ಐಫೋನ್ 11ಗೆ ಅಮೆಜಾನ್ ನೀಡಿರುವ ಡಿಸ್ಕೌಂಟ್ ತಿಳಿದ್ರೆ, ಶಾಕ್ ಆಗ್ತೀರಾ!


ಅಧಿಕ ಡಿಸ್ಕೌಂಟ್ ನೀಡುವ ಪ್ರಮುಖ ಇ-ಕಾಮರ್ಸ್‌ ತಾಣಗಳ ಪೈಕಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ಅತೀ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿಯೂ ಅಮೆಜಾನ್ ಹಬ್ಬದ ದಿನಗಳಂದು ವಿಶೇಷ ರಿಯಾಯಿತಿ ಘೋಷಿಸುತ್ತದೆ. ಹಾಗೆಯೇ ತಿಂಗಳ ಕೊನೆಯ ದಿನಗಳಲ್ಲಿ ಸೇಲ್ ಮೇಳಗಳನ್ನು ಆಯೋಜಿಸಿ ಗ್ರಾಹಕರನ್ನು ಸೆಳೆಯುತ್ತದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತದೆ. ಅದೇ ರೀತಿ ಈ ಬಾರಿ ಐಫೋನ್ 11 ಫೋನಿಗೆ ಅಮೆಜಾನ್ ನೀಡಿರುವ ಡಿಸ್ಕೌಂಟ್ ತಿಳಿದ್ರೆ ನೀವು ಶಾಕ್ ಆಗ್ತಿರಾ.

ಹೌದು, ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಟಾಪ್‌ ಡೀಲ್ ತಿಳಿಸಿದೆ. ಆಪಲ್, ಸ್ಯಾಮ್‌ಸಂಗ್, ಶಿಯೋಮಿ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಸಹ ಅತ್ಯುತ್ತಮ ಡೀಲ್ ಪಡೆದಿವೆ. ಆದ್ರೆ ಅವುಗಳಲ್ಲಿ ಐಫೋನ್ 11 ಫೋನಿನ ಡಿಸ್ಕೌಂಟ್ ಬೆಲೆ ನೋಡಿದರೇ ಒಂದು ಕ್ಷಣ ನೀವು ನಿಮ್ಮ ಕಣ್ಣುಗಳನ್ನೆ ನಂಬುವುದಿಲ್ಲ. ಖಂಡಿತಾ ಅಚ್ಚರಿ ಪಡ್ತಿರಾ.

ಇತ್ತೀಚಿಗೆ ಆಪಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಹಲವು ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿರುವ ಐಫೋನ್ 11 ಫೋನ್ 64GB ವೇರಿಯಂಟ್ ಬೆಲೆಯು ಅಮೆಜಾನ್‌ನಲ್ಲಿ 64,900ರೂ ಆಗಿದ್ದು, ಅಮೆಜಾನ್ ಟಾಪ್‌ ಡೀಲ್‌ನಲ್ಲಿ ಕೇವಲ 1ರೂ. ಡಿಸ್ಕೌಂಟ್‌ ಪಡೆದಿದ್ದು, 64,899ರೂ.ಗಳಿಗೆ ಲಭ್ಯವಿದೆ. ಇನ್ನು 128GB ವೇರಿಯಂಟ್ ಫೋನ್ ಸಹ 1ರೂ. ಡಿಸ್ಕೌಂಟ್‌ನೊಂದಿಗೆ 69,899ರೂ.ಗೆ ಮತ್ತು 256GB ವೇರಿಯಂಟ್ ಫೋನ್ 79,899ರೂ.ಗಳಿಗೆ ಲಭ್ಯ ಇದೆ. ಇನ್ನು ಈ ಡೀಲ್ ಇಂದೇ ಕೊನೆಯಾಗಲಿದ್ದು, ಕೆಲವೇ ಗಂಟೆಗಳು ಭಾಕಿ ಉಳಿದಿವೆ. ಇಎಮ್‌ಐ ಆಯ್ಕೆಗಳನ್ನು ಸಹ ನೀಡಿದೆ.

ಸಾಕಷ್ಟು ಅಪ್‌ಗ್ರೇಡ್‌ನೊಂದಿಗೆ ಬರಲಿದೆ 'ಐಫೋನ್ 12'!..ಇರಲಿದೆ 12GB RAM!

ಆಪಲ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಐಫೋನ್ 11 ಸರಣಿ ಫೋನ್‌ಗಳ ಸದ್ದೇ, ಇನ್ನೂ ಮಾರುಕಟ್ಟೆಯಲ್ಲಿ ಉಳಿದಿದೆ. ಆದ್ರೆ ಅದಾಗಲೇ ಆಪಲ್ ಕಂಪನಿಯ ಮುಂಬರುವ ಐಫೋನ್ 12 ಸರಣಿ ಫೋನ್‌ಗಳ ಬಗ್ಗೆ ನಿರೀಕ್ಷೆಗಳು ಗರಿಗೆದರುತ್ತಿವೆ. ಇದೇ 2020ರ ವರ್ಷದ ಅಂತ್ಯದೊಳಗೆ ಲಾಂಚ್ ಆಗಲಿರುವ ಐಫೋನ್ 12 ಸರಣಿಯು ಸಹ ಒಟ್ಟು ಮೂರು ವೇರಿಯಂಟ್ ಮಾದರಿಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಹೌದು, ಆಪಲ್ ಸಂಸ್ಥೆಯು ತನ್ನ ಪ್ರತಿ ಸರಣಿಯಲ್ಲಿಯೂ ಹೊಸತನದ ಫೀಚರ್ಸ್‌ ಪರಿಚಯಿಸುತ್ತ ಸಾಗಿ ಬಂದಿದೆ. ಹೀಗಾಗಿ ಈ ಬಾರಿಯ ಐಫೋನ್ 12 ಸರಣಿಯು ಹಲವು ಅಚ್ಚರಿ ಫೀಚರ್ಸ್‌ಗಳನ್ನು ಹೊಂದಿರಲಿವೆ. ಹೊಸ ಸರಣಿಯು ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಹೆಸರಿನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಎಂದು UBS ಅನಾಲಿಟಿಕ್ಸ್‌ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ.

ಐಫೋನ್ 12 ಪ್ರೊ

ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಈ ಮೂರು ಐಫೋನ್‌ಗಳಲ್ಲಿ ಒಂದು ನಾಚ್ ಲೆಸ್‌ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಗೇಮಿಂಗ್, ಫೋಟೊ ಪ್ರೊಸೆಸಿಂಗ್, ವಿಡಿಯೊ ರೆಂಡರಿಂಗ್ ಕೆಲಸಗಳ ವೇಗ ಹೆಚ್ಚಿಸುವ ಸಲುವಾಗಿ ಆಪಲ್ ಐಫೋನ್ 12 ಸರಣಿಯಲ್ಲಿ ಅಧಿಕ RAM ಸಾಮರ್ಥ್ಯ ಒದಗಿಸುವ ಸಾಧ್ಯತೆಗಳಿದೆ. ಹೀಗಾಗಿ ಹೊಸ ಸರಣಿಯು 6GB RAM ಯಿಂದ 12GB RAM ಸಾಮರ್ಥ್ಯದವರೆಗೂ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.

ಐಫೋನ್ 12

ಇನ್ನು ಐಫೋನ್ 12 ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್‌ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಹಾಗೆಯೇ ಐಫೋನ್ 12 ಪ್ರೊ 6.1 ಇಂಚಿನ ಗಾತ್ರದಲ್ಲಿರಲಿದೆ ಎಂದು UBS ಅನಾಲಿಟಿಕ್ಸ್‌ ತಂಡ ತಿಳಿಸಿದೆ. ಹಾಗೆಯೇ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಗುಣಮಮಟ್ಟ ಉನ್ನತವಾಗಿರಲಿದ್ದು, ಫೋನ್ ಡಿಸೈನ್ ಆಕರ್ಷಕವಾಗಿರುವ ಜೊತೆಗೆ ಆಯತಾಕಾರದ ಡಿಸ್‌ಪ್ಲೇ ಇರಲಿದ್ದು, ಚೌಕಾಕಾರದ ಕರ್ವ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಐಫೋನ್ ಅಗತ್ಯ ಫೀಚರ್ಸ್‌

ಉಳಿದಂತೆ ಐಫೋನ್ 12 ಫೋನ್‌ ಮೊದಲ ಬಾರಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಪರಿಚಯಿಸುವ ಸಾಧ್ಯತೆಗಳ ಅಧಿಕ ಎನ್ನಲಾಗಿದೆ. ಸಿಮ್‌ ಟ್ರೇ, ವ್ಯಾಲ್ಯೂಮ್ ಬಟನ್, ಪವರ್ ಬಟನ್‌ಗಳು ಫೋನ್ ಫ್ರೇಮ್‌ನ ಬಾಹ್ಯವಾಗಿ ರಚನೆ ಪಡೆದಿವೆ. ಹಾಗೆಯೇ ಐಫೋನ್ ಅಗತ್ಯ ಫೀಚರ್ಸ್‌ಗಳು ಸಹ ಇರಲಿವೆ.

Most Read Articles
Best Mobiles in India
Read More About: amazon sale offer iphone

Have a great day!
Read more...

English Summary

Amazon Great Indian Sale 2020 is now live for everyone. to know more visit to kannada.gizbot.com