BSNL 4G Service: ಇದೇ ಮಾರ್ಚ್ 1 ರಿಂದ ಬಿಎಸ್‌ಎನ್ಎಲ್ 4G ಕಾರ್ಯಾರಂಭ!


ಭಾರತದಲ್ಲಿ 5G ನೆಟವರ್ಕ ಬರುತ್ತಿದೆ ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಇನ್ನು 3G ನೆಟವರ್ಕನಲ್ಲಿಯೇ ಇದೆ ಎಂದು ಅನೇಕರು ಹೇಳುವುದನ್ನು ಕೇಳಿದ್ದೆವೆ. ಆದರೆ ಬಿಎಸ್‌ಎನ್ಎಲ್ ಈಗ 4G ನೆಟವರ್ಕ ಸೇವೆಗೆ ಅಪ್‌ಗ್ರೇಡ್ ಆಗಿದ್ದು, ಪ್ರಾಯೋಗಿಕವಾಗಿ ಕೆಲವು ನಗರಗಳಲ್ಲಿ ಸೇವೆಯನ್ನು ಆರಂಭಿಸಿದೆ. ಇದೀಗ ಬಿಎಸ್‌ಎನ್‌ಎಲ್ ಅಧಿಕೃತವಾಗಿ ಪೂರ್ಣ ಪ್ರಮಾಣದ 4G ನೆಟವರ್ಕ ಸೇವೆಗೆ ಚಾಲನೆ ನೀಡಲು ಸಜ್ಜಾಗಿದೆ.

Advertisement

ಹೌದು, ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇದೇ ಮಾರ್ಚ್ 1, 2020ರಂದು ಅಧಿಕೃತವಾಗಿ 4G ನೆಟವರ್ಕ ಅನ್ನು ಲಾಂಚ್‌ ಮಾಡುವುದು ಬಹುತೇಕ ಖಚಿತವಾಗಿದೆ. ಇಲ್ಲಿಯವರೆಗೂ 2G ನೆಟವರ್ಕ ಮತ್ತು 3G ನೆಟವರ್ಕ ಬಳಕೆ ಮಾಡುತ್ತಿದ್ದ ಬಿಎಸ್‌ಎನ್‌ಎಲ್‌ ಚಂದಾದಾರರು ಇನ್ಮುಂದೆ ವೇಗದ 4G ನೆಟವರ್ಕ ಸೇವೆಯನ್ನು ಪಡೆಯಬಹುದಾಗಿದೆ. ಮೊದಲ ಹಂತವಾಗಿ ಬಿಎಸ್‌ಎನ್ಎಲ್ 20 ಪ್ರಮುಖ ನಗರಗಳಲ್ಲಿ 4G ನೆಟವರ್ಕ ಕಾರ್ಯಾರಂಭ ಮಾಡಲಿದೆ.

Advertisement

ಬಿಎಸ್‌ಎನ್ಎಲ್ ಸದ್ಯ ಕೊಲ್ಕತ್ತಾದ ಬಾರಾ ಬಜಾರ್, ಹೋಲಿ ಬ್ರಿಡ್ಜ್ ಸೇರಿದಂತೆ ಕೆಲವು ಭಾಗಗಳಲ್ಲಿ 4G ಸೇವೆ ಲೈವ್ ಆಗಿದೆ. ಮಾರ್ಚ್‌ನಲ್ಲಿ ಮತ್ತೆ 20 ನಗರಗಳಿಗೆ 4G ಸೇವೆಯನ್ನು ವಿಸ್ತರಿಸಲಿದೆ. ಆನಂತರ 4G ನೆಟವರ್ಕ ಸೇವೆಯು ಉಳಿದ ಎಲ್ಲ ಟೆಲಿಕಾಂ ಸರ್ಕಲ್ ಪ್ರದೇಶಗಳಿಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಲೈವ್ ಆಗಲಿದೆ ಎನ್ನಲಾಗಿದೆ. ಕೊಲ್ಕತ್ತಾದಲ್ಲಿ ಬಿಎಸ್‌ಎನ್ಎಲ್ 4G ಸೇವೆಯು 17.9 Mbps ವೇಗದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಕೇರಳ, ಕರ್ನಾಟಕ, ಚೆನೈ, ಮಧ್ಯಪ್ರದೇಶ, ಗುಜರಾತ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಬಿಎಸ್‌ಎನ್ಎಲ್ 4G ನೆಟವರ್ಕ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಆ ನಂತರದ ದಿನಗಳಲ್ಲಿ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯೊಳಗೆ ಬಿಎಸ್‌ಎನ್‌ಎಲ್‌ 4G ಸೇವೆ ಲಭ್ಯವಾಗಲಿದ್ದು, ಚಂದಾದಾರರಿಗೆ ವೇಗದ ನೆಟವರ್ಕ ಪ್ರಯೋಜನ ದೊರೆಯಲಿದೆ.

ಇತ್ತೀಚಿಗೆ ಬಿಎಸ್‌ಎನ್ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96ರೂ.ಗಳಾಗಿದ್ದು, ಇನ್ನೊಂದು ಪ್ಲ್ಯಾನ್ 236ರೂ. ಬೆಲೆಯನ್ನು ಹೊಂದಿದೆ. ಇನ್ನು 96ರೂ. ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದ್ದು, 236ರೂ. ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಈ ಎರಡು ಪ್ಲ್ಯಾನ್‌ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ.

Best Mobiles in India

English Summary

BSNL is already providing 4G services using the existing 3G spectrum, but the full-fledged launch will happen on March 1. to know more visit to kannada.gizbot.com