ಅತ್ಯುತ್ತಮ ಸೆಲ್ಫಿ ಫೋಟೊ ಸೆರೆಹಿಡಿಯಲು ಹೀಗೆ ಮಾಡಿ!


ಯಾರ ನೆರವಿಲ್ಲದೇ ಫೋಟೊ ಸೆರೆಹಿಡಿಯಲು ಇರುವ ಒಂದು ಬೆಸ್ಟ್ ಪ್ಲಾಟ್‌ಫಾರ್ಮ್ ಅಂದ್ರೆ ಅದು ಸೆಲ್ಫಿ ಕ್ಲಿಕ್. ಸೆಲ್ಫಿ ಪೋಟೊ ಟ್ರೆಂಡ್ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಮೂಡಿಸಿ ಫೋಟೊ ಪ್ರಿಯರಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಈ ನಿಟ್ಟಿನಲ್ಲಿ ನೂತನ ಫೋನ್‌ಗಳು ಸಹ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ಗೆ ಅತೀ ಹೆಚ್ಚಿನ ಆದ್ಯತೆ ನೀಡುತ್ತಾ ಸಾಗಿವೆ. ಹೈ ಎಂಡ್ ರೆಸಲ್ಯೂಶ್‌ನ ಸಾಮರ್ಥ್ಯದ ಸೆನ್ಸಾರ್ ನೀಡುತ್ತಿವೆ. ಆದ್ರೂ ಬಹುತೇಕರು ಸೆಲ್ಫಿ ಫೋಟೊ ಸರಿಯಾಗಿ ಬಂದಿಲ್ಲ ಎನ್ನುವ ಮಾತುಗಳನ್ನಾಡುವುದನ್ನು ಕೇಳಿದ್ದೆವೆ.

Advertisement

ಬಳಕೆದಾರರು ತಮ್ಮ ಬಳಿ ಇರುವ ಸ್ಮಾರ್ಟ್‌ಫೋನಿನಲ್ಲಿಯೇ ಬೆಸ್ಟ್ ಸೆಲ್ಫಿ ಫೋಟೊ ಸೆರೆ ಹಿಡಿಯಬಹುದಾಗಿದೆ. ಆದರೆ ಫೋಟೊ ಕ್ಲಿಕ್ಕಿಸುವಾಗ ಫೋಟೊಗ್ರಫಿ ಬೇಸಿಕ್ ಕ್ರಮಗಳನ್ನು ಮರೆಯದೆ ಅನುಸರಿಸಬೇಕು. ಜೊತೆಗೆ ಕ್ರಿಯೆಟಿವ್ ಆದ ಐಡಿಯಾಗಳಿರಬೇಕು. ಇವೆರಡರ ಸಮ್ಮಿಶ್ರಣದಿಂದ ಖಂಡಿತಾ ಅತ್ಯುತ್ತಮ ಸೆಲ್ಫಿ ಫೋಟೊಗಳು ಮೂಡಿಬರಲು ಸಾಧ್ಯವಿದೆ. ಹಾಗಾದರೆ ಸೆಲ್ಫಿ ಫೋಟೊ ಸೆರೆಹಿಡಿಯುವಾಗ ಅನುಸರಿಸಬೇಕಾದ ಟಿಪ್ಸ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

Advertisement
ಸರಿಯಾದ ಬೆಳಕು ಇರಲಿ

ಸೆಲ್ಪಿ ಫೋಟೊ ಅತ್ಯುತ್ತಮವಾಗಿ ಮೂಡಿಬರಲು ಬೆಳಕಿನ ಪಾತ್ರ ತುಂಬಾ ಮಹತ್ವವಾಗಿದ್ದು, ಈ ಅಂಶ ಸೆಲ್ಫಿ ಫೋಟೊಗೂ ಅನ್ವಯಿಸುತ್ತದೆ. ಹೀಗಾಗಿ ಸೆಲ್ಫಿ ಸೆರೆಹಿಡಿಯುವಾಗ ಸಾಧ್ಯವಾದಷ್ಟು ಬೆಳಕಿನತ್ತ ಮುಖ ಮಾಡಿರಿ ಆಗ ಫೋಟೊ ಉತ್ತಮವಾಗಿ ಮೂಡಿಬರುತ್ತದೆ. ಮುಂಜಾನೆಯ ತಿಳಿ ಬಿಸಿಲು ಇದ್ದರಂತೂ ಬೆಸ್ಟ್‌. ಹಾಗಂತ ಹೆಚ್ಚು ಪ್ರಖರವಾದ ಬೆಳಕು, ಹೆಚ್ಚು ಬಿಸಿಲು ಇದ್ದರೂ ಒಳ್ಳೆಯದಲ್ಲ.

ಗ್ರೂಪ್‌ ಫೋಟೊ ವೈಲ್ಡ್‌ ಆಂಗಲ್

ಗ್ರೂಪ್‌ ಸೆಲ್ಫಿ ಫೋಟೊ ಸೆರೆಹಿಡಿಯುವುದಿದ್ದರೇ ವೈಲ್ಡ್‌ ಆಂಗಲ್‌ ಮೋಡ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಆಗ ಅದು ಪರ್ಫೆಕ್ಟ್ ಸೆಲ್ಫಿ ಎಂದೆನಿಸಿಕೊಳ್ಳುತ್ತದೆ. ಪೋರ್ಟಟ್‌ ಆಂಗಲ್‌ನಲ್ಲಿ ಗ್ರೂಪ್‌ ಸೆಲ್ಫಿ ತೆಗೆದರೇ ಸರಿಯಾಗಿ ಕವರ್‌ ಆಗುವುದಿಲ್ಲ. ಇತ್ತೀಚಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿಯೂ ವೈಲ್ಡ್‌ ಆಂಗಲ್ ಮೋಡ್ ಆಯ್ಕೆ ನೀಡಿರುತ್ತಾರೆ.

ಕ್ಯಾಮೆರಾ ಫ್ಲ್ಯಾಶ್‌ ಲೈಟ್ ಬಳಸಿ

ಒಂದು ವೇಳೆ ರಾತ್ರಿ ಸಮಯದಲ್ಲಿ ಅಥವಾ ಮಂದ ಬೆಳಕಿನಲ್ಲಿ ಸೆಲ್ಫಿ ಸೆರೆಹಿಡಿಯಬೇಕಿದ್ದರೇ ಫ್ರಂಟ್‌ ಫ್ಲ್ಯಾಶ್‌ ಲೈಟ್‌ ಬಳಸಿ ಫೋಟೊದ ಗುಣಮಟ್ಟವನ್ನು ಹೆಚ್ಚಿಸಬಹುದು. ಪ್ರಸ್ತುತ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್‌ ಲೈಟ್‌ ಆಯ್ಕೆಯನ್ನು ಹೊಂದಿರುತ್ತವೆ. ಒಂದು ವೇಳೆ ಫ್ಲ್ಯಾಶ್‌ ಲೈಟ್‌ ಇಲ್ಲದಿದ್ದರೇ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿರಿ.

ಮುಗುಳುನಗೆ ಇರಲಿ

ಸೆಲ್ಫಿ ಫೋಟೊವು ಅತ್ಯುತ್ತಮವಾಗಿ ಮೂಡಿಬರಲು ಫೋಟೊದಲ್ಲಿ ನೀವು ಚೆನ್ನಾಗಿ ಕಾಣುವುದು ಅಷ್ಟೇ ಮುಖ್ಯ. ಹೀಗಾಗಿ ಫೋಟೊ ಸೆರೆಹಿಡಿಯುವಾಗ ಸೆಲ್ಫಿಗೆ ಮುಗುಳುನಗೆ ಸ್ಮೈಲ್‌ ನೀಡಿರಿ. ನಗುಮೋಗವು ಫೋಟೊದ ಅಂಧವನ್ನು ಮತ್ತಷ್ಟು ಬ್ಯೂಟಿಫುಲ್‌ ಆಗಿಸುತ್ತದೆ. ಕ್ಯಾಮೆರಾವನ್ನು ನಿಮ್ಮ ಕಣ್ಣುಗಳ ನೇರಕ್ಕಿಂತ ಎತ್ತರದಲ್ಲಿ ಹಿಡಿಯಿರಿ ಮತ್ತು ಕ್ಯಾಮೆರಾ ಲೆನ್ಸ್‌ಗಳತ್ತ ನಿಮ್ಮ ದೃಷ್ಠಿ ಇರಲಿ.

ಸೆಲ್ಫಿ ಆಪ್ಸ್‌ಗಳನ್ನು ಬಳಸಿ

ಸೆಲ್ಫಿ ಫೋಟೋಗಳನ್ನು ಮತ್ತಷ್ಟು ಉತ್ತಮವಾಗಿಸುವ ಸಲುವಾಗಿ ಅನೇಕ ಸೆಲ್ಫಿ ಪೋಟೊ ಆಪ್ಸ್‌ಗಳು ಪ್ಲೇ ಸ್ಟೋರ್‌ಗಳಲ್ಲಿ ಲಭ್ಯ ಇವೆ. ಉತ್ತಮ ಸೆಲ್ಫಿಗೆ ನಿಮ್ಮ ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳು ಅತ್ಯುತ್ತಮ ಸೆಲ್ಫಿ ಫೋಟೊಗೆ ಬೆಂಬಲಿಸದಿದ್ದರೇ, ಸೆಲ್ಫಿ ಆಪ್ಸ್‌ಗಳನ್ನು ಬಳಸಬಹುದಾಗಿದೆ. ಈ ಸೆಲ್ಫಿ ಆಪ್ಸ್‌ಗಳು ಫೋಟೋ ಉತ್ತಮಗೊಳಿಸುವ ಅನೇಕ ಆಯ್ಕೆಗಳನ್ನು ಹೊಂದಿರುತ್ತವೆ.

Best Mobiles in India

English Summary

These Few Tips Help You To Take A Good Selfie