ಇನ್ನೇನು ಶುರುವಾಗಲಿದೆ Jio Star ದರ್ಬಾರ್.. ಹೊಸ OTTಯಲ್ಲಿ ಏನಿರುತ್ತೆ?
ಜನಪ್ರಿಯ ದಿಗ್ಗಜ ಟೆಲಿಕಾಂ ರಿಲಯನ್ಸ್ ಜಿಯೋ ( Jio ) ದ Viacom18 ಹಾಗೂ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ( Star India Private Limited ) ಸಂಸ್ಥೆಗಳ ನಡುವಿನ ವಿಲೀನವು ಈ ವಾರಾಂತ್ಯದಲ್ಲಿ ಮುಕ್ತಾಯ ಆಗುವ ನಿರೀಕ್ಷೆ ಇದೆ. ಇನ್ನು ಈ ಸಂಸ್ಥೆಗಳ ವಿಲೀನದ ನಂತರ, ನೂತನ ವೆಬ್‌ಸೈಟ್ ಕಾಣಿಸಲಿದ್ದು, ಹೊಸ ಸ್ಟ್ರೀಮಿಂಗ್ ಸೇವೆಗೆ ಪ್ಲಾಟ್‌ಫಾರ್ಮ್ ಆಗಲಿದೆ.
ಹೌದು, ದೇಶದ ಲೀಡಿಂಗ್ ಓಟಿಟಿ ತಾಣಗಳ ಲಿಸ್ಟ್‌ನಲ್ಲಿ ಸೇರಿರುವ ಜಿಯೋ ಸಿನಿಮಾ (JioCinema) ಹಾಗೂ ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ವಿಲೀನ ಆಗುವುದು ಈಗ ಗುಟ್ಟಾಗಿ ಉಳಿದಿಲ್ಲ. ಇನ್ನು ವಿಲೀನದ ಬಳಿಕ ಹೊಸ ಸ್ಟ್ರೀಮಿಂಗ್ ವೆಬ್‌ಸೈಟ್ ಕಾಣಿಸಿಕೊಳ್ಳಲಿದ್ದು, ಅದುವೇ ಜಿಯೋ ಸ್ಟಾರ್ (Jio star) ಆಗಿರಲಿದೆ. ಅಂದಹಾಗೆ ಈ ಮೊದಲು ಜಿಯೋ ಹಾಟ್‌ಸ್ಟಾರ್ ಹೆಸರಿನಿಂದ ಪರಿಚಿತವಾಗಲಿದೆ ಎಂದು ಸುದ್ದಿ ಆಗಿತ್ತು.

ಜಿಯೋ ಸ್ಟಾರ್
ಈ ಎರಡು ಸಂಸ್ಥೆಗಳ ಸಂಯೋಜನೆ ಬಳಿಕ ಹೊಸ ಸ್ಟ್ರೀಮಿಂಗ್ ಸೇವೆಯನ್ನು ಜಿಯೋ ಸ್ಟಾರ್ (Jio star) ಎಂಬ ಹೆಸರಿನಿಂದ ಕರೆಯಬಹುದು ಎನ್ನುವ ವದಂತಿಗಳು ಇವೆ. ಇನ್ನು ನೂತನ ವೆಬ್‌ಸೈಟ್ jiostar.com ಆಗಿರಲಿದೆ. ಅಂದಹಾಗೆ ಇದೇ ನವೆಂಬರ್ 14 ರಂದು ಬಳಕೆದಾರರಿಗೆ ತನ್ನ ಸ್ಟ್ರೀಮಿಂಗ್ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಸದ್ಯ ವೆಬ್‌ಸೈಟ್‌ನಲ್ಲಿ 'ಶೀಘ್ರದಲ್ಲೇ ಬರಲಿದೆ' ಎಂಬ ಸಂದೇಶ ಕಾಣಿಸುತ್ತಿದೆ.
ಕ್ರಿಕೆಟ್ ಉತ್ಸಾಹಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮ್ಯಾಚ್‌ಗಳು ಸೇರಿದಂತೆ ಇತರೆ ಹಲವು ಲೈವ್ ಕ್ರೀಡಾಕೂಟಗಳು ಇನ್ನೂ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ (Disney+ Hotstar) ಮಾತ್ರ ಲಭ್ಯ ಇರಲಿವೆ ಎಂದು ಹೇಳಲಾಗುತ್ತಿದೆ. ನೂತನ ಸ್ಟ್ರೀಮಿಂಗ್ ಸೇವೆಯನ್ನು JioHotstar ಎಂದು ಕರೆಯಬಹುದು ಎಂದು ಅನೇಕರು ಊಹಿಸಿದ್ದರು ಆದರೆ ದೆಹಲಿಯ ಡೆವಲಪರ್ ಅದಾಗಲೇ ಆ ಡೊಮೇನ್ ಅನ್ನು ಖರೀದಿಸಿದರು.
ನಿರೀಕ್ಷಿತ ಜಿಯೋ ಸ್ಟಾರ್ ವೆಬ್‌ಸೈಟ್ ಜಿಯೋ ಸ್ಟಾರ್ ( Jio Star ) ಹೆಸರಿನಲ್ಲಿ ನೂತನ OTT ಪ್ಲಾಟ್‌ಫಾರ್ಮ್ ಲಭ್ಯ. ಇನ್ನು ಇದರ ಡೊಮೇನ್ ಆಗಿರುತ್ತದೆ (jiostar.com). ನವೆಂಬರ್ 14 ರಿಂದ, ಬಳಕೆದಾರರಿಗೆ ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸಲಾಗುತ್ತದೆ.
ನೆಟ್‌ಫ್ಲಿಕ್ಸ್ ಓಟಿಟಿ
ಜನಪ್ರಿಯ ನೆಟ್‌ಫ್ಲಿಕ್ಸ್ ಓಟಿಟಿ ( OTT ) ತಾಣವು ಭಾರತದಲ್ಲಿ ಭಿನ್ನ ಚಂದಾದಾರಿಕೆ ಆಯ್ಕೆಗಳನ್ನು ಒದಗಿಸಿದೆ. ಮೊಬೈಲ್ ಮಾತ್ರ ಆವೃತ್ತಿಯ ತಿಂಗಳ ಶುಲ್ಕ 149ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಚಂದಾದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.
ಅಮೆಜಾನ್ ಪ್ರೈಮ್ ವಿಡಿಯೋ ಓಟಿಟಿ
ಅಮೆಜಾನ್ ಪ್ರೈಮ್ ವಿಡಿಯೋ (amazon prime video) ಮೊಬೈಲ್ ಆವೃತ್ತಿಯ ವಾರ್ಷಿಕ ಚಂದಾದಾರಿಕೆಯ ಶುಲ್ಕ 599 ರೂ. ಆಗಿದೆ. ಇದು ಸ್ಮಾರ್ಟ್‌ಫೋನ್ ಮಾತ್ರ ಆವೃತ್ತಿಯ ಚಂದಾದಾರಿಕೆ ಶುಲ್ಕ ಆಗಿದ್ದು, ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋದ ಸ್ಪೆಷಲ್ ಕಂಟೆಂಟ್ ಲೈಬ್ರರಿ ಸಹ ಪಡೆಯಬಹುದು.
ಡಿಸ್ನಿ + ಹಾಟ್‌ಸ್ಟಾರ್ ಓಟಿಟಿ
ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಸಹ ಜನಪ್ರಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಡಿಸ್ನಿ + ಹಾಟ್‌ಸ್ಟಾರ್ ಓಟಿಟಿ ಮೊಬೈಲ್ ಡಿವೈಸ್ ಆವೃತ್ತಿಗಾಗಿ, ಮಾಸಿಕ ಮತ್ತು ವಾರ್ಷಿಕ ಆಯ್ಕೆಯ ಎರಡೂ ಚಂದಾದಾರಿಕೆಯ ಯೋಜನೆ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಯೋಜನೆಯ ಮೂರು ತಿಂಗಳ ಚಂದಾದಾರಿಕೆ ಶುಲ್ಕ 149 ರೂ. ಆಗಿದೆ.


Click it and Unblock the Notifications








