ಈ ವಿಶೇಷ ಅಪ್ಲಿಕೇಶನ್‌ಗಳು ಬರಿಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

By Suneel
|

ಪ್ರಸ್ತುತ ವೇಳೆಯಲ್ಲಿ ಅತಿಹೆಚ್ಚು ಪ್ರಖ್ಯಾತಿ ಪಡೆದಿರುವ ಸಾಲಿನಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳುತ್ತದೆ. ಮುಕ್ತ ಪ್ಲಾಟ್‌ಫಾರ್ಮ್ ಎಂಬ ಖ್ಯಾತಿ ಪಡೆದುಕೊಂಡಿರುವ ಈ ಓಎಸ್ ಅನ್ನು ಬಳಕೆದಾರರು ಕೂಡ ಹೆಚ್ಚಾಗಿ ಬಳಸುತ್ತಾರೆ. ಗ್ರಾಹಕರಿಗೆ ಹೆಚ್ಚು ಅವಕಾಶಗಳನ್ನು ಆಂಡ್ರಾಯ್ಡ್ ಒದಗಿಸುತ್ತಿದೆ.

ಓದಿರಿ: ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಇನ್ನು ನೀವು ಬಳಸುತ್ತಿರುವುದು ಆಂಡ್ರಾಯ್ಡ್ ಫೋನ್ ಆದಲ್ಲಿ ನೀವು ಅದೃಷ್ಟವಂತರೇ ಸರಿ. ನಿತ್ಯ ಜೀವನಕ್ಕೆ ಉಪಯುಕ್ತ ಎಂದೆನಿಸಿರುವ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ನಿಮಗೆ ಒದಗಿಸುವಲ್ಲಿ ಆಂಡ್ರಾಯ್ಡ್ ಎತ್ತಿದ ಕೈ. ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನಲ್ಲಿ ಅತ್ಯಗತ್ಯವಾಗಿ ಇರಬೇಕಾಗಿರುವ 10 ಮುಖ್ಯ ಅಪ್ಲಿಕೇಶನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ.

 ಗೂಗಲ್

ಗೂಗಲ್

ಗೂಗಲ್ ಈಗ ಆಂಡ್ರಾಯ್ಡ್ ಬಳಕೆದಾರರಿಗೆಂದೇ ಪ್ರತ್ಯೇಕ ಗೂಗಲ್ ಅಪ್ಲಿಕೇಶನ್ ಅನ್ನು ಸಿದ್ದಪಡಿಸಿದೆ. ನಿಮ್ಮ ಮೊಬೈಲ್‌ನ ಗೂಗಲ್ ಆಪ್‌ನಲ್ಲಿ ಗೆಟ್‌ ಗೂಗಲ್ ನೌ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ದೈನಂದಿನ ಆಸಕ್ತಿಗಳ ಯಾವುದೇ ವಸ್ತುಗಳನ್ನು ಪಡೆಯಲು ಮಾಹಿತಿ ತಿಳಿಯಬಹುದಾಗಿದೆ. ಸ್ಪೋಟ್ಸ್, ಸ್ಟಾಕ್‌ಗಳಿಗೆ ಸಂಬಂಧಿಸಿದಂತೆ ನಿಮಗೆ ಬೇಕಾದ ಯಾವುದೇ ವಿಷಯಗಳ ಬಗ್ಗೆ ಅಪ್‌ಡೇಟ್‌ ಪಡೆಯಬಹುದಾಗಿದೆ.

ಲಾಂಚರ್ ಮತ್ತು ಲಾಕ್ ಸ್ಕ್ರೀನ್

ಲಾಂಚರ್ ಮತ್ತು ಲಾಕ್ ಸ್ಕ್ರೀನ್

ಆಂಡ್ರಾಯ್ಡ್ ಸ್ಟಾಕ್ ಲಾಂಚರ್ ಮತ್ತು ಲಾಕ್ ಸ್ಕ್ರೀನ್ ಅನ್ನು ಬಳಸಿದ ನಂತರ ಕ್ರಮೇಣ ಅದು ಅಷ್ಟು ಆಸಕ್ತಿಕರವಲ್ಲ ಎಂಬುದಾಗಿ ನಿಮಗನ್ನಿಸಬಹುದು. ಆದರೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮಗಿಷ್ಟದ ಲಾಂಚರ್ ಮತ್ತು ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
.

ಪವರ್ ಸೇವಿಂಗ್ ಮೋಡ್

ಪವರ್ ಸೇವಿಂಗ್ ಮೋಡ್

ನಿಮ್ಮ ಫೋನ್‌ನ ಬ್ಯಾಟರಿ ದೀರ್ಘತೆಗಾಗಿ ಪವರ್ ಸೇವ್ ಮೋಡ್ ಹೆಚ್ಚು ಉಪಕಾರಿಯಾಗಿದೆ. ಇನ್ನು ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ಬ್ಯಾಟರಿ ಸೇವಿಂಗ್ ಮೋಡ್‌ನಲ್ಲಿ ದೀರ್ಘ ಬ್ಯಾಟರಿ ಮತ್ತು ಹೆಚ್ಚು ಸಾಮರ್ಥ್ಯದ ವೈಶಿಷ್ಟ್ಯದೊಂದಿಗೆ ಬಂದಿದೆ.

ಹೆಚ್ಚುವರಿ ಬ್ಯಾಟರಿ

ಹೆಚ್ಚುವರಿ ಬ್ಯಾಟರಿ

ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ರಿಮೂವೇಬಲ್ ಬ್ಯಾಟರಿ ಆಯ್ಕೆಯೊಂದಿಗೆ ಬಂದಿದ್ದು ಇನ್ನು ಕೆಲವು ನಾನ್‌ರಿಮೂವೇಬಲ್ ಕೇಸ್‌ನೊಂದಿಗೆ ಬಂದಿದೆ. ಈ ಸಂದರ್ಭದಲ್ಲಿ ಪವರ್ ಬ್ಯಾಂಕ್ ಅನ್ನು ನಿಮ್ಮ ಪ್ರಯಾಣದ ವೇಳೆಯಲ್ಲಿ ಕೊಂಡೊಯ್ಯಬಹುದಾಗಿದೆ.

ಗೂಗಲ್ ಕ್ರೋಮ್‌

ಗೂಗಲ್ ಕ್ರೋಮ್‌

ಆಂಡ್ರಾಯ್ಡ್ ಸ್ಮಾಟ್‌ ಫೋನ್‌ಗಳು ಗೂಗಲ್‌ ಕ್ರೋಮ್‌ ಎಂಬ ವೆಬ್‌ ಬ್ರೌಸರ್‌ ಅಪ್ಲಿಕೇಶನ್ ಅನ್ನು ಹೊಂದಿದ್ದು, ಅದರಲ್ಲಿ ನಿಮ್ಮ ಗೂಗಲ್‌ ಖಾತೆಯನ್ನು ಒಮ್ಮೆ ತೆಗೆದರೆ ಸಾಕು ನಿಮ್ಮ ಎಲ್ಲಾ ಬುಕ್‌ ಮಾರ್ಕ್ ಹಾಗೂ ಸೇವ್ ಮಾಡಿಕೊಂಡ ಪಾಸ್‌ವರ್ಡ್‌ಗಳು ಸ್ವಯಂಚಾಲಿತವಾಗಿ ಕ್ರೋಮ್ ಅಪ್ಲಿಕೇಶನ್‌ನೊಂದಿಗೆ ಸಿಂಕ್ ಆಗುತ್ತದೆ.

 ಅಪ್ಲಿಕೇಶನ್‌ಗಳನ್ನು ಸಂಘಟಿಸುವುದು

ಅಪ್ಲಿಕೇಶನ್‌ಗಳನ್ನು ಸಂಘಟಿಸುವುದು

ನಿಮ್ಮಲ್ಲಿ ಹಲವು ರೀತಿಯ ಅಪ್ಲಿಕೇಶನ್‌ಗಳಿದ್ದು ಕೆಲವೊಮ್ಮೆ ಅವನ್ನು ಬಳಸುವ ಸಮಯದಲ್ಲಿ ಗೊಂದಲ ಉಂಟಾಗಬಹುದು. ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ, ಗೇಮ್ಸ್, ಜೋಕ್‌ವಿಷಯಗಳಿಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಫೋಲ್ಡರ್‌ಗಳನ್ನು ತೆರೆಯಬಹುದು. ಹೀಗೆ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್‌ಗಳನ್ನು ವೇಗವಾಗಿ ಹುಡುಕಿಕೊಳ್ಳಬಹುದಾಗಿದೆ.

ಕೀ ಬೋರ್ಡ್

ಕೀ ಬೋರ್ಡ್

ಕೀ ಬೋರ್ಡ್‌ ಮೇಲೆ ಟೈಪ್‌ ಮಾಡುವುದಕ್ಕಿಂತ ಸ್ವೈಪ್ ಸುಲಭ. ಈ ರೀತಿ ಮಾಡಲು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಕೀಬೋರ್ಡ್‌ ಆಪ್‌ಗಳಿದ್ದು ಅವುಗಳನ್ನು ಡೌನ್‌ಲೋಡ್‌ ಮಾಡಿ ಅಕ್ಷರಗಳ ಮೇಲೆ ಬೆರಳುಗಳನ್ನು ಸ್ವೈಪ್‌ ಮಾಡಿ.

ಬ್ಯಾಂಟ್‌ವಿಡ್ತ್ ನಿರ್ವಹಣೆ

ಬ್ಯಾಂಟ್‌ವಿಡ್ತ್ ನಿರ್ವಹಣೆ

ಕ್ರೋಮ್‌ನಲ್ಲಿ ಡಾಟಾ ಬಳಕೆಯನ್ನು ನೀವು ಕಡಿಮೆ ಮಾಡಿಕೊಳ್ಳಬಹುದು. ಇದು ಅನಗತ್ಯ ಚಿತ್ರಗಳನ್ನು ತೆಗೆದುಹಾಕಿ ಕಾಂಪ್ಯಾಕ್ಟ್ ಸ್ವರೂಪದಲ್ಲಿ ವೆಬ್ ಪುಟವನ್ನು ಒದಗಿಸುತ್ತದೆ.

ಗೂಗಲ್‌ ಅಥೆಂಟಿಕೇಟರ್

ಗೂಗಲ್‌ ಅಥೆಂಟಿಕೇಟರ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಗೂಗಲ್ ಖಾತೆಗಳಿಗಾಗಿ ಎರಡು ಹಂತದ ಪರಿಶೀಲನೆ ಕ್ರಮವನ್ನು ಗೂಗಲ್‌ ಅಥೆಂಟಿಕೇಟರ್ ನಿಮಗೆ ಒದಗಿಸುತ್ತದೆ. ಇದರಿಂದ ಹೆಚ್ಚು ಸುರಕ್ಷತೆ ಸಾಧ್ಯ.

ಡೀಫಾಲ್ಟ್ ಅಪ್ಲಿಕೇಶನ್

ಡೀಫಾಲ್ಟ್ ಅಪ್ಲಿಕೇಶನ್

ಆಂಡ್ರಾಯ್ಡ್ ಎಲ್ಲಾ ಅಂಶಗಳಿಗೆ ಸಹಾಯವಾಗುವಂತೆ ರಚನೆ ಆಗಿದೆ. ಉದಾಹರಣೆಗೆ ಗೂಗಲ್‌ ಪ್ಲೇಸ್ಟೋರ್‌ನಿಂದ ಅಡೋಬ್‌ ರೀಡರ್ ಅಪ್‌ ಡೌನ್‌ಲೋಡ್‌ ಮಾಡಿದಲ್ಲಿ ಅದರ ಮುಖಾಂತರ ಪಿಡಿಎಫ್ ಫೈಲ್ ಅನ್ನು ನೋಡಬಹುದು. ಈ ವೇಳೆ ಅಡೋಬ್‌ ರೀಡರ್‌ ಅನ್ನು ನಿಮ್ಮ ಫೋನ್‌ನಲ್ಲಿ ಡೀಫಾಲ್ಟ್‌ ಆಪ್‌ ಅನ್ನಾಗಿ ಮಾಡಬಹುದು.

Best Mobiles in India

English summary
There are few easy steps that can keep your phone in an organized way to save your battery life for a whole day. We came with some tips for the Android users to try out and get better user experience. Take a look at the slider below to know how to get more out of the Android smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X