Home
ಟೆಕ್ ನೌಕರಿ

ನಿಮ್ಮ ಸ್ಮಾರ್ಟ್‌ಫೋನ್‌ ಸುರಕ್ಷತೆಗೆ ಈ ಟಿಪ್ಸ್‌ ಖಂಡಿತಾ ನೆರವಾಗಲಿವೆ!

ಸ್ಮಾರ್ಟ್‌ಫೋನ್ ಇಂದಿನ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಆಗಿದ್ದು, ಬಹುತೇಕ ಖಾಸಗಿ ಮಾಹಿತಿಗಳು ಸೇರಿದಂದೆ, ಬ್ಯಾಂಕ್ ಮಾಹಿತಿಗಳನ್ನು ಸ್ಮಾರ್ಟ್‌ಫೋನಿನಲ್ಲಿಯೇ ಸ್ಟೋರ್ ಮಾಡಿರುತ್ತಾರೆ. ಹೀಗಾಗಿ ಸ್ಮಾರ್ಟ್‌ಫೋನ್ ಕಾಳಜಿ ಮುಖ್ಯವಾಗಿದ್ದು, ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು ಎನ್ನುವುದು ಒಂದೆಡೆಯಾದರೇ, ಸ್ಮಾರ್ಟ್‌ಫೋನ್‌ನಲ್ಲಿನ ಪ್ರೈವೆಸಿ ಸೆಟ್ಟಿಂಗ್‌ನಲ್ಲಿಯೂ ಕೆಲವು ಅಗತ್ಯ ಸೇಫ್ಟಿ ಫೀಚರ್ಸ್‌ಗಳನ್ನು ಸೆಟ್‌ ಮಾಡುವುದು ಅಷ್ಟೇ ಮುಖ್ಯ.

ಅಗತ್ಯ ಪ್ರೈವಸಿ ಸೆಟ್ಟಿಂಗ್‌

ಹೌದು, ಸ್ಮಾರ್ಟ್‌ಫೋನಿನಲ್ಲಿ ಲಭ್ಯವಿರುವ ಕೆಲವು ಅಗತ್ಯ ಪ್ರೈವಸಿ ಸೆಟ್ಟಿಂಗ್‌ಗಳನ್ನು ಬಳಸಕೊಳ್ಳುವುರ ಮೂಲಕ ಫೋನನ್ನು ಸುರಕ್ಷಿತವಾಗಿಡಬಹುದು. ಬ್ಲೂಟೂತ್, ವೈಫೈ, ಇಂಟರ್ನೆಟ್‌ ಹೀಗೆ ಹಲವು ಹಂತಗಳಲ್ಲಿ ನಿಮಗರಿವಿಲ್ಲದೇ ಸ್ಮಾರ್ಟ್‌ಫೋನ್‌ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿರುತ್ತದೆ. ಆದರೆ ಪ್ರೈವಸಿ ಸೆಟ್ಟಿಂಗ್‌ನಲ್ಲಿ ಕೆಲವು ಸುರಕ್ಷತೆಯ ಕ್ರಮಗಳನ್ನು ಅನುಸರಿಸುವ ಮೂಲಕ ಭದ್ರತೆ ನೀಡಬಹುದು. ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ ಸುರಕ್ಷತೆಗಾಗಿ ಪ್ರೈವಸಿ ಸೆಟ್ಟಿಂಗ್‌ನಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಕುರಿತು ಮಾಹಿತಿ ನೀಡಲಾಗಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ನೋಟಿಫಿಕೇಶನ್ ಆಕ್ಸಸ್‌

ನೋಟಿಫಿಕೇಶನ್ ಆಕ್ಸಸ್‌

ಸ್ಮಾರ್ಟ್‌ಫೋನ್‌ಗೆ ಹಲವು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಿರಿ. ಅವುಗಳಲ್ಲಿ ಬಹುತೇಕ ಎಲ್ಲ ಆಪ್ಸ್‌ಗಳು ನೋಟಿಫೀಕೇಶನ್‌ ಆಯ್ಕೆ ಆಕ್ಸಸ್‌ ಸಕ್ರಿಯಗೊಂಡಿರುತ್ತವೆ. ಅವುಗಳಲ್ಲಿ ಕೆಲವೊಂದು ಆಪ್ಸ್‌ಗಳು ಸುರಕ್ಷಿತವಾಗಿರುವುದಿಲ್ಲ, ಹೀಗಾಗಿ ಎಲ್ಲ ಆಪ್ಸ್‌ಗಳಿಗೆ ನೋಟಿಫಿಕೇಶನ ಆಕ್ಸಸ್ ಅಗತ್ಯ ಇರುವುದಿಲ್ಲ. ಅದಕ್ಕಾಗಿ ಥರ್ಡ್‌ಪಾರ್ಟಿ ಆಪ್ಸ್‌ಗಳಿಗೆ ಆಕ್ಸಸ್‌ ನೀಡಬೇಡಿ ಮತ್ತು ಥರ್ಡ್‌ಪಾರ್ಟಿ ಆಪ್ಸ್‌ ಇನ್‌ಸ್ಟಾಲ್‌ ಮಾಡುವಾಗಲು ಎಚ್ಚರವಹಿಸಿ.

ಆಪ್ಸ್ ಪರ್ಮಿಶನ್‌

ಆಪ್ಸ್ ಪರ್ಮಿಶನ್‌

ಆಪ್ಸ್‌ಗಳನ್ನು ಇನ್ಸ್‌ಸ್ಟಾಲ್ ಮಾಡುವಾಗ ಬಹುತೇಕ ಎಲ್ಲ ಆಪ್ಸ್ಗಳು ಫೋನಿನ ಡೇಟಾ, ಆಕ್ಸರ್ ಸೆನ್ಸಾರ್, ಲೊಕೇಶನ್, ಕ್ಯಾಮೆರಾ ಆಯ್ಕೆಗಳ ಪರ್ಮಿಶನ್ ಕೇಳುತ್ತವೆ. ಆಪ್‌ಗೆ ಅಗತ್ಯವಿರುವ ಆಯ್ಕೆಗಳಗೆ ಮಾತ್ರ ಆಕ್ಸಸ್ ನೀಡುವುದು ಉತ್ತಮ. ಈಗಾಗಲೇ ಇನ್‌ಸ್ಟಾಲ್‌ ಆಗಿರುವ ಆಪ್ಸ್ಗಳು ಯಾವೆಲ್ಲಾ ಪರ್ಮಿಶನ್ ಪಡೆದಿವೆ ಎನ್ನವುದನ್ನು ನೋಡಲು ನೋಟಿಫಿಕೇಶನ್> ಆಪ್ಸ್‌ ಮತ್ತು ನೋಟಿಫಿಕೇಶನ್ > ಅಡ್ವಾನ್ಸಡ್ > ಆಪ್‌ ಪರ್ಮಿಶನ್‌ ಹಂತಗಳನ್ನು ಅನುಸರಿಸಿ ತಿಳಿಯಿರಿ.

ಕನೆಕ್ಟೆಡ್‌ ಆಪ್ಸ್

ಕನೆಕ್ಟೆಡ್‌ ಆಪ್ಸ್

ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಗೂಗಲ್ ಅಕೌಂಟ್‌ಗೆ ಜೋಡಿಸಿರುವ ಜಿ-ಮೇಲ್ ಅಗತ್ಯ ಇರುತ್ತದೆ. ಡೌನ್‌ಲೋಡ್‌ ಮಾಡಿಕೊಂಡಿರುವ ಆಪ್ಸ್‌ಗಳಲ್ಲಿ ಕೇಲವು ಥರ್ಡ್‌ ಪಾರ್ಟಿ ಆಪ್ಸ್‌ಗಳು ನಿಮ್ಮ ಮೇಲ್‌ಗೆ ಲಿಂಕ್ ಆಗಿರುತ್ತವೆ. ಅವುಗಳನ್ನು ಡಿಸ್‌ಕನೆಕ್ಟ್‌ ಮಾಡಬಹುದಾಗಿದೆ. ಅದಕ್ಕಾಗಿ ಸೆಟ್ಟಿಂಗ್ > ಗೂಗಲ್ > ಕನೆಕ್ಟೆಡ್ ಆಪ್ಸ್‌. ಈ ಹಂತಗಳನ್ನು ಅನುಸರಿಸಿ. ಡಿಸ್‌ಕನೆಕ್ಟ್‌ ಮಾಡಬಯಸುವ ಆಪ್ಸ್‌ ಸೆಲೆಕ್ಟ್‌ ಮಾಡಬಹುದು.

ವೈಫೈ ಕಂಟ್ರೋಲ್

ವೈಫೈ ಕಂಟ್ರೋಲ್

ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಆಯ್ಕೆ ಇದ್ದೇ ಇರುತ್ತದೆ. ವೈಫೈ ಸೌಲಭ್ಯ ಬಳಸಿ ಇತರೆ ಮೂಲಗಳಿಂದ ಇಂಟರ್ನೆಟ್ ಪಡೆಯುವುದು ಸಾಮಾನ್ಯ. ಆದರೆ ವೈಫೈ ಸಂಪರ್ಕ ಪಡೆಯಲು ಸ್ಕ್ಯಾನ್ ಆಯ್ಕೆ ಒತ್ತಿದಾಗ, ನಿಮ್ಮ ಲೊಕೇಶನ್ ಆಫ್‌ ಇದ್ದರು, ಸ್ಥಳ ಟ್ರಾಕ್‌ ಆಗುತ್ತದೆ. ಕೇಲವು ಆಪ್ಸ್‌ಗಳು(ವೈಫೈ) ಅನಗತ್ಯವಾಗಿ ಲೊಕೇಶನ್ ಟ್ರಾಕ್‌ ಆಕ್ಸಸ್‌ ಆಗಿರುತ್ತವೆ ಅವುಗಳನ್ನು ಡಿಸೇಬಲ್‌ ಮಾಡಲು. ಸೆಟ್ಟಿಂಗ್ಸ್‌ > ನೋಟಿಫಿಕೇಶನ್> ಆಪ್ಸ್‌ ಮತ್ತು ನೋಟಿಫಿಕೇಶನ್ > ಅಡ್ವಾನ್ಸಡ್ > ಸ್ಪೆಷಿಲ್ ಆಪ್ಸ್‌ ಆಕ್ಸಸ್‌ > ವೈಫೈ ಕಂಟ್ರೋಲ್. ಅನುಸರಿಸಿ.

ಸಾಫ್‌ವೇರ್ ಅಪ್‌ಡೇಟ್

ಸಾಫ್‌ವೇರ್ ಅಪ್‌ಡೇಟ್

ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅಪ್‌ಡೇಟ್‌ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿ. ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯ ಏಕೆಂದರೇ ಅಪ್‌ಡೇಟ್‌ ವರ್ಷನ್‌ ನಲ್ಲಿ ಹಲವು ಹೊಸ ಫೀಚರ್ಸ್‌ಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಪ್ರೈವೆಸಿಗೂ ಹೆಚ್ಚಿನ ಆಯ್ಕೆಗಳು ಸಿಗಲಿದ್ದು, ಸಾಫ್ಟ್‌ವೇರ್‌ ಅಪ್‌ಡೇಟ್‌ನಿಂದ ಫೋನಿನ ಕಾರ್ಯವು ಚುರುಕಾಗಿ ಇರುತ್ತದೆ. ವೈಫೈ ಅಥವಾ ಸೆಲ್ಯುಲರ್ ಡೇಟಾ ಬಳಸಿ ಅಪ್‌ಡೇಟ್ ಮಾಡಿಕೊಳ್ಳಿರಿ.

Best Mobiles in India

English summary
There are some options you should tweak for increased security and privacy. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+