ಹೋಮ್ ಸೆಕ್ಯುರಿಟಿ ಕ್ಯಾಮೆರಾ ಲಾಂಚ್ ಮಾಡಲು ಸಜ್ಜಾದ Apple; ಭಾರೀ ಅಚ್ಚರಿ ಕಾದಿದೆ!
ಟೆಕ್ ದಿಗ್ಗಜ ಆಪಲ್ (Apple) ಸಂಸ್ಥೆಯು 2026 ರಲ್ಲಿ ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಏಷ್ಯಾದಲ್ಲಿ ಆಪಲ್‌ನ ಸಪ್ಲೈ ಚೈನ್ ವ್ಯಕ್ತಿ (ಮಿಂಗ್-ಚಿ ಕುವೊ) Ming-Chi Kuo ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ತಿಳಿಸಿದ್ದಾರೆ. ಈ ಸಂಗತಿಯು ಸುರಕ್ಷಿತ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಹೊಂದಬಯಸುವ ಗ್ರಾಹಕರಿಗೆ ಹೆಚ್ಚಿನ ಖುಷಿ ಸಂಗತಿ ಎನಿಸಿದೆ.
ಹೌದು, ಜನಪ್ರಿಯ ಆಪಲ್ ಸಂಸ್ಥೆಯು ಸ್ಮಾರ್ಟ್ ಹೋಮ್ ಐಪಿ ಕ್ಯಾಮೆರಾ (smart home IP camera) ಮಾರುಕಟ್ಟೆಯಲ್ಲಿ ತನ್ನ ಮೊದಲ ಕ್ಯಾಮೆರಾ ಪರಿಚಯಿಸಲು ಸಕಲ ರೀತಿ ಸಜ್ಜಾಗುತ್ತಿದೆ. ಅಂದಹಾಗೆ ಸಂಸ್ಥೆಯು 2026 ಕ್ಕೆ ಹೆಚ್ಚಿನ ಉತ್ಪಾದನೆಯನ್ನು ನಿಗದಿಪಡಿಸಲಾಗಿದೆ. ವಾರ್ಷಿಕ ಹತ್ತಾರು ಸಾಗಣೆಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ ಎಂದು ಕುವೊ ಹಂಚಿಕೊಂಡ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯವಾಗಿ ಆಪಲ್ ಸಂಸ್ಥೆಯು ಗೌಪ್ಯತೆ ಹಾಗೂ ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರ ಮೇಲೆ ಗಮನಹರಿಸುವುದರಿಂದ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಉದ್ಯಮಕ್ಕೆ ಹೊಸ ಮಾನದಂಡವನ್ನು ಹೊಂದಿಸಬಹುದು. ಅಲ್ಲದೇ ಅದರ ಕ್ಲೌಡ್-ಆಧಾರಿತ ಹೋಮ್‌ಕಿಟ್ ಸುರಕ್ಷಿತ ವೀಡಿಯೊ ಪ್ಲಾಟ್‌ಫಾರ್ಮ್ ಫೀಡ್‌ಗಳಿಗಾಗಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ನೀಡಲಿದೆ ಎನ್ನಲಾಗಿದೆ.
ಅಂದಹಾಗೆ ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ತನ್ನ ಐಫೋನ್ 16 ( iPhone 16 )ಸರಣಿಯ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿವೆ. ಅವುಗಳ ಪೈಕಿ ಆಪಲ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಐಫೋನ್ 16 ಪ್ಲಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಐಫೋನ್ 16 ಸರಣಿಯ ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ.
ಐಫೋನ್ 16 ( iPhone 16 ) ಮೊಬೈಲ್ A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಚಿಪ್ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಮತ್ತು 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್‌ನೊಂದಿಗೆ ನವೀಕರಿಸಿದ ಮೆಮೊರಿ ಉಪವ್ಯವಸ್ಥೆಯನ್ನು ಹೊಂದಿದೆ. ಅಲ್ಲದೇ ಇದು ಈ ಹಿಂದಿನ ಐಫೋನ್ 15 ಮಾಡೆಲ್‌ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿರುತ್ತದೆ.
ಐಫೋನ್ 16 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅವುಗಳಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಕೂಡಾ ಪಡೆದಿದೆ. ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ನೂತ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹಿಂದಿನ ಮಾಡೆಲ್‌ಗಳಿ ಗಿಂತ 2.6 ಪಟ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ ಅಲ್ಲದೇ ಮ್ಯಾಕ್ರೋ ಫೋಟೋಗ್ರಫಿ ಅನ್ನು ಬೆಂಬಲ ಮಾಡುತ್ತದೆ.
ಇತ್ತೀಚಿನ ಆಪಲ್ ಐಫೋನ್ 16 ಹಾಗೂ ಐಫೋನ್ 16 ಪ್ಲಸ್ ( iPhone 16 Plus ) ಮೊಬೈಲ್ ತನ್ನ ಈ ಹಿಂದಿನ ಸರಣಿಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿವೆ. ಅಲ್ಲದೇ ಇವು ಡೈನಾಮಿಕ್ ಐಲ್ಯಾಂಡ್ (Dynamic Island) ಆಯ್ಕೆಯನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಹಾಗೆಯೇ ವಾಯರ್‌ಲೆಸ್ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಇದರ ಜೊತೆಗೆ ರೋಡ್ ಸೈಡ್ ಅಸಿಸ್ಟಂಟ್ ವೈಯಾ ಸೆಟಲೈಟ್ ಆಯ್ಕೆ ಇದೆ.


Click it and Unblock the Notifications








