Subscribe to Gizbot

ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

Written By:

ಟೆಲಿಕಾಂ ವಲಯದಲ್ಲಿ ಮತ್ತೊಂದು ದೊಡ್ಡ ಸುನಾಮಿಯೊಂದು ಎಳುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದಿರುವ ಸದಸ್ಯರಿಗೆ ಆಚ್ಚರಿಯ ಕೊಡುಗೆಯನ್ನು ನೀಡಲು ಮುಂದಾಗಿದೆ. ಮತ್ತೊಮ್ಮೆ ತನ್ನ ಟ್ಯಾರಿಫ್ ಬೆಲೆಯಲ್ಲಿ ಕಡಿತವನ್ನು ಮಾಡಿದ್ದು, ಪ್ರತಿ GB ಡೇಟಾ ಬೆಲೆಯನ್ನು ಕಡಿಮೆ ಮಾಡುವುದಲ್ಲದೇ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ.

ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

ಓದಿರಿ: 232 ಬ್ಯಾಂಕ್‌ಗಳ OTP ಕದಿಯುವ ಮಾಲ್ವೇರ್ ಬಂದಿದೆ ! ಈ ಆಪ್‌ಗಳನ್ನು ಡಿಲೀಟ್ ಮಾಡಿ..!

ಮಾರುಕಟ್ಟೆಯ ತಜ್ಞರು ಜಿಯೋ ಹೊಸ ವರ್ಷದಲ್ಲಿ ತನ್ನ ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿಲಿದೆ ಎಂದು ಊಹಿಸಿದ್ದರು. ಆದರೆ ಇದನ್ನು ಬುಡಮೇಲು ಮಾಡಿರುವ ಅಂಬಾನಿ, ಜಿಯೋ ಎಲ್ಲಾ ಪ್ಲಾನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಮೂಲಕ ಮತ್ತೊಮ್ಮೆ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನು ಎಬ್ಬಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ವರ್ಷಕ್ಕೆ ಗಿಫ್ಟ್:

ಹೊಸ ವರ್ಷಕ್ಕೆ ಗಿಫ್ಟ್:

ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಲಯನ್ಸ್‌‌ ಜಿಯೋ ಗ್ರಾಹಕರಿಗೆ ಸಖತ್‌‌ ಆಫರ್‌‌ ನೀಡಿದ್ದು, ಹೊಸ ವರ್ಷದ ಅಂಗವಾಗಿ ಜಿಯೋ ತನ್ನ ಗ್ರಾಹಕರಿಗೆ ಹೊಸ ಮಾದರಿಯ ಎರಡು ಆಫರ್ ನೀಡಲು ಮುಂದಾಗಿದೆ.

ಎರಡು ಮಾದರಿಯ ಆಫರ್:

ಎರಡು ಮಾದರಿಯ ಆಫರ್:

ಜಿಯೋ ಈ ಬಾರಿ ಗ್ರಾಹಕರಿಗೆ ಎರಡು ಮಾದರಿಯ ಆಫರ್ ಅನ್ನು ನೀಡಲು ಮುಂದಾಗಿದೆ. ಮೊದಲನೇಯ ಆಫರ್ ನಲ್ಲಿ ಪ್ರತಿ ಟ್ಯಾರಿಫ್ ಪ್ಲಾನ್ ಬೆಲೆಯಲ್ಲಿ ರೂ. 50 ಕಡಿಮೆ ಮಾಡಿದೆ. ಮತ್ತೊಂದು ಆಫರ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 1GB ಡೇಟಾ ಬದಲಿಗೆ 1.5GB ಡೇಟಾವನ್ನು ನೀಡಲು ಮುಂದಾಗಿದೆ.

ಬೆಲೆ ಕಡಿತದ ಆಫರ್:

ಬೆಲೆ ಕಡಿತದ ಆಫರ್:

ಇಂದಿನಿಂದ ಜಿಯೋ ನೀಡುತ್ತಿರುವ ರೂ. 199, ರೂ. 399, ರೂ. 459 ಮತ್ತು ರೂ. 499 ಪ್ಲಾನ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದ್ದು, ಈ ಎಲ್ಲಾ ಪ್ಲಾನ್ ಗಳ ಬೆಲೆ ಕ್ರಮವಾಗಿ ರೂ. 149, ರೂ. 349, ರೂ. 399 ಮತ್ತು ರೂ. 449 ಗಳಾಗಿದೆ.

ಡೇಟಾ ಹೆಚ್ಚು ನೀಡುತ್ತಿರುವ ಆಫರ್;

ಡೇಟಾ ಹೆಚ್ಚು ನೀಡುತ್ತಿರುವ ಆಫರ್;

ದಿನಕ್ಕೆ 1GB ಡೇಟಾವನ್ನು ನೀಡುತ್ತಿದ್ದ ಪ್ಲಾನ್‌ಗಳು ಬದಲಾಯಿಸಿರುವ ಜಿಯೋ, ಅದೇ ಬೆಲೆಗೆ 1.5 GB ಡೇಟಾವನ್ನು ನೀಡಿಲಿದೆ. ಈ ಪ್ಲಾನ್‌ಗಳು ಯಾವುದೆಂದರೆ ರೂ. 198, ರೂ. 398, ರೂ. 448 ಮತ್ತು ರೂ. 498. ಈ ಪ್ಲಾನ್‌ಗಳಲ್ಲಿ ಗ್ರಾಹಕರು ಪ್ರತಿ ನಿತ್ಯ 1.5GB ಡೇಟಾವನ್ನು ಪಡೆಯಬಹುದಾಗಿದೆ.

ಬೇರೆ ಯಾವುದೇ ವ್ಯತ್ಯಾಸವಿಲ್ಲ;

ಬೇರೆ ಯಾವುದೇ ವ್ಯತ್ಯಾಸವಿಲ್ಲ;

ಜಿಯೋ ತನ್ನ ಪ್ಲಾನ್‌ ಬೆಲೆಯಲ್ಲಿ ವ್ಯತ್ಯಾಸ ಮಾಡಿದೆಯೇ ಹೊರತು, ಸೇವೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ, ಉಚಿತ ಕರೆ, ಉಚಿತ SMS ಮತ್ತು ತನ್ನ ಆಪ್‌ಗಳ ಬಳಕೆಯನ್ನು ಉಚಿತವಾಗಿಯೇ ನೀಡಲು ಮುಂದಾಗಿದೆ ಎನ್ನಲಾಗಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೆಡ್ಡು:

ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೆಡ್ಡು:

ಜಿಯೋ ಒಂದೇ ಕಲ್ಲಿನಲ್ಲಿ ಎಲ್ಲಾ ಟೆಲಕಾಂ ಕಂಪನಿಗಳನ್ನು ಉದುರಿಸಲು ಮುಂದಾಗಿದೆ. ಏರ್‌ಟೆಲ್, ಐಡಿಯಾ ಸೆಲ್ಯುಲಾರ್, ಮತ್ತು ವೊಡಾಫೋನ್ ಇಂಡಿಯಾ ಮುಂತಾದ ಟೆಲಿಕಾಂಗಳು ನೀಡಲಾಗದ ಆಫರ್ ಅನ್ನು ನೀಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio Brings Down Per GB Value. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot