ಮಾರುಕಟ್ಟೆಗೆ ಬಂದೇ ಬಿಡ್ತು OnePlus Nord 4 ಫೋನ್; ವಾವ್ ಎನಿಸುವ ಫೀಚರ್ಸ್!
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಒನ್‌ಪ್ಲಸ್ ಸಂಸ್ಥೆಯ ಒನ್‌ಪ್ಲಸ್ ನಾರ್ಡ್ 4 (OnePlus Nord 4) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಬಹುನಿರೀಕ್ಷಿತ ಈ ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಜೊತೆಗೆ ಸ್ಟನ್ನಿಂಗ್ ಲುಕ್ ರಚನೆ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆ ಅನ್ನು ಒಳಗೊಂಡಿದೆ.
ಹೌದು, ಜನಪ್ರಿಯ ಒನ್‌ಪ್ಲಸ್ ಕಂಪನಿಯು ತನ್ನ ಹೊಸ ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಮೆಟಲ್ ರಚನೆ ಪಡೆದಿರುವ ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್ 3 ಫೋನಿನ ಉತ್ತರಾಧಿಕಾರಿ ಆಗಿದೆ. ಹಾಗೆಯೇ ಈ ಫೋನ್ 5,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 1.5K ರೆಸಲ್ಯೂಶನ್ ಹೊಂದಿರುವ AMOLED ಸ್ಕ್ರೀನ್ ಪಡೆದಿದೆ. ಇನ್ನುಳಿದಂತೆ ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ ನಾರ್ಡ್ 4 ಫೀಚರ್ಸ್
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ 6.74 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1240 x 2772 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಸೌಲಭ್ಯ ಕೂಡಾ ಪಡೆದಿದ್ದು, ಹಾಗೆಯೇ ಇದು 451ppi ಪಡೆದಿದೆ. ಇದರ ಜೊತೆಗೆ HDR10+ ಸಪೋರ್ಟ್ ಸಹ ಇದೆ.
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಸ್ಟೋರೇಜ್ ಅನ್ನು ಒಳಗೊಂಡಿದೆ.
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ. ಇದರ ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಒನ್‌ಪ್ಲಸ್ ನಾರ್ಡ್ 4 ಸ್ಮಾರ್ಟ್‌ಫೋನ್ 5,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದರೊಂದಿಗೆ 100W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಕೂಡಾ ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಇವೆ.
ಬೆಲೆ ಹಾಗೂ ಲಭ್ಯತೆ
ಒನ್‌ಪ್ಲಸ್ ನಾರ್ಡ್ 4 ಫೋನ್ 8GB RAM + 128GB ವೇರಿಯಂಟ್ ಬೆಲೆ 29,999ರೂ
ಒನ್‌ಪ್ಲಸ್ ನಾರ್ಡ್ 4 ಫೋನ್ 8GB RAM + 256GB ವೇರಿಯಂಟ್ ಬೆಲೆ 32,999ರೂ
ಒನ್‌ಪ್ಲಸ್ ನಾರ್ಡ್ 4 ಫೋನ್ 12GB RAM + 256GB ವೇರಿಯಂಟ್ ಬೆಲೆ 35,999ರೂ
ಭಾರತದಲ್ಲಿ ಒನ್‌ಪ್ಲಸ್ ನಾರ್ಡ್ 4 ಫೋನ್ ಇದೇ ಜುಲೈ 20 ರಿಂದ ಪ್ರೀ-ಆರ್ಡರ್‌ಗೆ ಲಭ್ಯ ಆಗಲಿದೆ. ಹಾಗೆಯೇ ಅಗಷ್ಟ್ 2 ರಂದು ಮಾರಾಟ ಪ್ರಾರಂಭ ಮಾಡಲಿದೆ.


Click it and Unblock the Notifications








