ಸ್ಮಾರ್ಟ್‌ಫೋನಿನಲ್ಲಿ ಡಾರ್ಕ್ ಮೋಡ್‌ ಬಳಕೆ ಹೇಗೆ?..ಪ್ರಯೋಜನ ಏನು?


ಕಳೆದ ವರ್ಷ-2019ರಲ್ಲಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ಅನೇಕ ಮಹತ್ತರ ಅಪ್‌ಡೇಟ್‌ಗಳು ನಡೆದಿದ್ದು, ಹೊಸ ಫೀಚರ್ಸ್‌ಗಳ ಫೋನ್‌ಗಳು ಪ್ರವೇಶ ಪಡೆದಿವೆ. ಹಾಗೆಯೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಆಪರೇಟಿಂಗ್ ಸಿಸ್ಟಂಗಳೆರಡರಲ್ಲಿಯೂ ಸಹ ಹಲವು ನೂತನ ಫೀಚರ್ಸ್‌ಗಳು ಸೇರಿಕೊಂಡಿವೆ. ಅವುಗಳಲ್ಲಿ ಡಾರ್ಕ್‌ ಮೋಡ್ ಫೀಚರ್‌ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಅನೇಕ ಬಳಕೆದಾರರಿಗೆ ಡಾರ್ಕ್ ಮೋಡ್ ಬಳಕೆ ಏಕೆ ಮತ್ತು ಹೇಗೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

Advertisement

ಹೌದು, ಗೂಗಲ್ ಸಂಸ್ಥೆಯು ಹೊಸದಾಗಿ ಆಂಡ್ರಾಯ್ಡ್‌ 10 ಓಎಸ್‌ ಅನ್ನು, ಆಪಲ್ ಐಓಎಸ್‌ 13 ಅನ್ನು ಪರಿಚಯಿಸಿವೆ. ಈ ನೂತನ ಓಎಸ್‌ ಅಪ್‌ಡೇಟ್‌ನಲ್ಲಿ ಡಾರ್ಕ್ ಮೋಡ್ ಫೀಚರ್ ಹೆಚ್ಚು ಗಮನ ಸೆಳೆದಿದ್ದು, ಕೆಲವು ಅಗತ್ಯ ಅನುಕೂಲ ಹೊಂದಿದೆ. ಇನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಈ ಡಾರ್ಕ್ ಮೋಡ್ ಫೀಚರ್ ಬಳಕೆ ಹೇಗೆ ಹಾಗೂ ಅಗತ್ಯತೆ ಏನು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

Advertisement
ಡಾರ್ಕ್ ಮೋಡ್ ಪ್ರಯೋಜನೆಗಳು

ಆಂಡ್ರಾಯ್ಡ್‌ 10 ಓಎಸ್‌ ಮತ್ತು ಐಓಎಸ್‌ 13 ಸೇರಿರುವ ಹೊಸ ಡಾರ್ಕ್‌ ಮೋಡ್ ಫೀಚರ್‌ ಬಳಕೆದಾರರಿಗೆ ಮುಖ್ಯವಾಗಿ ಎರಡು ಅನುಕೂಲಗಳನ್ನು ಒದಗಿಸುತ್ತದೆ. ಒಂದು ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಉಳಿಸುವಲ್ಲಿ ನೆರವಾಗಲಿದೆ. ಹಾಗೆಯೇ ಡಾರ್ಕ್‌ ಮೋಡ್‌ ಆಯ್ಕೆಯ ಇನ್ನೊಂದು ಉಪಯೋಗ ಎಂದರೇ, ಕಣ್ಣಿಗೆ ಉಂಟಾಗುವ ಆಯಾಸವನ್ನು ತಡೆಯಲು ನೆರವಾಗಲಿದೆ.

ಡಾರ್ಕ್‌ ಮೋಡ್ ಹೊಂದಿರುವ ಆಪ್ಸ್‌

ಜನಪ್ರಿಯ ಸಾಮಾಜಿಕ ತಾಣ ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಆಪ್‌ಗಳು ಡಾರ್ಕ್‌ ಮೋಡ್ ಫೀಚರ್‌ ಅನ್ನು ಪರಿಚಯಿಸಿವೆ. ಹಾಗೆಯೇ ಇತ್ತೀಚಿಗೆ ಜಿ-ಮೇಲ್‌ ಸಹ ಬಳಕೆದಾರರಿಗೆ ಡಾರ್ಕ್‌ ಮೋಡ್ ಸೌಲಭ್ಯವನ್ನು ಒದಗಿಸಿದೆ. ವಾಟ್ಸಪ್‌ ಸಹ ಡಾರ್ಕ್ ಥೀಮ್‌ ಸೌಲಭ್ಯವನ್ನು ಪರಿಚಯಿಸಲಿದೆ.

ಆಂಡ್ರಾಯ್ಡ್‌ 10 ಓಎಸ್‌ ಫೋನ್‌ಗಳಲ್ಲಿ ಈ ಹಂತಗಳನ್ನು ಅನುಸರಿಸಿ

ಆಂಡ್ರಾಯ್ಡ್‌‌ 10 ಓಎಸ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ ಬಳಕೆಮಾಡಲು ಈ ಕ್ರಮಗಳನ್ನು ಅನುಸರಿಸಿರಿ.
* ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ ಆಪ್‌ ಅನ್ನು ತೆರೆಯಿರಿ.
* ನಂತರ ಸ್ಕ್ರಾಲ್‌ ಡೌನ್ ಮಾಡಿ, ಡಿಸ್‌ಪ್ಲೇ ಸೆಟ್ಟಿಂಗ್ ಆಯ್ಕೆ ಒತ್ತಿರಿ.
* ಡಿಸ್‌ಪ್ಲೇ ಸೆಟ್ಟಿಂಗ್‌ನಲ್ಲಿ ಡಾರ್ಕ್‌ ಮೋಡ್ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಿ.

ಐಓಎಸ್‌ 13 ಐಫೋನ್‌ಗಳಲ್ಲಿ ಈ ಹಂತಗಳನ್ನು ಅನುಸರಿಸಿ

ಐಓಎಸ್‌ 13 ಓಎಸ್‌ ಬೆಂಬಲಿತ ಐಫೋನ್‌ಗಳಲ್ಲಿ ಈ ಡಾರ್ಕ್ ಮೋಡ್ ಫೀಚರ್ ಬಳಕೆಮಾಡಲು ಈ ಕ್ರಮಗಳನ್ನು ಅನುಸರಿಸಿರಿ.
* ಐಫೋನ್‌ನಲ್ಲಿ ಸೆಟ್ಟಿಂಗ್ ಅಪ್ಲಿಕೇಶನ್ ತೆರೆಯಿರಿ
* ನಂತರ ಸ್ಕ್ರಾಲ್‌ ಡೌನ್ ಮಾಡಿ, ಡಿಸ್‌ಪ್ಲೇ ಮತ್ತು ಬ್ರೈಟ್ನೆಸ್‌ ಆಯ್ಕೆ ಒತ್ತಿರಿ.
* ಆನಂತರ ಡಾರ್ಕ್ ಮೋಡ್ ಆಯ್ಕೆಯನ್ನು ಚಾಲ್ತಿ ಮಾಡಿ.

Best Mobiles in India

English Summary

Dark mode not only conserves your phone’s battery life but it also reduces strain to the eyes. to know more visit to kannada.gizbot.com