ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮುನ್ನ ಈ ಸಂಗತಿಗಳನ್ನು ನೀವು ತಿಳಿಯಲೇಬೇಕು!


ಸದ್ಯ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಬಹುತೇಕ ಕೆಲಸಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಅದಕ್ಕಾಗಿ ಸ್ಮಾರ್ಟ್‌ಫೋನ್‌ಗಳಿಗೆ ಅಧಿಕ ಬ್ಯಾಟರಿ ಲೈಫ್ ಅಗತ್ಯ ಅನಿಸುತ್ತದೆ. ಈ ದಿಸೆಯಲ್ಲಿ ಮೊಬೈಲ್ ಕಂಪನಿಗಳು ಇತ್ತೀಚಿನ ಹೊಸ ಫೋನ್‌ಗಳಲ್ಲಿ ಅಧಿಕ ಬ್ಯಾಟರಿ ಸಾಮರ್ಥ್ಯವನ್ನು ಒದಗಿಸುತ್ತಿವೆ. ಆದಾಗ್ಯೂ ಕೆಲವೊಮ್ಮೆ ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್‌ಅಪ್ ಕಡಿಮೆಯೇ ಅನಿಸುತ್ತದೆ.

Advertisement

ಪ್ರಸ್ತುತ ಅಧಿಕ ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿವೆ. ಮಲ್ಟಿಮೀಡಿಯಾ ಸೇರಿದಂತೆ ಅನೇಕ ಅಗತ್ಯತೆಗಳ ಬಳಕೆಯಿಂದ ಫೋನ್‌ಗಳು ಹೆಚ್ಚೆಂದರೆ ಒಂದು ದಿನದ ಮಟ್ಟಿಗೆ ಬಾಳಿಕೆ ಬರುತ್ತವೆ. ಇನ್ನು ಬಹುತೇಕ ಬಳಕೆದಾರರಿಗೆ ಮೈಂಡ್‌ನಲ್ಲಿ ಫೋನ್ ಯಾವಾಗ ಚಾರ್ಜ್ ಮಾಡಬೇಕು? ಬ್ಯಾಟರಿ ಡೌನ್‌ ಆದಾಗ ಏನು ಮಾಡಬೇಕು? ಬೇರೆ ಕಂಪನಿಯ ಚಾರ್ಜರ್ ಬಳಸಬಹುದೇ? ಫಾಸ್ಟ್‌ ಚಾರ್ಜರ್ ಓಕೆ ನಾ? ಈ ರೀತಿಯಾದ ಹಲವು ಪ್ರಶ್ನೆಗಳು ಸುಳಿದಾಡುತ್ತಿರುತ್ತವೆ. ಅಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿರಿ.

Advertisement
ಬ್ಯಾಟರಿ ಡ್ರೈ ಆಗಲು ಬಿಡಬೇಡಿ

ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.

ಬಿಸಿ ಮತ್ತು ತಂಪು ಒಗ್ಗಲ್ಲ

ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ (Lithium-ion batteries) ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.

ಚಾರ್ಜ್ ಮಾಡುವಾಗ ಫೋನ್ ಬಳಕೆ ಬೇಡ

ಬಹುತೇಕರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುತ್ತಾರೆ. ಈ ರೀತಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದು ಬ್ಯಾಟರಿ ಲೈಫ್‌ಗೂ ಧಕ್ಕೆ ಹಾಗೂ ಅಪಾಯದ ಸಾಧ್ಯತೆಗಳಿ ಅಧಿಕವಾಗಿರುತ್ತವೆ. ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಅತೀ ಉತ್ತಮ.

ಒಂದೇ ಸಾರಿ ಪೂರ್ಣ ಚಾರ್ಜ್ ಮಾಡಲೇಬೇಡಿ

ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗಿದ್ದಾಗ ಫೋನ್ ಚಾರ್ಜಿಂಗ್ ಹಾಕಿ. ಆದರೆ ಫೋನ್ 0% ಪರ್ಸೆಂಟ್‌ನಿಂದ 100% ವರೆಗೆ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೀಗೆ ಒಂದೇ ಬಾರಿಗೆ ಶೂನ್ಯದಿಂದ ಪೂರ್ಣ ಚಾರ್ಜ್ ಬ್ಯಾಟರಿ ಬಾಳಿಕೆಗೆ ಹಾನಿ ಉಂಡು ಮಾಡುವ ಸಾಧ್ಯತೆಗಳಿರುತ್ತವೆ. ಸುಮಾರು 60% ನಿಂದ 75% ಪರ್ಸೆಂಟ್ ನಡುವೆ ಇದ್ದಾಗ ಚಾರ್ಜಿಂಗ್ ತೆಗೆಯಿರಿ.

ಒಂದು ದಿನಕ್ಕೆ ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು

ಒಂದು ದಿನಕ್ಕೆ ಒಂದೇ ಬಾರಿ ಚಾರ್ಜ್ ಮಾಡಬೇಕು ಎಂದೆನಿಲ್ಲ. ಆದರೆ ದಿನಕ್ಕೆ ಎರಡು-ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.

ಚಾರ್ಜ್ ವೇಳೆ ಹೀಗೆ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್, ವೈಫೈ, ಬ್ಲೂಟೂತ್, ಹಾಟ್‌ಸ್ಪಾಟ್, ವೈಬ್ರೆಷನ್‌ ಮೋಡ್ ಇಂತಹ ಸೇವೆಗಳನ್ನು ಆಫ್‌ ಮಾಡುವುದು ಬ್ಯಾಟರಿ ಚಾರ್ಜಿಂಗ್‌ಗೆ ಪೂರಕ ಅನಿಸುತ್ತದೆ. ಹೀಗಾಗಿ ಚಾರ್ಜ್ ಮಾಡುವಾಗ ಈ ಸೇವೆಗಳನ್ನು ಆಫ್ ಮಾಡಿಬಿಡಿ. ಅಗತ್ಯ ಇದ್ದಾಗ ಮಾತ್ರ ಈ ಸೇವೆಗಳನ್ನು ಸಕ್ರಿಯ ಮಾಡಿಕೊಳ್ಳಿರಿ.

ಬಿಸಿಲಿನಲ್ಲಿ ಚಾರ್ಜ್ ಬೇಡ

ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡುವಾಗ ನಿಮ್ಮ ಫೋನಿಗೆ ಬಿಸಿಲು ತಾಗದಿರಲಿ. ಏಕೆಂದರೇ ಈ ಮೇಲೆ ಹೇಳಿದಂತೆ ಫೋನಿನಲ್ಲಿನ ಲಿಥೀಯಮ್ ಬ್ಯಾಟರಿ ಅತೀಯಾದ ಬಿಸಿ ಸಹಿಸಲ್ಲ. ಇದರಿಂದ ಬ್ಯಾಟರಿ ಬಾಳಿಕೆ ಕುಗ್ಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ರೂಮ್‌ ಟೆಂಪರೇಚರ್ ಇದ್ದರೆ ಒಳ್ಳೆಯದು.

ಹೈ-ಸ್ಪೀಡ್‌ ಎಸ್‌ಡಿ ಕಾರ್ಡ್

ಇತ್ತೀಚಿನ ಹೊಸ ಸ್ಮಾರ್ಟ್‌ಫೋನಗಳು ಅಧಿಕ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಅದ್ಯಾಗೂ ಕೆಲವು ಬಳಕೆದಾರರು ಹೆಚ್ಚಿನ ಮೆಮೊರಿಗಾಗಿ ಬಾಹ್ಯವಾಗಿ ಎಸ್‌ಡಿ ಕಾರ್ಡ್ ಬಳಕೆ ಮಾಡುತ್ತಾರೆ. ಕಡಿಮೆ ಸ್ಪೀಡಿನ ಎಸ್‌ಡಿ ಕಾರ್ಡ್‌ ಬಳಕೆಯು ಫೋನಿನ ಕಾರ್ಯವೈಖರಿಗೆ ದಕ್ಕೆ ಉಂಡುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಸ್‌ಡಿ ಕಾರ್ಡ್‌ ಹೈ ಸ್ಪೀಡ್‌ ಸಾಮರ್ಥ್ಯ ಪಡೆದಿರಲಿ.

ಅಪ್‌ಡೇಟ್‌ ಇರಲಿ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್‌ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಆಟೋ ಸಿಂಕ್-Sync

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ.

Best Mobiles in India

English Summary

Keeping your Smartphone charged is easy in the short term. Just keep an eye on their battery level and plug them into the wall when it gets low. to know more visit to kannada.gizbot.com