Home
ಟೆಕ್ ನೌಕರಿ

ಆನ್‌ಲೈನಿನಲ್ಲಿ ಮತದಾರ ಪಟ್ಟಿಗೆ ಹೆಸರು ಸೇರಿಸಿ..! ಹೇಗೆ..? ಎಲ್ಲಿ..?

By Srinidhi

ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಲು ಜನವರಿ 12 ರವರೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಜನವರಿ 12ರ ನಂತರದಲ್ಲಿ ಹೊಸ ಮತದಾರರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ ಎನ್ನಲಾಗಿದೆ.

ಆನ್‌ಲೈನಿನಲ್ಲಿ ಮತದಾರ ಪಟ್ಟಿಗೆ ಹೆಸರು ಸೇರಿಸಿ..! ಹೇಗೆ..? ಎಲ್ಲಿ..?

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ಈ ಬಾರಿ ಚುನಾವಣಾ ಆಯೋಗವು ಆನ್‌ಲೈನಿನಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಕುರಿತು ಮಾಹಿತಿಯನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಹೊಸದಾಗಿ ಮತದಾರರಾಗುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ www.nvsp.in ಅಥವಾ www.voterreg.kar.nic.in ತಾಣಗಳಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದು.

ಆಫ್ ಲೈನಿನಲ್ಲಿ ಭರ್ತಿ ಮಾಡಬಹುದು:

ಆಫ್ ಲೈನಿನಲ್ಲಿ ಭರ್ತಿ ಮಾಡಬಹುದು:

ಇದಲ್ಲದೇ ಅರ್ಜಿಗಳನ್ನು ಆಫ್ ಲೈನಿನಲ್ಲಿ ಭರ್ತಿ ಮಾಡಬಹುದಾಗಿದ್ದು, www.eci.nic.in ಅಥವಾ www.ceokarnataka.kar.nic.in ವೆಬ್ ಸೈಟಿ ನಿಂದ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ, ಜೊತೆಗೆ ಆಧಾರ್‌, ಪಡಿತರ ಚೀಟಿ, ಡ್ರೈವಿಂಗ್‌ ಲೈಸೆನ್ಸ್‌ ಗಳನ್ನು ಸೇರಿಸಿ ಇಆರ್‌ಓ ಅಥವಾ ಬಿಎಲ್‌ಓ ಅಧಿಕಾರಿಗಳಿಗೆ ನೀಡಬಹುದು.

ಯಾರು ನೋಂದಣಿ ಮಾಡಿಸಿಕೊಳ್ಳಬಹುದು:

ಯಾರು ನೋಂದಣಿ ಮಾಡಿಸಿಕೊಳ್ಳಬಹುದು:

2018 ರ ಜನವರಿ 1ರ ಒಳಗೆ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಬಹುದು. ಇಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಸೇರಿಸಲು ಇದೆ ಇದೇ ಸುಸಮಯವಾಗಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಆನ್‌ಲೈನಿನಲ್ಲಿ ಹೆಸರು ಇದ್ಯಾ ನೋಡಿಕೊಳ್ಳಿ :

ಆನ್‌ಲೈನಿನಲ್ಲಿ ಹೆಸರು ಇದ್ಯಾ ನೋಡಿಕೊಳ್ಳಿ :

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ನೀವು ತಿಳಿದುಕೊಳ್ಳುವ ಸಲುವಾಗಿ www.ceokarnataka.kar.nic.in ಭೇಟಿ ನೀಡಿ. ಅಲ್ಲದೇ ಯಾವುದಾದರು ತಿದ್ದುಪಡಿ ಇದ್ದರು ಮಾಡಿಸಿಕೊಳ್ಳಿ.

Best Mobiles in India

English summary
voter id online registration. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+