ಹಾತ್‌ವೇ ಬ್ರಾಡ್‌ಬ್ಯಾಂಡ್ ತಿಂಗಳ ಶುಲ್ಕ ಕೇವಲ 399ರೂ.!


ಪ್ರಸ್ತುತ ಫೋನ್ ಸೇರಿದಂತೆ ಎಲ್ಲ ಸ್ಮಾರ್ಟ್‌ ಡಿವೈಸ್‌ಗಳಿಗೆ ಇಂಟರ್ನೆಟ್‌ ಅಗತ್ಯ ಆಗಿದೆ. ಈ ನಿಟ್ಟಿನಲ್ಲಿ ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ಗಳಿಗೂ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿಯ ವಾತಾವರಣ ನಿರ್ಮಾಣವಾಗಿದೆ. ಜಿಯೋ, ಟಾಟಾಸ್ಕೈ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಮತ್ತು ಎಸಿಟಿ ಸಂಸ್ಥೆಯ ಬ್ರಾಡ್‌ಬ್ಯಾಂಡ್‌ಗಳಿಗೆ ಉತ್ತಮ ಬೇಡಿಕೆ ಇದ್ದು, ಹಾಗೆಯೇ ಹಾತ್‌ವೇ ಬ್ರಾಡ್‌ಬ್ಯಾಂಡ್‌ ಸಹ ಗ್ರಾಹಕರ ಗಮನ ಸೆಳೆದಿದೆ.

ಹೌದು, ಕಡಿಮೆ ಬೆಲೆಗೆ ಕೇಬಲ್‌ ಮತ್ತು ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಸೇವೆಗಳಿಂದ ಗುರುತಿಸಿಕೊಂಡಿರುವ ಹಾತ್‌ವೇ ಸಂಸ್ಥೆಯು ಈಗಾಗಲೇ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇದೀಗ ಸಂಸ್ಥೆಯು ಹೊಸದಾಗಿ ಅಗ್ಗದ ಬೆಲೆಗೆ ಅನಿಯಮಿತ ಬ್ರಾಡ್‌ಬ್ಯಾಂಡ್‌ ಒದಗಿಸುವ ಪ್ಲ್ಯಾನ್ ಘೋಷಿಸಿದೆ. ಇನ್ನು ಈ ಹೊಸ ಪ್ಲ್ಯಾನಿನ ತಿಂಗಳ ಶುಲ್ಕವು ಕೇವಲ 399ರೂ. ಆಗಿದ್ದು, ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ಎಂದಿದೆ.

ಹಾತ್‌ವೇ ಸಂಸ್ಥೆಯ ಈ ಹೊಸ 399ರೂ.ಪ್ಲ್ಯಾನ್ ಅನ್ನು ಗ್ರಾಹಕರು ಒಂದೇ ಬಾರಿ ಮುಂಗಡವಾಗಿ ಆರು ತಿಂಗಳಿಗೆ ರೀಚಾರ್ಜ್ ಮಾಡಿಸಿಕೊಂಡರೆ, ಪ್ರತಿ ತಿಂಗಳ ಶುಲ್ಕ 349ರೂ. ಆಗಿರಲಿದೆ. ಅಂದಹಾಗೇ ಈ ಹೊಸ ಪ್ಲ್ಯಾನಿನ ತಿಂಗಳ ಶುಲ್ಕವು ಟ್ಯಾಕ್ಸ್‌ ದರವನ್ನು ಒಳಗೊಂಡಿರುವುದಿಲ್ಲ. ಈ ಮೊತ್ತಕ್ಕೆ ಶೇ.18% ಟ್ಯಾಕ್ಸ್‌ ಅನ್ವಯವಾಗುತ್ತದೆ. ಇನ್ನು ಆರಂಭಿಕ ಈ ಪ್ಲ್ಯಾನಿನ ಇಂಟರ್ನೆಟ್ ವೇಗವು 75Mbps ಆಗಿರಲಿದೆ.

ಹೈದ್ರಾಬಾದ್ ಸೇರಿದಂತೆ ಸುಮಾರು 20 ಸರ್ಕಲ್ ವ್ಯಾಪ್ತಿಯಲ್ಲಿ ಹಾತ್‌ವೇ ಬ್ರಾಡ್‌ಬ್ಯಾಂಡ್‌ ಸೇವೆಯು ಚಾಲ್ತಿಯಲ್ಲಿದೆ. ಸಂಸ್ಥೆಯು 25 Mbps, 50 Mbps, 75 Mbps, 80 Mbps, 100 Mbps ಮತ್ತು 125 Mbps ವೇಗದ ಸಾಮರ್ಥ್ಯದ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಹೊಂದಲು ಗ್ರಾಹಕರಿಗೆ ಒಟ್ಟು ಮೂರು ಚಂದಾದಾರಿಕೆಯ ಆಯ್ಕೆ ಇದ್ದು, ಅವುಗಳು ಕ್ರಮವಾಗಿ ಒಂದು ತಿಂಗಳಿಗೆ, ಆರು ತಿಂಗಳಿಗೆ ಮತ್ತು 12 ತಿಂಗಳಿಗೆ (ವಾರ್ಷಿಕ) ಆಯ್ಕೆಗಳಿವೆ.

ಹಾತ್‌ವೇ ಟೆಲಿಕಾಂನ 75 Mbps ವೇಗದ ಬ್ರಾಡ್‌ಬ್ಯಾಂಡ್ ತಿಂಗಳ ಶುಲ್ಕವು 449ರೂ. ಆಗಿದೆ. ಇದೇ ಪ್ಲ್ಯಾನಿನ ಆರು ತಿಂಗಳ ಶುಲ್ಕವು 2,649ರೂ. ಆಗಿದ್ದು, 12 ತಿಂಗಳ ಶುಲ್ಕವು 4,788ರೂ.ಗಳಾಗಿದೆ. ಅದೇ ರೀತಿ ಸಂಸ್ಥೆಯ 100 Mbps ವೇಗದ ಬ್ರಾಡ್‌ಬ್ಯಾಂಡ್ ತಿಂಗಳ ಶುಲ್ಕವು 599ರೂ. ಆಗಿದ್ದು, ಅದೇ ಪ್ಲ್ಯಾನ್‌ ಅನ್ನು ಆರು ತಿಂಗಳಿಗೆ ಅಥವಾ 12 ತಿಂಗಳಿಗೆ ರೀಚಾರ್ಜ್ ಮಾಡಿಸಿದರೇ ರಿಯಾಯಿತಿ ಸಿಗಲಿದೆ.

Most Read Articles
Best Mobiles in India
Read More About: hathway broadband plans connection

Have a great day!
Read more...

English Summary

Hathway Super broadband plan offering 25 Mbps comes at a price of just Rs 399 per month. to know more visit to kannada.gizbot.com