Home
ಸುದ್ದಿಜಾಲ

Realme: ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಲಾಂಚ್‌! ಫೀಚರ್ಸ್‌ ಏನಿವೆ? ಬೆಲೆ ಎಷ್ಟು?

ರಿಯಲ್‌ಮಿ (Realme) ಕೊನೆಗೂ ಭಾರತದಲ್ಲಿ ಲಾಂಚ್‌ ಆಗುವ ಮುನ್ನವೇ ಭಾರೀ ಸದ್ದು ಮಾಡುತ್ತಿದ್ದ ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ (Realme Narzo N65 5G smartphone) ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಬಲ ಪಡೆದಿದೆ.

ಹೌದು, ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, IP54 ರೇಟಿಂಗ್ ಅನ್ನು ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿದೆ?, ಭಾರತದಲ್ಲಿ ಈ ಫೋನ್‌ನ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ+ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌, 89.97 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಸೆಲ್ಫಿ ಶೂಟರ್ ಅನ್ನು ಇರಿಸಲು ಡಿಸ್ಪ್ಲೇ ಮಧ್ಯದಲ್ಲಿ ಪಂಚ್‌ ಹೋಲ್‌ ಕಟೌಟ್ ಆಯ್ಕೆ ನೀಡಲಾಗಿದೆ.

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಪ್ರೊಸೆಸೆರ್ ವಿವರ: ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5.0 ಸ್ಕಿನ್‌ನಲ್ಲಿ ರನ್‌ ಆಗಲಿದ್ದು, 6nm ಮೀಡಿಯಾಟೆಕ್‌ ಡೈಮೆನ್ಸಿಟಿ 6300 5G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಫೋನ್ ಗರಿಷ್ಠ 6GB RAM ನೊಂದಿಗೆ ಕಾಣಿಸಿಕೊಂಡಿದೆ. ಗಮನಿಸಬೇಕಾದ ವಿಷಯ ಏನೆಂದರೆ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿರುವ ಮೊದಲ ಫೋನ್‌ ಎನ್ನಲಾಗಿದೆ. ಡೈನಾಮಿಕ್ RAM ಫೀಚರ್ಸ್‌ನೊಂದಿಗೆ 12GB ಸೌಲಭ್ಯ ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 2TB ವರೆಗೆ ವಿಸ್ತರಿಸಬಹುದಾದ ಸೌಲಭ್ಯ ಇದೆ.

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಈ ಸೆನ್ಸರ್‌ಗಳು ವಿವಿಧ ಫೀಚರ್ಸ್‌ ಅನ್ನು ಪಡೆದಿದ್ದು, ಫೋಟೋಗ್ರಫಿ ಪ್ರಿಯರಿಗೆ ನೆಚ್ಚಿನ ಫೋನ್‌ ಆಗಿರಲಿದೆ.

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 15W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಜೊತೆಗೆ ಕ್ವಿಕ್‌ ಚಾರ್ಜ್‌ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಬಳಕೆದಾರರು 39.4 ಗಂಟೆಗಳ ಕಾಲ ಕರೆ ಸಮಯವನ್ನು ಮತ್ತು 28 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಪಡೆಯಬಹುದಾಗಿದೆ.

ಉಳಿದಂತೆ ಈ ಫೋನ್ ಮಿನಿ ಕ್ಯಾಪ್ಸುಲ್ 2.0 ಫೀಚರ್ಸ್‌ ಆಯ್ಕೆ ಪಡೆದಿದ್ದು, ಪಂಚ್ ಹೋಲ್‌ ಕಟೌಟ್ ಸುತ್ತಲೂ ಚಾರ್ಜಿಂಗ್ ಸ್ಟೇಟಸ್ ಮತ್ತು ಇತರ ಪ್ರಮುಖ ಎಚ್ಚರಿಕೆಗಳನ್ನು ನೀಡುತ್ತದೆ. ಹಾಗೆಯೇ 5G, ವೈ-ಫೈ ಮತ್ತು ಬ್ಲೂಟೂತ್ ಅನ್ನು ಒಳಗೊಂಡಿದ್ದು, ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಒದ್ದೆಯಾದ ಕೈಗಳಿಂದ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಇದು ರೈನ್‌ ವಾಟರ್‌ ಸ್ಮಾರ್ಟ್ ಟಚ್ ಫೀಚರ್ಸ್‌ ಅನ್ನೂ ಸಹ ಕಾಣಬಹುದಾಗಿದೆ ಮತ್ತು ಈ ಫೋನ್ 190 ಗ್ರಾಂ ತೂಕ ಮತ್ತು 7.89mm ದಪ್ಪವನ್ನು ಹೊಂದಿದೆ.

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್ ನ 4GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 11,499 ರೂ.ಗಳು ಹಾಗೂ 6GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 12,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ ಈ ಫೋನ್ ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಅಮೆಜಾನ್ ಮತ್ತು ರಿಯಲ್‌ಮಿ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.

ಈ ಫೋನ್‌ನ ಮೊದಲ ಸೇಲ್‌ ಮೇ 31 ರಂದು ಮಧ್ಯಾಹ್ನ 12 ಗಂಟೆಗೆ ಆರಂಭ ಆಗಲಿದ್ದು,ಪರಿಚಯಾತ್ಮಕ ಕೊಡುಗೆಯಾಗಿ, ರಿಯಲ್‌ಮಿಯ ಈ ಫೋನ್‌ ಖರೀದಿದಾರರಿಗೆ 1,000 ಕೂಪನ್ ರಿಯಾಯಿತಿ ನೀಡಲಿದೆ. ಇದರಿಂದಾಗಿ ಮೂಲ ವೇರಿಯಂಟ್‌ ಅನ್ನು 10,499 ರೂ.ಗಳ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Realme has launched the Narzo N65 5G smartphone, which is powered by a 5,000mAh battery with an IP54 rating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+