Home
ಸುದ್ದಿಜಾಲ

ಅಸೂಸ್‌ನಿಂದ ಜೆನ್‌ಫೋನ್ ಸೆಲ್ಫಿ ರೂ 17,999 ಕ್ಕೆ

By Suneel

ಹೌದು ಈ ಮೊದಲು ಅಸೂಸ್‌ ಜೆನ್‌ಫೋನ್ ಸೆಲ್ಫಿ ಮೊಬೈಲ್‌ ಅನ್ನು 2GB RAM ನಲ್ಲಿ 15,999 ರೂಗೆ ಲಾಂಚ್ ಮಾಡಿತ್ತು. ಇದೀಗ ಅಸೂಸ್ ಫ್ಲಿಪ್ ಕಾರ್ಟ್‌ನಲ್ಲಿ 3GB RAM ನ ಜೆನ್‌ಫೋನ್‌ ಸೆಲ್ಫಿ ಮೊಬೈಲ್‌ ಅನ್ನು 17,999 ರೂನಲ್ಲಿ ಮಾರಾಟಮಾಡುತ್ತಿದೆ.

ಅಸೂಸ್‌ನಿಂದ ಜೆನ್‌ಫೋನ್ ಸೆಲ್ಫಿ ರೂ 17,999 ಕ್ಕೆ

ಅಸೂಸ್ ಜೆನ್‌ಫೋನ್ ಸೆಲ್ಫಿ ಡ್ಯುಯಲ್‌ ಸಿಮ್‌ ಮೊಬೈಲ್‌ ಆಗಿದ್ದು, ಅಸೂಸ್ UI ವರ್ಸನ್‌ನ ಆಂಡ್ರಾಯ್ಡ್‌ 5.0 ನಲ್ಲಿ ರನ್ನಿಂಗ್‌ ಆಗುತ್ತಿದೆ. ಅಷ್ಟೆ ಅಲ್ಲದೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಓದಿರಿ: ಈ ವಿಶೇಷ ಅಪ್ಲಿಕೇಶನ್‌ಗಳು ಬರಿಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಅಸೂಸ್ ಜೆನ್ ಫೋನ್‌ ಸೆಲ್ಫಿ ಮೊಬೈಲ್‌ 32GB ಆಂತರಿಕ ಸ್ಟೋರೇಜ್‌ ಹೊಂದಿದ್ದು, 64GB ಯ ಮೈಕ್ರೋ ಮೆಮೋರಿ ಕಾರ್ಡ್‌ ಅನ್ನು ಕೂಡ ಅಳವಡಿಸಬಹುದಾಗಿದೆ. 5.5-ಇಂಚಿನ (1080*1920p) ಹೊಂದಿರುವ LCD ಡಿಸ್‌ಪ್ಲೇಯನ್ನು ಇದು ಹೊಂದಿದ್ದು, ಗೊರಿಲ್ಲಾ ಗ್ಲಾಸ್ 4 ಪೊಟೆಕ್ಷನ್‌, ಹಿಂಬದಿ ಸೌಂಡ್‌ ರಾಕರ್, ಹಾಗೂ ಹಿಡಿತಕ್ಕೆ ಅನುಕೂಲಕರವಾದ ಕರ್ವ್ ವಿನ್ಯಾಸವನ್ನು ಹೊಂದಿದೆ.
ಅಸೂಸ್ ಜೆನ್‌ಫೋನ್‌ ಸೆಲ್ಫೀ ಮೊಬೈಲ್‌ 13 ಮೆಗಾಫಿಕ್ಸೆಲ್‌ರೆಸಲ್ಯೂಶನ್‌ ನ ಹಿಂಬದಿ ಹಾಗೂ ಮುಂಬದಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ತೊಶಿಬಾ ಸೆನ್ಸಾರ್‌, ಆಟೋಫೋಕಸ್‌, ಡ್ಯುಯೆಲ್‌ LED ಫ್ಲ್ಯಾಶ್ ಅನ್ನು ಹೊಂದಿದೆ.

ಅಸೂಸ್‌ನಿಂದ ಜೆನ್‌ಫೋನ್ ಸೆಲ್ಫಿ ರೂ 17,999 ಕ್ಕೆ

ಕುಟುಂಬದ ಎಲ್ಲರೂ ಒಟ್ಟಿಗೆ ಸೆಲ್ಫಿ ತೆಗೆಯಿರಿ
ಈ ಮೊದಲು ಸೆಲ್ಫಿ ತೆಗೆದು ಕೊಳ್ಳಲು ಕ್ಯಾಮೆರಾ ಹೆಚ್ಚು ಜನರನ್ನು ಕವರ್ ಮಾಡುತ್ತಿಲ್ಲ ಎಂಬ ಕಿರಿ ಕಿರಿ ಇತ್ತು. ಆದರೆ ಈಗ ಅಸೂಸ್ ಜೆನ್‌ಫೋನ್ ಸೆಲ್ಫಿ ಮೊಬೈಲ್‌ನಿಂದ ಅಂತಹ ಕಿರಿ ಕಿರಿಗೆ ವಿರಾಮ ಹಾಕಬಹುದು. ಹೌದು ಆಸಸ್ ಜೆನ್‌ಫೋನ್ ಸೆಲ್ಫಿ 88 ಡಿಗ್ರಿ ವೈಡ್‌ ಆಂಗಲ್ ಪ್ರದೇಶವನ್ನು ಕವರ್‌ ಮಾಡುತ್ತದೆ. ಅಲ್ಲದೆ 3000mAh ಬ್ಯಾಟರಿ ಹೊಂದಿದೆ.

Best Mobiles in India

English summary
Asus has started selling the 3GB RAM version of its Zenfone Selfie phone via Flipkart at Rs 17,999. The company had previously launched the 2GB RAM version at Rs 15,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+