Amazon Jeff Bezos: ಭಾರತದಲ್ಲಿ 7 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಅಮೆಜಾನ್, 10 ಲಕ್ಷ ಉದ್ಯೋಗ ಸೃಷ್ಠಿ!


ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 10 ಲಕ್ಷ ಉದ್ಯೋಗ ಸೃಷ್ಠಿ ಮಾಡುವುದಾಗಿ ಅಮೆಜಾನ್ ಸಂಸ್ಥೆಯ ಸಿಇಓ ಜೆಫ್‌ ಬಿಸೋಜ್ ಹೇಳಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡುವ ಅಮೆಜಾನ್‌ ಸಂಸ್ಥೆಯ ನಿರ್ಧಾರವನ್ನು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಸ್ವಾಗತಿಸಿದ್ದಾರೆ.

Advertisement

ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯು ವಾಣಜ್ಯ ವಲಯ, ಲಾಜಿಸ್ಟಿಕ್ ಉದ್ಯಮ, ರಿಟೇಲ್‌, ಕಂಟೆಂಟ್ ಕ್ಷೇತ್ರಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 7,000 ಕೋಟಿ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಯೋಜನೆಯಿಂದ ಮುಂದಿನ 5 ವರ್ಷಗಳಲ್ಲಿ ಅಂದರೇ 2025ರ ವೇಳೆಗೆ ದೇಶದಲ್ಲಿ ಹೊಸ ಉದ್ಯೋಗ ಅವಕಾಶಗಳು ಸೃಷ್ಠಿ ಆಗುತ್ತವೆ. ಅಮೆಜಾನ್‌ ಸಂಸ್ಥೆಯ ಈ ಯೋಜನೆಯಿಂದ ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆನ್‌ಲೈನ್‌ ವಹಿವಾಟು ಮಾಡಲು ನೆರವಾಗಲಿದೆ ಎಂದಿದ್ದಾರೆ.

Advertisement

ಅಮೆಜಾನ್ ಭಾರತದಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡುವುದರಿಂದ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಇತ್ತೀಚಿಗೆ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಟೀಕೆ ಮಾಡಿದ್ದರು. ಆದರೆ ಇದೀಗ ಅವರು ಅಮೆಜಾನ್ ಹೂಡಿಕೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕಳೆದ 6 ವರ್ಷಗಳಲ್ಲಿ ಅಮೆಜಾನ್‌ ಭಾರತದಲ್ಲಿ ಬಂಡವಾಳದಿಂದ ತೊಡಗಿಸುತ್ತಾ ಸಾಗಿದ್ದು, ಉದ್ಯೋಗ ಅವಕಾಶಗಳು ಲಭ್ಯವಾಗಿವೆ.

ಅದೇ ರೀತಿ ಅಮೆಜಾನ್ ದೊಡ್ಡ ಮೊತ್ತದ ಹೂಡಿಕೆಯಿಂದ ಹೊಸದಾಗಿ ಬೃಹತ್ತ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಲಾಗಿದೆ. ಮುಖ್ಯವಾಗಿ ಲಾಜಿಸ್ಟಿಕ್, ಸಣ್ಣ ಕೈಗಾರಿಕೆಗಳಿಗೆ ವಿಶೇಷ ನೆರವು ಸಿಗಲಿದೆ. ಹಾಗೆಯೇ ಬಹಳಷ್ಟು ರೀಟೇಲ್, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮದವರಿಗೆ ಆನ್‌ಲೈನ್‌ ವಹಿವಾಟಿಗೆ ಹೊಸ ದಾರಿ ಸೃಷ್ಠಿಯಾಗುವ ನಿರೀಕ್ಷೆಗಳು ಸಹ ಇವೆ.

ಈ ಕೈಗಾರಿಕೆಗಳನ್ನು ಆನ್‌ಲೈನ್‌ ವಹಿವಾಟಿಗೆ ಒಳಪಡಿಸುವ ಮೂಲಕ ಅವುಗಳ ರಫ್ತು ಹೆಚ್ಚಿಸಲು ಅಮೆಜಾನ್ ಬಂಡವಾಳ ತೊಡಗಿಸಲಿದೆ. ಇದರಿಂದ ಭಾರತದಲ್ಲಿಯೇ ತಯಾರಿಸಿದ ಉತ್ಪನ್ನಗಳಿಗೆ 2025ರ ವೇಳೆಗೆ ರಫ್ತು ವಹಿವಾಟು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ 2022ರ ವೇಳೆಗೆ 40 ಕೋಟಿ ಜನರ ಕೌಶಲ ಹೆಚ್ಚಿಸಿ ಉದ್ಯೋಗ ಸೃಷ್ಟಿಸುವ ಭಾರತ ಸರ್ಕಾರ ಯೋಜನೆಗೆ ಅಮೆಜಾನ್‌ ಪ್ರಕಟಿಸಿರುವ ಈ ಉದ್ಯೋಗ ಸೃಷ್ಟಿ ಪೂರಕವಾಗಿರಲಿದೆ ಎಂದು ಕಂಪನಿ ಹೇಳಿದೆ.

Best Mobiles in India

English Summary

Amazon Investing rs.700,000 in india. It Helps to create 1 milion jobs in india. to know more visit to kannada.gizbot.com