ವಾಟ್ಸಪ್‌ನಲ್ಲಿ ಡಿಲೀಟ್‌ ಮಾಡಿರುವ ಮೆಸೆಜ್ ಓದುವುದು ಹೇಗೆ?


ಅತೀ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಪ್ ಇತ್ತೀಚಿಗೆ ಕಳುಹಿಸಿದ ಮೆಸೆಜ್ ಡಿಲೀಟ್ ಮಾಡುವ ಆಯ್ಕೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಅದರ ಬೆನ್ನಲೇ ಇದೀಗ ನಿಗದಿತ ಸಮಯದ ಬಳಿಕ ಸ್ವಯಂ ಮೆಸೆಜ್ ಡಿಲೀಟ್ ಆಯ್ಕೆಯನ್ನು ಅಳವಡಿಸಲು ಮುಂದಾಗಿದೆ. ಮೆಸೆಜ್ ಡಿಲೀಟ್ ಆಯ್ಕೆಯು ಬಳಕೆದಾರರಿಗೆ ಉಪಯುಕ್ತವಾಗಿದೆ. ಹಾಗೆಯೇ ಡಿಲೀಟ್ ಮಾಡಿರುವ ಮೆಸೆಜ್ ಅನ್ನು ಮತ್ತೆ ಓದಬಹುದಾಗಿದೆ.

Advertisement

ಹೌದು, ವಾಟ್ಸಪ್‌ನಲ್ಲಿ ಡಿಲೀಟ್ ಮಾಡಿರುವ ಮೆಸೆಜ್‌ಗಳನ್ನು ಮತ್ತೆ ಓದಬಹುದಾಗಿದೆ. ಅದಕ್ಕಾಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಅನೇಕ ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳು ಲಭ್ಯ ಇವೆ. ಅವುಗಳಲ್ಲಿ ವಾಟ್ಸಪ್ ರಿಮೋವಡ್‌ಪ್ಲಸ್‌ (WhatsRemoved+ app) ಆಪ್‌ ಆಕರ್ಷಕ ಅನಿಸಿದೆ. ಎಷ್ಟೋ ಬಾರಿ ಅಚಾನಕ್ ಆಗಿ ಮೆಸೆಜ್ ಡಿಲೀಟ್ ಮಾಡಿಬಿಟ್ಟಿರುತ್ತವೆ. ಡಿಲೀಟ್ ಮಾಡಿರುವ ಮೆಸೆಜ್ ಮತ್ತೆ ತೆರೆಯಲು ಅವಕಾಶಗಳನ್ನು ಈ ಆಪ್‌ ಒದಗಿಸುತ್ತದೆ. ಮೀಡಿಯಾ ಫೈಲ್‌ಗಳನ್ನು ಮರಳಿ ಪಡೆಯುವ ಆಪ್ಸ್‌ಗಳು ಇವೆ. ಹಾಗಾದರೆ ಡಿಲೀಟ್ ಆದ ವಾಟ್ಸಪ್ ಮೆಸೆಜ್ ಮತ್ತೆ ತೆರೆಯುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

Advertisement
ಥರ್ಡ್‌ಪಾರ್ಟಿ ಆಪ್

WhatsRemoved+ app ಆಪ್‌ ಥರ್ಡ್‌ಪಾರ್ಟಿ ಆಪ್ ಆಗಿದ್ದು, ಈ ರೀತಿಯ ಅನೇಕ ಆಪ್ಸ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆ. WhatsRemoved+ appನಲ್ಲಿ ಬಳಕೆದಾರರು ಡಿಲೀಟ್ ಮಾಡಿರುವ ಮೆಸೆಜ್‌ಗಳನ್ನು ಸುಲಭ ಹಂತಗಳ ಮೂಲಕ ಮರಳಿ ತೆರೆಯಬಹುದಾಗಿದೆ.

ವಾಟ್ಸಪ್‌ನಲ್ಲಿ ಡಿಲೀಟ್ ಮಾಡಿದ ಮೆಸೆಜ್ ಓದಲು ಹೀಗೆ ಮಾಡಿ.(ಆಂಡ್ರಾಯ್ಡ್‌)

* ಫೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ.
* WhatsRemoved + ಅಪ್ಲಿಕೇಶನ್ ಡೌನ್‌ಲೋಡ್ ಮಾಡಿರಿ.
* WhatsRemoved + ಆಪ್‌ ಇನ್‌ಸ್ಟಾಲ್‌ ಬಳಿಕ, ಅಪ್ಲಿಕೇಶನ್ ಬೇಡುವ ಅಗತ್ಯ ಆಪ್ಸ್‌ಗಳ ಅನುಮತಿಗಳನ್ನು ನೀಡಿ.
* ನಂತರ WhatsRemoved + ನಲ್ಲಿ ಯಾವೆಲ್ಲಾ ಆಪ್ಸ್‌ಗಳನ್ನು ಅನುಸರಿಸಲು ಬಯಸುತ್ತಿರು ಎಂಬುದನ್ನು ಸೆಟ್ ಮಾಡಿ.
* ಡಿಲೀಟ್ ಮಾಡಿರುವ ಫೈಲ್‌ಗಳನ್ನು ಪತ್ತೆಹಚ್ಚಲು ಮತ್ತು ಉಳಿಸಲು ನೀವು ಬಯಸುತ್ತೀರೋ ಇಲ್ಲವೋ ಎಂದು ಅಪ್ಲಿಕೇಶನ್ ಕೇಳುತ್ತದೆ ಮತ್ತು ನೀವು ‘ಹೌದು, ಫೈಲ್‌ಗಳನ್ನು ಉಳಿಸಿ' ಆಯ್ಕೆಯನ್ನು ಆರಿಸಬೇಕಾಗುತ್ತದೆ
* ಸೇವ್ ಅನುಮತಿಗಳನ್ನು ನೀಡಿದ ನಂತರ, ನೀವು ಆಯ್ಕೆ ಮಾಡಿದ ವಾಟ್ಸಪ್‌ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಿಂದ ಡಿಲೀಟ್ ಮಾಡಲಾದ ಮೆಸೆಜ್ ಓದಲು ಲಭ್ಯವಾಗುತ್ತವೆ.

ಐಫೋನ್‌ನಲ್ಲಿ ಅಲಭ್ಯ

ಡಿಲೀಟ್ ಮಾಡಿರುವ ಮೆಸೆಜ್‌ಗಳನ್ನು ಮರಳಿ ಓದಲು ಐಫೋನ್‌ನಲ್ಲಿ ಯಾವುದೇ ಥರ್ಡ್‌ಪಾರ್ಟಿ ಆಪ್ಸ್‌ ಸಫೋರ್ಟ್‌ ಇಲ್ಲ. ಹೀಗಾಗಿ ಐಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ ನಲ್ಲಿ ಲಭ್ಯವಾದಂತೆ ಡಿಲೀಟ್ ಮಾಡಿರುವ ಮೆಸೆಜ್ ಪುನಃ ಓದುವ ಅವಕಾಶ ಇಲ್ಲವಾಗಿದೆ. ಐಫೋನ್ ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತದೆ ಹೀಗಾಗಿ ಥರ್ಡ್‌ಪಾರ್ಟಿ ಆಪ್ಸ್‌ಗಳಿಗೆ ಅನುಮತಿ ಇಲ್ಲ.

ಮೆಸೆಜ್ ಡಿಲೀಟ್‌ ಆಯ್ಕೆ

ವಾಟ್ಸಪ್ 2018ರಲ್ಲಿ ಮೆಸೆಜ್ ಡಿಲೀಟ್ ಸೌಲಭ್ಯವನ್ನು ಪರಿಚಯಿಸಿದೆ. ಮೆಸೆಜ್ ಸೆಂಡ್ ಮಾಡಿದ ಸ್ವಲ್ಪ ಸಮಯದಲ್ಲಿಯೇಆ ಮೆಸೆಜ್ ಅನ್ನು ಡಿಲೀಟ್ ಮಾಡಬಹುದಾಗಿದೆ. ಡಿಲೀಟ್ ಮಾಡುವಾಗ ಎರಡು ಆಯ್ಕೆಗಳು ಕಾಣಿಸುತ್ತವೆ. ಅವುಗಳು ಕ್ರಮವಾಗಿ ಡಿಲೀಟ್ ಫಾರ್ ಮಿ ಮತ್ತು ಡಿಲೀಟ್ ಫಾರ್ ಎವರಿಒನ್. ಬಳಕೆದಾರರು ಈ ಆಯ್ಕೆಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿ ಮೆಸೆಜ್ ಡಿಲೀಟ್ ಮಾಡಬಹುದಾಗಿದೆ.

Best Mobiles in India

English Summary

WhatsApp Delete Messages feature allows users to delete messages even after they have been sent.