OnePlus: ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಲಾಂಚ್! 29 ನಿಮಿಷಗಳಲ್ಲೇ ಫುಲ್ ಚಾರ್ಜ್, ಬೆಲೆ ಎಷ್ಟು?
ಬಹುನಿರೀಕ್ಷಿತ ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ (OnePlus Nord CE4 smartphone) ಅನ್ನು ಕೊನೆಗೂ ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್ ಬಲ ಪಡೆದಿದೆ.
ಹೌದು, ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಅನ್ನು ಇದೀಗ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 2412 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಆಯ್ಕೆಯ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ 210Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2160Hz PWM ಮಬ್ಬಾಗಿಸುವಿಕೆ, ಹೆಚ್‌ಡಿಆರ್ 10+ ಬಣ್ಣ ಪ್ರಮಾಣೀಕರಣ ಫೀಚರ್ಸ್ ಪಡೆದಿದೆ.
ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 720 ಜಿಪಿಯು ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ. ಅಲ್ಲದೆ 8GB LPDDR4x RAM ಮತ್ತು 256GB ವರೆಗಿನ UFS 3.1 ಇಂಟರ್ ಸ್ಟೋರೇಜ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಈ ಫೋನ್ ಆಕ್ಸಿಜನ್ ಓಎಸ್ 14 ಅನ್ನು ರನ್ ಮಾಡಲಿದೆ.

ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 50 ಮೆಗಾಪಿಕ್ಸೆಲ್ ಸೋನಿ LYT600 ಪ್ರಾಥಮಿಕ ಸೆನ್ಸರ್ ಮೂಲಕ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಈ ಫೋನ್ ಹೊಂದಿದೆ.
ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ಸೂಪರ್‌ವೂಕ್ ಚಾರ್ಜರ್ ಬೆಂಬಲ ಪಡೆದುಕೊಂಡಿದೆ. ಅಂದರೆ 0-100 ಪ್ರತಿಶತದಷ್ಟು ಚಾರ್ಜ್ ಕೇವಲ 29 ನಿಮಿಷಗಳಲ್ಲಿ ಆಗಲಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ.

ಉಳಿದಂತೆ ಈ ಫೋನ್ 5G ಡ್ಯುಯಲ್ 5G ಸಿಮ್ ಕಾರ್ಡ್‌ಗಳು, ಬ್ಲೂಟೂತ್ ಆವೃತ್ತಿ 5.4, ಡ್ಯುಯಲ್-ಬ್ಯಾಂಡ್ ವೈ-ಫೈ , ಜಿಪಿಎಸ್, ಗ್ಲೋನಾಸ್, 7 5G ಬ್ಯಾಂಡ್ ಕನೆಕ್ಟಿವಿಟಿ ಆಯ್ಕೆ ಪಡೆದಿದ್ದು, ಕೆಳಭಾಗದಲ್ಲಿ ಯುಎಸ್‌ಬಿ 2.0 ಪೋರ್ಟ್, ಹೈ-ರೆಸ್ ಆಡಿಯೋಗೆ ಬೆಂಬಲದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ರಚನೆ ಪಡೆದಿದೆ. ಇದರ ಜೊತೆಗೆ ಮೇಲ್ಭಾಗದಲ್ಲಿ ಐಆರ್ ಬ್ಲಾಸ್ಟರ್ ಮತ್ತು ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಆಯ್ಕೆ ಪಡೆದಿದ್ದು, ಸ್ಪ್ಲಾಶ್ ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ಪ್ರಮಾಣೀಕರಿಸಲ್ಪಟ್ಟಿದೆ.
ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ 24,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB RAM ಮತ್ತು 256 GB ROM ವೇರಿಯಂಟ್ ಫೋನ್‌ಗೆ 26,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಡಾರ್ಕ್ ಕ್ರೋಮ್ ಮತ್ತು ಸೆಲಡಾನ್ ಮಾರ್ಬಲ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವು ಏಪ್ರಿಲ್ 4 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್, ಕ್ರೋಮ್ , ರಿಲಯನ್ಸ್ ಡಿಜಿಟಲ್, ಒನ್‌ಪ್ಲಸ್.ಇನ್, ಒನ್‌ಪ್ಲಸ್ ಆಪ್ ಸ್ಟೋರ್ ಹಾಗೂ ರಿಟೇಲರ್ ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








