ವೈ-ಫೈ ಸಂಪರ್ಕದ ವೇಗ ಹೆಚ್ಚಿಸಲು ಇಲ್ಲಿವೆ ಸರಳ ಮಾರ್ಗಗಳು!


ಇಂದಿನ ಬಹುತೇಕ ಕೆಲಸಗಳು ಇಂಟರ್ನೆಟ್ ಆಧಾರಿತವಾಗಿವೆ. ಸ್ಮಾರ್ಟ್‌ಫೋನ್ ಸೇರಿದಂತೆ, ಸ್ಮಾರ್ಟ್‌ವಾಚ್, ಲ್ಯಾಪ್‌ಟಾಪ್, ಸ್ಮಾರ್ಟ್‌ ಸ್ಪೀಕರ್, ಸ್ಯಾರ್ಟ್‌ ಟಿವಿ, ಹೀಗೆ ಪ್ರತಿಯೊಂದು ಗ್ಯಾಡ್ಜೆಟ್ ಬಳಕೆ ಮಾಡಲು ಇಂಟರ್ನೆಟ್ ಅಗತ್ಯವಾಗಿದೆ. ಹಾಗಂತ ಈ ಎಲ್ಲ ಡಿವೈಸ್‌ಗಳಗೆ ಸ್ಮಾರ್ಟ್‌ಫೋನಿಂದ ಇಂಟರ್ನೆಟ್‌ ಒದಗಿಸುವುದಿಲ್ಲ. ಬಹುತೇಕರು ರೂಟರ್, ವೈಫೈ ನಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ.

Advertisement

ಹೌದು, ಹೆಚ್ಚಿನ ಇಂಟರ್ನೆಟ್ ಅಗತ್ಯತೆಯನ್ನು ನಿರ್ವಹಿಸಲು ರೂಟರ್‌ಗಳ ಬಳಕೆ ಹೆಚ್ಚು. ಆದರೆ ಅವುಗಳು ಎಷ್ಟೊ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವುದೇ ಇಲ್ಲ ಎನ್ನುವ ಮಾತುಗಳನ್ನು ಆಡುತ್ತಾರೆ. ಕೆಲವು ಬಾರಿ ನೆಟವರ್ಕ್ ಸಮಸ್ಯೆಯಿಂದಲೂ ರೂಟರ್ ವೇಗದಲ್ಲಿ ಕಡಿತವಾಗಿರುವ ಸಾಧ್ಯತೆಗಳಿರುತ್ತವೆ. ವಾಯರ್‌ಲೆಸ್‌ ಸಾಧನಗಳ ಬಳಕೆಗೆ ರೂಟರ್ ವೈಫೈ ಬೂಸ್ಟ್ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ. ಮುಂದೆ ಓದಿರಿ.

Advertisement
ಸಿಗ್ನಲ್ ಸರಿಯಾಗಿರಲಿ

ಸರಿಯಾಗಿ ಮತ್ತು ಹೆಚ್ಚು ನೆಟವರ್ಕ್ ಕವರೇಜ್ ಇರುವ ಸ್ಥಳದಲ್ಲಿ ವೈ-ಫೈ ರೂಟರ್ ಇದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ಸರಿಯಾದ ಸಿಗ್ನಲ್ ಇರುವ ಸ್ಥಳ ಗುರುತುಮಾಡಿಕೊಳ್ಳಿ ಮತ್ತು ಸಿಗ್ನಲ್‌ಗಳಿಗೆ ಅಡೆತಡೆಗಳಿದ್ದರೇ ಸರಿ ಮಾಡಿ.

ರೂಟರ್‌ ಏಂಟಿನಾ

ವೈಫೈ ರೊಟರ್‌ಗೆ ಆಂತರಿಕ ಏಂಟಿನಾ ಸೌಲಭ್ಯ ಇದ್ದರೆ. ಅದಕ್ಕೆ ಹೆಚ್ಚುವರಿ ಬಾಹ್ಯ ಏಂಟಿನಾ ವ್ಯವಸ್ಥೆ ಮಾಡಿಕೊಳ್ಳಿ ಇದರಿಂದ ಉತ್ತಮ ನೆಟವರ್ಕ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ಆಂತರಿಕ ಏಂಟಿನಾ ರೊಟರ್‌ಗಳು ಉತ್ತಮ ಸಿಗ್ನಲ್ ಕವರೇಜ್ ನೀಡುತ್ತವೆ. ಅದ್ಯಾಗೂ ವೇಗದ ಸಿಗ್ನಲ್‌ ಅಗತ್ಯ ಇದ್ದರೆ ಎಂಟನಾ ಅಳವಡಿಸಿಕೊಳ್ಳಿ.

ವ್ಯಾಪ್ತಿ ಹೆಚ್ಚಿಸಿ

ಸಾಮಾನ್ಯವಾಗಿ ರೊಟರ್‌ಗಳಿ ನಿಗದಿತ ಸಿಗ್ನಲ್ ವ್ಯಾಪ್ತಿಯನ್ನು ಹೊಂದಿರುತ್ತವೆ. ಹೆಚ್ಚಿನ ಇಂಟರ್ನೆಟ್ ಅಗತ್ಯದ ಕವರೇಜ್‌ ಬೇಕಿದ್ದರೆ ನಿಗದಿತ ವ್ಯಾಪ್ತಿಯನ್ನು ವಿಸ್ತರಿಸುವುದು ಸೂಕ್ತ. ಇದರಿಂದ ವೈಫೈ ರೊಟರ್ ಸಿಗ್ನಲ್ ವ್ಯಾಪ್ತಿ ಇನ್ನಷ್ಟು ಹೆಚ್ಚಾಗಲಿದೆ.

ರೀ ಸ್ಟಾರ್ಟ್

ವೈಫೈ ರೊಟರ್‌ಗಳ ವೇಗ ಹೆಚ್ಚಿಸಲು ಅಥವಾ ಸರಿಯಾಗಿ ಸಿಗ್ನಲ್ ಕವರೇಜ್ ಆಗುತ್ತಿಲ್ಲ ಎನ್ನುವುದಾದರೇ ರೂಟರ್ ಒಮ್ಮ ರೀ ಸ್ಟಾರ್ಟ್‌ ಮಾಡಿ. ರೀ ಸ್ಟಾರ್ಟ್‌ ಅಥವಾ ರೀ ಬೂಟ್ ಮಾಡುವುದರಿಂದ ರೂಟರ್ ಕಾರ್ಯವೈಖರಿ ಉತ್ತಮವಾಗಲಿದೆ.

ಪಾಸ್‌ವರ್ಡ್‌ ಶೇರ್ ಮಾಡಬೇಡಿ

ವೈಫೈ ರೂಟರ್ ವೇಗ ಹೆಚ್ಚಿಸುವುದು ಬಳಕೆ ಮಾಡುವುದು ಒಂದೆಡೆಯಾದರೇ. ಅದರ ಪಾಸ್‌ವರ್ಡ್ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಯಾರೊಂದಿಗೂ ವೈ ಫೈ ರೂಟರ್ ಪಾಸ್‌ವರ್ಡ್ ಶೇರ್ ಮಾಡುಬೇಡಿ.

Best Mobiles in India

English Summary

If you are using your home Wi-Fi, there are ways to boost the signal so as your work is seamless.