Home
ಟೆಕ್ ನೌಕರಿ

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ!

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಬಹುದೇ?..ಅರೇ, ಸಿಮ್‌ ಇಲ್ಲದೇ ಕರೆ ಮಾಡಲು ಹೇಗೆ ಸಾಧ್ಯ ಅಂತೀರಾ. ಅಚ್ಚರಿ ಎನಿಸಿದರೂ, ಸಿಮ್‌ ಕಾರ್ಡ್‌ ಇರದೇ ಕರೆ ಮಾಡಲು ಅವಕಾಶ ಇದೆ. ಈ ವಿಧಾನಕ್ಕೆ ನೆರವಾಗಲಿದೆ ಜಿಯೋ ಏರ್‌ಫೈಬರ್‌ ಕನೆಕ್ಷನ್.

ಹೌದು, ಜಿಯೋ ಏರ್‌ಫೈಬರ್‌ ಕನೆಕ್ಷನ್‌ ನೆರವಿನಿಂದ, ಸಿಮ್‌ ಕಾರ್ಡ್‌ ಇಲ್ಲದೇ ಕೂಡಾ ಕರೆ ಮಾಡಲು ಸಾಧ್ಯ ಇದೆ. ಅದು ಕೂಡಾ ಅನಿಯಮಿತ ವಾಯಿಸ್‌ ಕರೆ ಮಾಡಲು ಅವಕಾಶ ಇದೆ. ಹಾಗಾದರೇ ಜಿಯೋ ಏರ್‌ಫೈಬರ್‌ ಮೂಲಕ ಕರೆ ಮಾಡುವುದು ಹೇಗೆ? ಜಿಯೋ ಏರ್‌ಫೈಬರ್‌ನ ಪ್ರಮುಖ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಿಯೋಜಾಯಿನ್‌ (JioJoin App) ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಬೇಕು. ಬಳಿಕ ಆ ಆಪ್‌ನಲ್ಲಿ ನಿಮ್ಮ ಮೊಬೈಲ್‌ ನಂಬರ್ ನಮೂದಿಸಿ ರಿಜಿಸ್ಟರ್‌ ಆಗುವುದು. ರಿಜಿಸ್ಟರ್ ಆದ ಬಳಿಕ ಜಿಯೋ ಏರ್‌ಫೈಬರ್‌ ನಂಬರ್‌ ಸಿಗಲಿದೆ. ನಂತರ ಬಳಕೆದಾರರು ವಾಯಿಸ್‌ ಕರೆ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿಮ್ಮ ಫೋನ್‌, ಜಿಯೋ ಏರ್‌ಫೈಬರ್‌ ಜೊತೆಗೆ ವೈ-ಫೈ ಕನೆಕ್ಟ್‌ ಆಗಿರಬೇಕು.

ಸಿಮ್‌ ಕಾರ್ಡ್‌ ಇಲ್ಲದೇ ಕರೆ ಮಾಡಲು ಹೀಗೆ ಮಾಡಿ..ಇದು ಸಂಪೂರ್ಣ ಉಚಿತ!

ಜಿಯೋ ಏರ್‌ ಫೈಬರ್‌ ಪ್ಲ್ಯಾನ್‌ಗಳ ಮಾಹಿತಿ

ಜಿಯೋ ಏರ್‌ ಫೈಬರ್‌ 599ರೂ. ಯೋಜನೆಯು 30mpbs ವೇಗದಲ್ಲಿ ಕೆಲಸ ನಿರ್ವಹಿಸಲಿದೆ. ಇದು 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಇದರ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ. 14 ಆಪ್ಸ್‌ ಸೇವೆ ಪಡೆದಿದೆ.

ಜಿಯೋ ಏರ್‌ ಫೈಬರ್‌ 899ರೂ. ಪ್ಲ್ಯಾನ್‌ 100mpbs ವೇಗದ ಸೌಲಭ್ಯ ಪಡೆದಿದೆ. ಇದು 550+ ಡಿಜಿಟಲ್ ಕನೆಕ್ಷನ್‌ಗಳನ್ನು ಒಳಗೊಂಡಿದ್ದು, ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

ಜಿಯೋ ಏರ್‌ ಫೈಬರ್‌ 1199ರೂ. ರೀಚಾರ್ಜ್‌ ಯೋಜನೆಯು 550+ ಡಿಜಿಟಲ್ ಕನೆಕ್ಷನ್ ಒಳಗೊಂಡಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮಿಯಂ ಸೇವೆ ಸೇರಿದಂತೆ ಡಿಸ್ನಿ+ ಹಾಟ್‌ಸ್ಟಾರ್‌, ಜೀ5, ಜಿಯೋ ಸಿನಿಮಾ, ಸನ್‌ ನೆಕ್ಸ್ಟ್‌ ಸೇರಿದಂತೆ 14 ಓಟಿಟಿ ಚಂದಾದಾರಿಕೆಯ ಸೇವೆಯನ್ನು ಒಳಗೊಂಡಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 300mpbs ಯೋಜನೆಯ ದರವು 1499ರೂ ಆಗಿದೆ. ಈ ಪ್ಲ್ಯಾನ್‌ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದೆ. ಇದರೊಂದಿಗೆ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಪಡೆದಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ ಪ್ಲ್ಯಾನ್‌ಗಳ ಮಾಹಿತಿ

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 1499ರೂ. ಯೋಜನೆಯು 300mpbs ಸ್ಪೀಡ್‌ ಪಡೆದಿದೆ. ಹಾಗೆಯೇ ಈ ಪ್ಲ್ಯಾನ್‌ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಇದರೊಂದಿಗೆ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ದೊರೆಯಲಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 2499ರೂ. ಯೋಜನೆಯು 500mpbs ವೇಗವನ್ನು ಒಳಗೊಂಡಿದೆ. ಈ ಪ್ಲ್ಯಾನ್‌ 550+ ಡಿಜಿಟಲ್ ಕನೆಕ್ಷನ್‌ ಪಡೆದಿದ್ದು, ಇದರಲ್ಲಿಯೂ ಸಹ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಕಾಣಬಹುದಾಗಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 3999ರೂ. ಯೋಜನೆಯು 1000mpbs (1gbps) ಸ್ಪೀಡ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಈ ಯೋಜನೆಯಲ್ಲಿ 550+ ಡಿಜಿಟಲ್ ಕನೆಕ್ಷನ್‌ ಲಭ್ಯ. ಅಲ್ಲದೇ 14 ಆಪ್ಸ್‌ ಸೇವೆ ಹಾಗೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ದೊರೆಯುತ್ತವೆ.

Best Mobiles in India

English summary
How to Make a Phone Call without SIM card using Jio AirFiber. Details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+