ ಯೋಜನೆಗೆ ಕೊನೆಗೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್‌ ಉಚಿತ ವಿದ್ಯುತ್‌ (200 units free electricity) ಅನ್ನು ರಾಜ್ಯದ ಜನರು ಪಡೆದುಕೊಳ್ಳಬಹುದಾಗಿದ್ದು, ಇದಕ್ಕೆ ಕೆಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ.

ಹೌದು, ಇಂದಿನಿಂದ ಅಂದರೆ ಜೂನ್ 18 ರಿಂದ ಕರ್ನಾಟಕದಲ್ಲಿ ಗೃಹ ಜ್ಯೋತಿ ಯೋಜನೆಯ(Gruha Jyothi Scheme) ನೋಂದಣಿ ಪ್ರಕ್ರಿಯೆ ಆರಂಭ ಆಗಿದೆ. ಇದಕ್ಕಾಗಿ ರಾಜ್ಯದ ಜನರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಕ್ರಿಯೇಟ್‌ ಮಾಡಲಾದ ಹೊಸ ಪೇಜ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ ಎಂದು ಕರ್ನಾಟಕದ ಇಂಧನ ಇಲಾಖೆ ಮಾಹಿತಿ ನೀಡಿದೆ. ಹಾಗಿದ್ರೆ, ಬನ್ನಿ ಸರಳ ಹಂತದ ಮೂಲಕ ಹೇಗೆ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಎಂದು ತಿಳಿಯೋಣ.

200 ಯೂನಿಟ್‌ ಫ್ರೀ ವಿದ್ಯುತ್‌ ಪಡೆಯಲು ಈಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ: ರಾಜ್ಯದಲ್ಲಿ ಘೋಷಣೆ ಆಗಿರುವ ಗೃಹ ಜ್ಯೋತಿ ಯೋಜನೆಯು ಕರ್ನಾಟಕದ ವಸತಿ ಮನೆಗಳಿಗೆ ಉಚಿತ ವಿದ್ಯುತ್ ಅನ್ನು ನೀಡುವ ಗುರಿ ಹೊಂದಿದೆ. ಅಂದರೆ ಶೇಕಡಾ 10 ರಷ್ಟು ಅಥವಾ 200 ಯೂನಿಟ್‌ಗಳ ಮಿತಿಯೊಳಗೆ ವಿದ್ಯುತ್‌ ಬಳಕೆ ಮಾಡಿದರೆ ಯಾವುದೇ ವಿದ್ಯುತ್‌ ಬಿಲ್‌ ಪಾವತಿ ಮಾಡುವಂತಿಲ್ಲ. ಆದರೆ, 200 ಯೂನಿಟ್ ಮಿತಿಯನ್ನು ಮೀರಿದ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಪಾವತಿ ಮಾಡಬೇಕಾದ ನಿಯಮ ರೂಪಿಸಲಾಗಿದೆ.

ಈ ಯೋಜನೆಯ ಅಧಿಕೃತ ಲಾಂಚ್‌ ದಿನಾಂಕವನ್ನು ಆಗಸ್ಟ್ 1, 2023 ರಂದು ನಿಗದಿಪಡಿಸಲಾಗಿದೆ. ಇನ್ನು ಜುಲೈನಲ್ಲಿ ತಮ್ಮ ವಿದ್ಯುತ್ ಬಳಕೆಗಾಗಿ ಶೂನ್ಯ ಬಿಲ್ ಅನ್ನು ಅರ್ಹ ಫಲಾನುಭವಿಗಳು ಸ್ವೀಕರಿಸುತ್ತಾರೆ. ಈ ನಡುವೆ ಗೃಹ ಜ್ಯೋತಿ ಯೋಜನೆಯು ಅರ್ಹ ವಸತಿ ಕುಟುಂಬಗಳಿಗೆ ವಿದ್ಯುತ್ ವೆಚ್ಚದ ಹೊರೆಯನ್ನು ತಗ್ಗಿಸಲು ಮತ್ತು ಸುಸ್ಥಿರ ಇಂಧನ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಅದರಂತೆ ಈ ಯೋಜನೆ ಸದುಪಯೋಗಪಡೆಯಲು ಈ ಸರಳ ಹಂತದ ಮೂಲಕ ಅರ್ಜಿ ಸಲ್ಲಿಸಿ.

ಹಂತ 1: ಗೃಹ ಜ್ಯೋತಿ ಯೋಜನೆ ಆನ್‌ಲೈನ್ ನೋಂದಣಿಗೆ ಮೊದಲು ನಿಮ್ಮ ಲ್ಯಾಪ್‌ಟಾಪ್‌ ಅಥವಾ ಫೋನ್‌ನಲ್ಲಿ ಸೇವಾಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇನ್ನು ಸರ್ಕಾರ ಇದಕ್ಕಾಗಿ ಇಲ್ಲಿ ಹೊಸ ಪುಟ ತೆರೆಯಲಾಗಿದ್ದು, ಅದರಂತೆ ನೀವು http://sevasindhugs.karnataka.gov.in/ ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಿ. ಇದಾದ ಬಳಿಕ ನಿಮ್ಮ ಹೆಸರು, ವಿಳಾಸ, ಸಂಪರ್ಕ ವಿವರಗಳು, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ಬಳಸಿಕೊಂಡು ಪೋರ್ಟಲ್‌ನಲ್ಲಿ ನೋಂದಾಯಿಸಿ.

ಹಂತ 2: ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ನೀವು ಕ್ರಿಯೇಟ್‌ ಮಾಡಿಕೊಂಡ ಲಾಗಿನ್‌ ಐಡಿ ಬಳಕೆ ಮಾಡಿಕೊಂಡು ಅಧಿಕೃತವಾಗಿ ವೆಬ್‌ಸೈಟ್‌ಗೆ ಲಾಗಿನ್‌ ಆಗಬೇಕಾಗುತ್ತದೆ. ಬಳಿಕ ಅಲ್ಲಿ ಗೃಹ ಜ್ಯೋತಿ ಯೋಜನೆ ಅಪ್ಲಿಕೇಶನ್ ಲಿಂಕ್ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್‌ ಮಾಡಿದರೆ ಅಲ್ಲಿ ಅರ್ಜಿ ನಮೂನೆ ಕಾಣಿಸಿಕೊಳ್ಳಲಿದೆ. ಅದರ ಮೇಲೆ ಕ್ಲಿಕ್‌ ಮಾಡಿ. ಈ ವೇಳೆ ನಿಮ್ಮ ಹೆಸರು, ವಿಳಾಸ ಹಾಗೂ ವಿದ್ಯುತ್‌ ಸಂಬಂಧಿ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ಇಷ್ಟೆಲ್ಲಾ ಆದ ಮೇಲೆ ಅಲ್ಲೇ ಕಾಣಿಸಿಕೊಳ್ಳುವ ಸಬ್‌ಮಿಟ್‌ ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ. ಈ ಮೂಲಕ ಮುಂದಿನ ದಿನಗಳಲ್ಲಿ ನಿಮ್ಮ ಮನೆಯ ವಿದ್ಯುತ್‌ 200 ಯುನಿಟ್‌ಗಿಂತ ಒಳಗಿದ್ದರೆ ಶೂಲ್ಯ ಬಿಲ್‌ ಅನ್ನು ಸ್ವೀಕಾರ ಮಾಡಬಹುದು. ಅದಕ್ಕಿಂತ ಹೆಚ್ಚಾದರೆ ವಿದ್ಯುತ್‌ ಬಿಲ್ ಪಾವತಿ ಮಾಡಬೇಕಾಗುತ್ತದೆ.

ರಾಜ್ಯದ ಜನರೇ ಎಚ್ಚರ: ಇನ್ನು ರಾಜ್ಯದಲ್ಲಿ ಈ ಗ್ಯಾರಂಟಿ ಪ್ಲ್ಯಾನ್‌ಗಳ ಮೂಲಕ ಜನರಿಗೆ ಮೋಸ ಮಾಡಲು ಮುಂದಾಗಿರುವ ಸ್ಕ್ಯಾಮರ್ಸ್‌ ನಕಲಿ ವೆಬ್‌ಸೈಟ್‌ ಹಾಗೂ ಲಿಂಕ್‌ ಬಳಕೆ ಮಾಡಿಕೊಂಡು ಬಳಕೆದಾರರಿಂದ ಹಣ ಸುಲಿಗೆ ಮಾಡುವ ಅಥವಾ ನಿಮ್ಮ ಖಾಸಗಿ ಮಾಹಿತಿ ಖದಿಯುವ ಕೆಲಸ ಸಹ ನಿಧಾನವಾಗಿ ಕಾಲಿಟ್ಟಿದ್ದು, ಅದರಲ್ಲೂ ಈ ಸ್ಕ್ಯಾಮರ್‌ಗಳು ಬೆಂಗಳೂರಿನ ಜನರನ್ನೇ ಗುರಿಯಾಗಿಸಿಕೊಂಡಿದ್ದಾರೆ.

200 ಯೂನಿಟ್‌ ಫ್ರೀ ವಿದ್ಯುತ್‌ ಪಡೆಯಲು ಈಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

200 ಯೂನಿಟ್‌ ವಿದ್ಯುತ್‌ ಉಚಿತವಾಗಿ ಬೇಕು ಎಂದಾದರೆ ಈಗಲೇ ನಿಮ್ಮ ಹಳೆಯ ಬಿಲ್‌ಗಳನ್ನು ಪಾವತಿಸಿ. ಅಷ್ಟು ಮಾತ್ರವಲ್ಲ ಇಂದೇ ನೀವು ಬಿಲ್‌ ಪಾವತಿಸಬೇಕು ಇಲ್ಲದಿದ್ದರೆ ನಿಮಗೆ 200 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ಅನ್ವಯವಾಗುವುದಿಲ್ಲ ಎಂಬ ಮೆಸೆಜ್‌ಗಳನ್ನು ಒಂದು ಲಿಂಕ್ ಮೂಲಕ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಈ ರೀತಿಯ ಸಂದೇಶಗಳನ್ನು ನಂಬದಿರಿ. ಬದಲಾಗಿ ಸರ್ಕಾರದ ಅಧಿಕೃತ ಸೈಟ್‌ ಮೂಲಕ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.

Best Mobiles in India

English summary
The registration process of Gruha Jyothi Yojana in Karnataka has started from today June 18. For this the people of the state have to register on a new page created on the Seva Sindhu portal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+