Home
ಸುದ್ದಿಜಾಲ

ಲಾಂಚ್‌ಗೆ ಸಜ್ಜಾಗುತ್ತಿದೆ HONOR 300 Pro!..ಇದರ ಡಿಸೈನ್‌ಗೆ ನೀವು ಫಿದಾ ಆಗ್ತೀರಾ!

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಹಾನರ್‌ (HONOR) ಮೊಬೈಲ್‌ ಸಂಸ್ಥೆಯು ಸದ್ಯ ತನ್ನ ಬಹುನಿರೀಕ್ಷಿತ ಹಾನರ್‌ 300 ಸರಣಿ ಬಿಡುಗಡೆಯಲ್ಲಿ ಬ್ಯುಸಿ ಆಗಿದೆ. ಆದರೆ ಅಧಿಕೃತ ಲಾಂಚ್‌ಗೂ ಮುಂಚಿತವಾಗಿ ಸಂಸ್ಥೆಯು ಬರಲಿರುವ ಹಾನರ್‌ 300 ಮತ್ತು ಹಾನರ್‌ 300 ಪ್ರೊ ಮೊಬೈಲ್‌ಗಳ ವಿನ್ಯಾಸವನ್ನು ಬಹಿರಂಗ ಮಾಡಿದೆ. ಈ ಎರಡು ಫೋನ್‌ಗಳ ಡಿಸೈನ್‌ ಸಖತ್‌ ಸ್ಟೈಲಿಶ್‌ ಎನಿಸಿದ್ದು, ಭಿನ್ನ ಕ್ಯಾಮೆರಾ ಮಾಡ್ಯೂಲ್‌ ಪಡೆದಿದೆ.

ಹೌದು, ಹಾನರ್‌ ಸಂಸ್ಥೆಯು ಹಾನರ್‌ 300 (HONOR 300) ಹಾಗೂ ಹಾನರ್‌ 300 ಪ್ರೊ (HONOR 300 Pro) ಮೊಬೈಲ್‌ಗಳ RAM ಮಾಹಿತಿ ಹಾಗೂ ಡಿಸೈನ್‌ ಬಗ್ಗೆ ಮಾಹಿತಿ ಬಹಿರಂಗ ಮಾಡಿದೆ. ಮಾಹಿತಿ ಪ್ರಕಾರ ಈ ಫೋನ್‌ಗಳು ರಾಕ್ ಬ್ಲಾಕ್, ಟೀ ಗ್ರೀನ್ ಮತ್ತು ಸ್ಟಾರ್‌ಲೈಟ್ ಸ್ಯಾಂಡ್ ಕಲರ್‌ ಆಯ್ಕೆಯನ್ನು ಪಡೆದಿರಲಿವೆ ಎಂದು ಹೇಳಲಾಗಿದೆ.

ಲಾಂಚ್‌ಗೆ ಸಜ್ಜಾಗುತ್ತಿದೆ HONOR 300 Pro!..ಇದರ ಡಿಸೈನ್‌ಗೆ ನೀವು ಫಿದಾ ಆಗ್ತೀರಾ

ಹಾಗೆಯೇ ಈ ಸರಣಿ 12GB + 256GB, 12GB + 512GB ಮತ್ತು 16GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿರಲಿವೆ. ಹಾಗೆಯೇ ಕರ್ವ್ಡ್‌ ಡಿಸ್‌ಪ್ಲೇ ಸಹ ಇರುವ ಬಗ್ಗೆ ಲೀಕ್‌ ಫೋಟೋಗಳು ಸೂಚಿಸುತ್ತವೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿವೆ. ಇನ್ನುಳಿದಂತೆ ಹಾನರ್‌ನ ಈ ಎರಡು ಫೋನ್‌ಗಳ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ 300 ಪ್ರೊ ನಿರೀಕ್ಷಿತ ಫೀಚರ್ಸ್‌

ಬರಲಿರುವ ನೂತನ ಹಾನರ್‌ 300 ಪ್ರೊ (HONOR 300 Pro) ಫೋನ್‌ ರಾಕ್ ಬ್ಲಾಕ್, ಟೀ ಗ್ರೀನ್ ಮತ್ತು ಸ್ಟಾರ್‌ಲೈಟ್ ಸ್ಯಾಂಡ್ ಕಲರ್‌ ಆಯ್ಕೆಗಳನ್ನು ಒಳಗೊಂಡಿರಲಿದೆ. ಈ ಫೋನ್‌ 12 GB + 256GB, 12GB + 512 GB ಮತ್ತು 16 GB + 512GB ವೇರಿಯಂಟ್‌ ಆಯ್ಕೆಗಳನ್ನು ಇದು ಪಡೆದಿರಲಿದೆ. ಬರಲಿದೆ. ಪೋಟ್ರೇಟ್ ಕ್ಯಾಮೆರಾ ಮತ್ತು ಕರ್ವ್‌ ಸ್ಕ್ರೀನ್‌ ರಚನೆ ಅನ್ನು ಒಳಗೊಂಡಿರಲಿದೆ. ಇದರ ಜೊತೆಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಇರಲಿದೆ.

ಹಾನರ್‌ 300 ನಿರೀಕ್ಷಿತ ಫೀಚರ್ಸ್‌
ಬರಲಿರುವ ನೂತನ ಹಾನರ್‌ 300 (HONOR 300) ಮೊಬೈಲ್‌ ಲುಯಾನ್ ಪರ್ಪಲ್, ಮೋಯಾನ್ ಬ್ಲಾಕ್, ಚಕಾ ಗ್ರೀನ್, ಕ್ಯಾಂಗ್ಶನ್ ಗ್ರೇ ಮತ್ತು ಯುಲಾಂಗ್ ಸ್ನೋ ಕಲರ್‌ ಆಯ್ಕೆಗಳನ್ನು ಪಡೆದಿರಲಿದೆ. ಅಂದಹಾಗೆ ಈ ಮೊಬೈಲ್‌ 8GB + 256GB, 12GB + 256GB, 12GB + 512GB ಮತ್ತು 16GB + 512GB ವೇರಿಯಂಟ್‌ ಆಯ್ಕೆಗಳನ್ನು ಇದು ಪಡೆದಿರಲಿದೆ. ಇದು ಫ್ಲಾಟ್ ಸ್ಕ್ರೀನ್‌ ಅನ್ನು ಪಡೆದಿರಲಿದ್ದು, 6.97 ಎಂಎಂ ನಯವಾದ ವಿನ್ಯಾಸವನ್ನು ಬಹಿರಂಗಪಡಿಸಿದೆ.

ಇನ್ನು ಹಾನರ್‌ ಕಂಪನಿಯ ಹಾನರ್‌ 200 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಹಾಗೆಯೇ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದು 8 GB RAM + 256 GB ಹಾಗೂ 12 GB + 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಇದು ಪಡೆದಿದೆ.

ಹಾಗೆಯೇ ಈ ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದರ ಸೆಲ್ಫಿ ಕ್ಯಾಮೆರಾವು ಸಹ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇದಲ್ಲದೇ ಈ ಮೊಬೈಲ್‌ 5,200mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಸಹ ಇದೆ.

Best Mobiles in India

English summary
HONOR has Unveiled the RAM, design of the HONOR 300 and HONOR 300 Pro Mobiles ahead of launch. check other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+