ಅಧಿಕ ಡೇಟಾಗೆ ಜಿಯೋ ಫೈಬರ್ 199ರೂ. ಪ್ಲ್ಯಾನ್ ಉತ್ತಮ ಆಯ್ಕೆ!


ದೇಶದ ಟೆಲಿಕಾಂ ವಲಯದಲ್ಲಿ ಭಾರಿ ಬದಲಾವಣೆ ಅಲೆ ಎಬ್ಬಿಸಿದ ರಿಲಾಯನ್ಸ್ ಜಿಯೋ ಸಂಸ್ಥೆಯು, ಜಿಯೋ ಫೈಬರ್ ಪರಿಚಯಿಸಿ ಮತ್ತೆ ಸೌಂಡ್ ಮಾಡ್ತಿದೆ. ಅಗ್ಗದ ಬೆಲೆಯಲ್ಲಿ ತಿಂಗಳ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ನೀಡಿರುವ ಜಿಯೋ ಫೈಬರ್, ವಾರದ ಬ್ರಾಡ್‌ಬ್ಯಾಂಡ್ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿ ಗ್ರಾಹಕರಿಗೆ ಮತ್ತೆ ಖುಷಿ ಸಮಾಚಾರ ನೀಡಿದೆ. ಈ ವಾರದ ರೀಚಾರ್ಜ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಅಧಿಕ ಡೇಟಾ ಸೌಲಭ್ಯ ಸಿಗಲಿದೆ.

Advertisement

ಹೌದು, ಜನಪ್ರಿಯ ಜಿಯೋ ಟೆಲಿಕಾಂ ಇತ್ತೀಚಿಗೆ 199ರೂ. ಬೆಲೆಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಲಾಂಚ್ ಮಾಡಿದ್ದು, ಈ ಪ್ಲ್ಯಾನ್ ಒಂದು ವಾರದ (ಏಳು ದಿನಗಳ) ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಆದರೆ ಈ ಅವಧಿಯಲ್ಲಿ ಬರೊಬ್ಬರಿ 1TB ಡೇಟಾ ಪ್ರಯೋಜನವನ್ನು ಒದಗಿಸಲಿದೆ. ಗ್ರಾಹಕರು ಇದೇ ಪ್ಲ್ಯಾನ್‌ನ್ನು 30 ದಿನಗಳಿಗೆ ರೀಚಾರ್ಜ್ ಮಾಡಿಸಿದರೇ ಒಟ್ಟು 4.5TB ಡೇಟಾ ಸೌಲಭ್ಯ ಲಭ್ಯವಾಗಲಿದೆ.

Advertisement

ಜಿಯೋ ಫೈಬರ್‌ನ ಕೆಲವು ಗ್ರಾಹಕರು ತಿಂಗಳ ಪ್ಲ್ಯಾನಿನಲ್ಲಿನ FUP ಮಿತಿ ತಪ್ಪಿಸಲು ಈಗಾಗಾಲೇ ಈ ರೀತಿ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಈ ಯೋಜನೆಯಲ್ಲಿ 1,170ರೂ ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಒಟ್ಟು 5TB ಡೇಟಾ ದೊರೆಯುತ್ತದೆ ಹಾಗೂ 30 ದಿನಗಳ ವ್ಯಾಲಿಡಿಟಿ ಅವಧಿಯು ಲಭ್ಯವಾಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಇರಲಿದೆ.

ಹೀಗಾಗಿ ತಿಂಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಿಂತ ವಾರದ ಪ್ಲ್ಯಾನ್ ರೀಚಾರ್ಜ್ ಮಾಡಿಸುವುದು ಉತ್ತಮ ಆಯ್ಕೆ ಎಂದಿನಿಸುತ್ತದೆ. ಏಕೆಂದರೇ ಜಿಯೋದ ಆರಂಭಿಕ ಬ್ರಾಡ್‌ಬ್ಯಾಂಡ್ 699ರೂ. ಪ್ಲ್ಯಾನ್ 150GB ಡೇಟಾ ಲಭ್ಯವಾಗುತ್ತದೆ. ಅದೇ ರೀತಿ 1299ರೂ.(18% GST) ಬೆಲೆಯ ಗೋಲ್ಡ್‌ ಪ್ಲ್ಯಾನಿನಲ್ಲಿ ಒಟ್ಟು 750GB ಡೇಟಾ ಪ್ರಯೋಜನ ಸಿಗಲಿದೆ. ಈ ದೃಷ್ಠಿಯಿಂದ ಜಿಯೋ ಫೈಬರ್ ವಾರದ ಪ್ಲ್ಯಾನ್ ಬೆಸ್ಟ್ ಆಗಿದೆ.

ಜಿಯೋ ಫೈಬರ್ ಒಟ್ಟು ಆರು ಪ್ರೈಸ್‌ಟ್ಯಾಗ್ ಮಾದರಿಯಲ್ಲಿ ಭಿನ್ನ ಪ್ರಯೋಜನಗಳನ್ನು ಒಳಗೊಂಡ ತಿಂಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ 699ರೂ. ಬ್ರಾಂಜ್ ಎಂಟ್ರಿ ಲೆವೆಲ್ ಪ್ಲ್ಯಾನ್ ಆಗಿದೆ. ನಂತರ ಸಿಲ್ವರ್ 849ರೂ, ಪ್ಲ್ಯಾನ್, ಗೋಲ್ಡ್‌ 1299ರೂ. ಪ್ಲ್ಯಾನ್, ಡೈಮಂಡ್ 2499ರೂ. ಪ್ಲ್ಯಾನ್, ಪ್ಲಾಟಿನಂ 3999ರೂ. ಪ್ಲ್ಯಾನ್ ಹಾಗೂ 8,499ರೂ. ಬೆಲೆಯ ಟೈಟಾನಿಯಂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್. ಈ ಎಲ್ಲ ಪ್ಲ್ಯಾನ್‌ಗಳು ವಾಯಿಸ್‌ ಕರೆ, ವಿಡಿಯೊ ಕರೆ ಹಾಗೂ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ಪಡೆದಿವೆ.

Best Mobiles in India

English Summary

Reliance Jio is offering a weekly standalone pack of Rs 199.