ಹುವಾವೆ ಸೌಂಡ್‌ X ವಾಯರ್‌ಲೆಸ್‌ ಸ್ಪೀಕರ್‌ ಅನಾವರಣ!


ಹುವಾವೆ ಸಂಸ್ಥೆಯು ತನ್ನ ಬಹುನಿರೀಕ್ಷಿತ ಪಿ40 ಸ್ಮಾರ್ಟ್‌ಫೋನ್‌ ಸರಣಿಯನ್ನು ನೆನ್ನೆ (ಮಾ.26ರಂದು )ಬಿಡುಗಡೆ ಮಾಡಿದೆ. ಈ ಸರಣಿಯು ಹುವಾವೆ ಪಿ40, ಹುವಾವೆ ಪಿ40 ಪ್ರೊ ಮತ್ತು ಹುವಾವೆ ಪಿ40 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಅವುಗಳೊಂದಿಗೆ ಹುವಾವೆ ಸೌಂಡ್‌ X ವಾಯರ್‌ಲೆಸ್‌ ಸ್ಮಾರ್ಟ್‌ ಸ್ಪೀಕರ್‌ವೊಂದು ಸಹ ಲಾಂಚ್ ಮಾಡಿದೆ. ಈ ಸ್ಪೀಕರ್‌ ತನ್ನ ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ.

Advertisement

ಹೌದು, ಹುವಾವೆ ಸಂಸ್ಥೆಯು ಸೌಂಡ್‌ X ವಾಯರ್‌ಲೆಸ್‌ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆ ಮಾಡಿದೆ. ಈ ಸ್ಪೀಕರ್‌ ಅನ್ನು ಹುವಾವೇ ಮತ್ತು ಡೆವಿಯಲೆಟ್ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಸೊನೊರಸ್ ಆಡಿಯೊದೊಂದಿಗೆ ಉನ್ನತ-ಮಟ್ಟದ ಅಕೌಸ್ಟಿಕ್ (acoustic) ತಂತ್ರಜ್ಞಾನ ಈ ಸ್ಪೀಕರ್‌ನಲ್ಲಿ ಹುವಾವೆ ಒದಗಿಸಿದೆ. ಆಕರ್ಷಕ ಡಿಸೈನ್‌ ಹೊಂದಿದ್ದು, ವಾಯರ್‌ಲೆಸ್‌ ಕಾರ್ಯವೈಖರಿಯನ್ನು ಈ ಡಿವೈಸ್ ಹೊಂದಿದೆ.

Advertisement

ಹುವಾವೆಯ ಈ ಸ್ಪೀಕರ್ ಡೆವಿಯಲೆಟ್ ಸಂಸ್ಥೆ ಮಾದರಿಯ ಸ್ಪೀಕರ್ ಆಕ್ಟಿವ್ ಮ್ಯಾಚಿಂಗ್ (SAM) ಸಿಗ್ನಲ್-ಪ್ರೊಸೆಸಿಂಗ್ ಮತ್ತು ಪುಶ್-ಪುಶ್ ಸ್ಪೀಕರ್ ವಿನ್ಯಾಸವನ್ನು ಹೊಂದಿದೆ. ಈ ಸ್ಪೀಕರ್ 360 ಡಿಗ್ರಿ ಹೈ-ರೆಸ್ (Hi-Res) ಆಡಿಯೊವನ್ನು ಹೊರಹಾಕಲಿದೆ. ವೇಗವಾಗಿ ಬ್ಲೂಟೂತ್ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿದ್ದು, ವಾಯರ್‌ಲೆಸ್ ಆಪರೇಟಿಂಗ್ ಸೌಲಭ್ಯ ಪಡೆದಿದೆ. ಫೋನಿನ NFC ಆಯ್ಕೆಯನ್ನು ಬಳಕೆ ಮಾಡಿ ಸ್ಪೀಕರ್ ಕನೆಕ್ಟ್ ಮಾಡಿದರೇ ತಡವಿಲ್ಲದೆ ಸಾಂಗ್ ಟ್ರಾಕ್ ಪ್ಲೇ ಆಗುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಕರೆಗಳ ಸೌಲಭ್ಯವನ್ನು ಪಡೆದಿದ್ದು, ಬಳಕೆದಾರರು ಇಂದು ಟ್ಯಾಪ್ ಮಾಡುವ ಮೂಲಕ ಕರೆಯ ಮೋಡ್‌ಗೆ ಆಯ್ಕೆಯನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಲೋ-ಲೇಟೆನ್ಸಿ ಆಡಿಯೊವನ್ನು ಸೌಲಭ್ಉ ಒದಗಿಸುತ್ತದೆ. ಆಡಿಯೊಗೂ ಅತ್ಯುತ್ತಮ ವ್ಯವಸ್ಥೆ ಹೊಂದಿದ್ದು, ಈ ಡಿವೈಸ್‌ನಲ್ಲಿ ಡ್ಯುಯಲ್‌ ಸಬ್‌ವೂಫರ್‌ಗಳಿದ್ದು, ಅವುಗಳು 60W ಬಾಸ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿವೆ.

ಹುವಾವೇ ಈ ಹೊಸ ವಾಯರ್‌ಲೆಸ್‌ ಸ್ಪೀಕರ್‌ನ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಂಪನಿಯು ಕಳೆದ 2019 ರ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಅನಾವರಣಗೊಳಿಸಿದ್ದ ಹುವಾವೇ ಮಿನಿ ಸ್ಪೀಕರ್ ಬೆಲೆಯು 1,999 ರೂ. ಆಗಿದೆ. ಈ ಮಿನಿ ಸ್ಪೀಕರ್ 360-ಡಿಗ್ರಿ ಸ್ಟೀರಿಯೊ ಆಡಿಯೊ ಸಂಯೋಜನೆ ರಚಿಸಬಹುದಾಗಿದೆ. ಹಾಗೆಯೇ ಹುವಾವೆ ಫ್ರೀಲೆಸ್‌, ವಾಯರ್‌ಲೆಸ್ ಇಯರ್‌ಫೋನ್ ಬೆಲೆಯು 4,999ರೂ.ಆಗಿದೆ.

Best Mobiles in India

English Summary

Huawei wireless speaker comes with Devialet's patented Speaker Active Matching (SAM) signal-processing and Push-Push speaker design.