ಫೇಸ್‌ಬುಕ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಗೊತ್ತಾ?


ಸಾಮಾಜಿಕ ಜಾಲತಾಣಗಳ ದಿಗ್ಗಜ ಎಂದೆನಿಸಿಕೊಂಡಿರುವ 'ಫೇಸ್‌ಬುಕ್' ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅತ್ಯುತ್ತಮ ಸೇವೆಗಳನ್ನು ಅಳವಡಿಸಿದೆ. ಫೇಸ್‌ಬುಕ್ ಬಳಕೆದಾರರು ಸರ್ಚ್ ಮಾಡುವ ಮಾಹಿತಿ ಎಲ್ಲವು ಟ್ರಾಕ್ ಆಗಿರುತ್ತದೆ. ಆ ಆಧಾರರದ ಮೇಲೆಯೇ ಬಳಕೆದಾರರ ಫೇಸ್‌ಬುಕ್ ಫೀಡ್‌ ವಿಭಾಗದಲ್ಲಿ ಜಾಹಿರಾತುಗಳು ಕಾಣಿಸಿಕೊಳ್ಳುವುದು. ಹೀಗೆ ಅನಗತ್ಯ ಜಾಹಿರಾತುಗಳಿಂದ ಕಿರಿಕಿರಿ ಅನಿಸಿದೆಯಾ? ನಿಮ್ಮ ಟ್ರಾಕ್ ಹಿಸ್ಟರಿ ವಾಶ್‌ಚೌಟ್ ಮಾಡಬೇಕೆ?

Advertisement

ಫೇಸ್‌ಬುಕ್‌ನಲ್ಲಿ ನಿಮ್ಮ ಹಿಸ್ಟರಿ ಎಲ್ಲವನ್ನು ಡಿಲೀಟ್ ಮಾಡಬಹುದಾಗಿದೆ. ಅದಕ್ಕಾಗಿ ಫೇಸ್‌ಬುಕ್ ಹೊಸದಾಗಿ ''ಆಫ್‌ ಫೇಸ್‌ಬುಕ್ ಆಕ್ಟಿವಿಟಿ' ಟೂಲ್ ಒಂದನ್ನು ಪರಿಚಯಿಸಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಸರ್ಚ್ ಮಾಹಿತಿಯ ಹಿಸ್ಟರಿ ಎಲ್ಲವನ್ನು ಡಿಲೀಟ್ ಮಾಡಬಹುದಾಗಿದೆ. ಈ ಮೊದಲು ಈ ಆಯ್ಕೆಯು ಐರ್ಲ್ಯಾಂಡ್ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಮಾತ್ರ ಲಭ್ಯವಿತ್ತು. ಆದ್ರೆ ಇದೀಗ ಎಲ್ಲಡೆ ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಟೂಲ್ ಸೇವೆ ಲಭ್ಯ ಇದೆ. ಹಾಗಾದರೆ ಫೇಸ್‌ಬುಕ್‌ನಲ್ಲಿ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

Advertisement
ಏನಿದು ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಟೂಲ್?

ಫೇಸ್‌ಬುಕ್ ಬಳಕೆದಾರರು ಇತರೆ ಯಾವುದೇ ಆಪ್ಸ್‌ ಬಳಸಲಿ, ಯಾವುದೇ ವೆಬ್‌ಬ್ರೌಸರ್‌ನಲ್ಲಿ ಸರ್ಚ್ ಮಾಡಲಿ ಹಾಗೂ ಒಟ್ಟಾರೆ ಬಳಕೆಅದರರ ಆಕ್ಟಿವಿಟಿಯನ್ನು ಟ್ರಾಕ್ ಮಾಡುತ್ತಿತ್ತು. ಬಳಕೆದಾರರ ಸರ್ಚ್ ಆಕ್ಟಿವಿಟಿ ಆಧಾರದ ಮೇಲೆಯೇ ಅವರ ಫೇಸ್‌ಬುಕ್ ಅಕೌಂಟ್‌ಗಳಲ್ಲಿ ಜಾಹಿರಾತುಗಳು ಬರುತ್ತಿದ್ದವು. ಇದರಿಂದ ಬಳಕೆದಾರರ ಖಾಸಗಿತನ ಭದ್ರತೆ ಲೋಪ ಆಗುತ್ತದೆ ಎಂದು ಫೇಸ್‌ಬುಕ್ ಈಗ ಆಫ್‌ ಫೇಸ್‌ಬುಕ್‌ ಆಕ್ಟಿವಿಟಿ ಟೂಲ್ ಪರಿಚಯಿಸಿದೆ. ಇದರಿಂದ ಬಳಕೆದಾರರು ಆಕ್ಟಿವಿಟಿಯನ್ನು ಫೇಸ್‌ಬುಕ್ ಟ್ರಾಕ್ ಮಾಡುವುದನ್ನು ನಿಯಂತ್ರಿಸಬಹುದಾಗಿದೆ.

ಹಿಸ್ಟರಿ ಕ್ಲಿಯರ್ ಮಾಡಲು ಹೀಗೆ ಮಾಡಿ

* ಫೇಸ್‌ಬುಕ್ ಖಾತೆ ತೆರೆದು, ಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳಿರುವ ಮೆನು ಆಯ್ಕೆ ಮಾಡಿರಿ.
* ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆ ಸೆಲೆಕ್ಟ್ ಮಾಡಿರಿ.
* ನಂತರ ಸೆಟ್ಟಿಂಗ್ಸ್‌ ಆಯ್ಕೆಯನ್ನು ಒತ್ತಿರಿ.
* ನಂತರ ಪೇಜ್ ತೆರೆದುಕೊಳ್ಳುತ್ತದೆ, ಸ್ಕ್ರಾಲ್ ಮಾಡಿ> ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಕಾಣಿಸುತ್ತದೆ.
* ಆಗ ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ, ಆಗ ನೀವು ಭೇಟಿ ನೀಡಿದ ತಾಣಗಳ ಮಾಹಿತಿ ಕಾಣಿಸುತ್ತದೆ.
* ಹಾಗೆಯೇ ಅಲ್ಲಿಯೇ ಕ್ಲಿಯರ್ ಹಿಸ್ಟರಿ ಆಯ್ಕೆಯು ಸಹ ಕಾಣಿಸುತ್ತದೆ.
* ಆಗ ವಿಂಡೊ ಒಂದು ತೆರೆದು ಕೊಳ್ಳುತ್ತದೆ, ಅಲ್ಲಿ ಕ್ಲಿಯರ್ ಹಿಸ್ಟರಿ ಬಟನ್ ಒತ್ತಿರಿ.

ಪ್ರೈವೆಸಿ ರಕ್ಷಣೆ ಅಗತ್ಯ

ಫೇಸ್‌ಬುಕ್ ಬಳಕೆದಾರರಿಗೆ ಅವರ ಖಾಸಗಿ ಮಾಹಿತಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಫೇಸ್‌ಬುಕ್ ಈ ಆಯ್ಕೆಯನ್ನು ಅಳವಡಿಸಿದೆ. ಬಳಕೆದಾರರು ಅನೇಕ ಥರ್ಡ್‌ಪಾರ್ಟಿ ಸೈಟ್‌ಗಳಿಗೆ ಭೇಟಿ ನೀಡಿರುತ್ತಾರೆ. ಅವರ ಸರ್ಚ್ ಟ್ರಾಕ್ ಮಾಹಿತಿ ಆಧಾರದ ಮೇಲೆ ಜಾಹಿರಾತುಗಳು ಫೇಸ್‌ಬುಕ್ ಗೋಡೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಹಾಗೆಯೇ ಕೆಲವೊಮ್ಮೆ ಮಾಹಿತಿ ಸೋರಿಕೆ ಆಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಫೇಸ್‌ಬುಕ್‌ನ ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಟೂಲ್‌ ಆಯ್ಕೆ ಬಳಕೆದಾರರ ಪ್ರೈವೆಸಿಗೆ ನೆರವಾಗಲಿದೆ.

Best Mobiles in India

English Summary

Facebook completed its global rollout of the “Off-Facebook Activity” tool. Usesr can easily delete browsing history. to know more visit to kannada.gizbot.com