Home
ಸುದ್ದಿಜಾಲ

ಇಂದು Infinix Hot 50 5G ಸೇಲ್: 9,000ಕ್ಕಿಂತ ಕಡಿಮೆ ಬೆಲೆ.. ಡಿಸ್ಕೌಂಟ್‌ ಕೂಡ ಸಿಗುತ್ತೆ!

ಇನ್ಫಿನಿಕ್ಸ್‌ (Infinix) ಕಂಪನಿಯ ಹೊಸ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಫೋನ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಕಂಪನಿಯ ಹಾಟ್ (Hot) ಸರಣಿಯಲ್ಲಿ ನೂತನ ಫೋನ್ ಆಗಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ಇಂದು (ಸೆಪ್ಟೆಂಬರ್ 9) ಮಧ್ಯಾಹ್ನ 2 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ತನ್ನ ಮೊದಲ ಮಾರಾಟಕ್ಕೆ ಸಜ್ಜಾಗಿದೆ. ಮೊದಲ ದಿನವೇ ಈ ಫೋನ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಕೆಲವು ಆಫರ್‌ಗಳನ್ನು ನೀಡುತ್ತಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಇನ್ಫಿನಿಕ್ಸ್‌ ತನ್ನ ಅಭಿಮಾನಿಗಳ ಬಜೆಟ್‌ ಗಮನದಲ್ಲಿಟ್ಟುಕೊಂಡು ಇನ್ಫಿನಿಕ್ಸ್‌ ಹಾಟ್‌ 50 5G ಫೋನನ್ನು ಪರಿಚಯಿಸಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ HD + LCD ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಷನ್ 6300 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಕಂಪನಿಯು ಡುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX582 ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಹೊಂದಿದೆ.

ಇಂದು Infinix Hot 50 5G ಸೇಲ್: 9,000ಕ್ಕಿಂತ ಕಡಿಮೆ ಬೆಲೆ.. ಡಿಸ್ಕೌಂಟ್‌ ಕೂಡ ಸ

ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನ ಬೆಲೆ ಮತ್ತು ಆಫರ್‌ಗಳು

4GB RAM + 128GB ಸ್ಟೋರೇಜ್ ಬೆಲೆ = 9,999 ರೂ.
8GB RAM + 128 GB ಸ್ಟೋರೇಜ್ ಬೆಲೆ = 10,999 ರೂ.

ಕಂಪನಿಯು ಇನ್ಫಿನಿಕ್ಸ್‌ ಹಾಟ್‌ 50 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ನೀವು ವೈಬ್ರೆಂಟ್ ಬ್ಲೂ, ಸ್ಲೀಕ್ ಬ್ಲಾಕ್, ಸೇಜ್ ಗ್ರೀನ್ ಮತ್ತು ಡ್ರೀಮಿ ಪರ್ಪಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಬಿಡುಗಡೆ ಭಾಗವಾಗಿ ಕೆಲವು ಆಫರ್‌ಗಳನ್ನು ಸಹ ನೀಡುತ್ತಿದೆ. ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ಈ ಫೋನ್ ಖರೀದಿಸಿದರೆ 1,000 ರೂ. ಡಿಸ್ಕೌಂಟ್ ಸಿಗುತ್ತದೆ.

ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನ ಫೀಚರ್ಸ್‌

ಡಿಸ್ಪ್ಲೇ: ಈ 5G ಫೋನ್ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.

ಪ್ರೊಸೆಸರ್: ಇನ್ಫಿನಿಕ್ಸ್‌ ಹಾಟ್‌ 50 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6300 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್‌ ಉತ್ತಮ ಡೌನ್‌ಲೋಡ್ ವೇಗ ಮತ್ತು ಗೇಮ್‌ಗಳನ್ನು ಆಡುವ ಸಾಮರ್ಥ್ಯವನ್ನು ನೀಡುತ್ತದೆ. ಈ ಫೋನನ್ನು 4GB + 128GB ಮತ್ತು 8GB + 128GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 8GB ವರೆಗೆ ವಿಸ್ತೃತ RAMಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದರ ಸಹಾಯದಿಂದ ಒಟ್ಟು 16GB ವರೆಗೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ?: iPhone 16 Series: ಬಿಡುಗಡೆಗೂ ಮೊದಲೇ.. ಐಫೋನ್ 16 ಸರಣಿಯ ಬೆಲೆ ಸೋರಿಕೆ! ಎಷ್ಟು ಗೊತ್ತೇ?

ಕ್ಯಾಮೆರಾ: ಈ ಹೊಸ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನಿನ ಹಿಂದಿನ ಪ್ಯಾನೆಲ್‌ನಲ್ಲಿ ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX582 ಕ್ಯಾಮೆರಾ ಲೆನ್ಸ್ ಇದೆ. ಇದರಲ್ಲಿ ಎಐ (AI) ಲೆನ್ಸ್ ಕೂಡ ಇದೆ. ಈ ಕ್ಯಾಮೆರಾದಲ್ಲಿ ನೀವು 12ಕ್ಕೂ ಹೆಚ್ಚು ಮೋಡ್‌ಗಳನ್ನು ಪಡೆಯಬಹುದು. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಎಐ ಚಾರ್ಜ್ ರಕ್ಷಣೆ, ಪವರ್ ಮ್ಯಾರಥಾನ್, ಸ್ಮಾರ್ಟ್ ಮೋಡ್, ಅಲ್ಟ್ರಾ ಪವರ್ ಸೇವಿಂಗ್ ಮೋಡ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಇತರೆ ಫೀಚರ್ಸ್‌: ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನಲ್ಲಿ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಹಲವು ಎಐ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂತ್ ಲಭ್ಯವಿದೆ. ಡೈನಾಮಿಕ್ ಬಾರ್ ಇಂಟರಾಕ್ಟಿವ್ ಸ್ಕ್ರೀನ್ ಕೂಡ ಇದರಲ್ಲಿರುವುದು ವಿಶೇಷ. ಈ ಮೊಬೈಲ್ ವಿಭಾಗ-ಮೊದಲ TUV SUD A ಮಟ್ಟದ 60 ತಿಂಗಳ ನಿರರ್ಗಳ ಭರವಸೆಯನ್ನು ಪಡೆಯುತ್ತದೆ. ಇದು 5 ವರ್ಷಗಳವರೆಗೆ ನಿರಂತರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

Best Mobiles in India

English summary
Infinix Hot 50 5G goes on first sale in India Today Via Flipkart: Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+