ಭಾರತದಲ್ಲಿ ರಿಯಲ್‌ ಮಿ ‍X2 ಪ್ರೊ ಬಿಡುಗಡೆ!..ಥಂಡಾ ಹೊಡೆದ ಶಿಯೋಮಿ!


ದೇಶದ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಇಂದು ಭಾರತದಲ್ಲಿ ಅಧಕೃತವಾಗಿ ಬಿಡುಗಡೆ ಆಗಿದೆ. ಫ್ಲ್ಯಾಗ್‌ಶಿಫ್ ಮಾದರಿಯಲ್ಲಿ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 64ಎಂಪಿ ಕ್ಯಾಮೆರಾ, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌, ಫಾಸ್ಟ್‌ ಚಾರ್ಜರ್‌, ಫೀಚರ್ಸ್‌ಗಳಿಂದ ಹೆಚ್ಚು ಆಕರ್ಷಕವಾಗಿದ್ದು, ಈ ಮೂಲಕ ಶಿಯೋಮಿಯ ಇತ್ತೀಚಿನ ಫ್ಲ್ಯಾಗ್‌ಶಿಪ್‌ ಫೋನ್‌ಗಳಿಗೆ ಚಮಕ ನೀಡಿದೆ.

Advertisement

ಹೌದು, ರಿಯಲ್‌ ಮಿ ಸಂಸ್ಥೆಯು ತನ್ನ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಇಂದು (ನವೆಂಬರ್ 20) ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ VOOC ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಸೂಪರ್‌ AMOLED ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಹಾಗೆಯೇ ಮುಖ್ಯವಾಗಿ 8GB + 128GB ಮತ್ತು 12GB + 256GB ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಆರಂಭಿಕ ಬೆಲೆಯು 29,999ರೂ.ಗಳಾಗಿದೆ.

Advertisement

ವೈಟ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಗ್ರೇಡಿಯಂಟ್ ಫಿನಿಶ್ ಡಿಸೈನ್ ಹೊಂದಿದೆ. ಹಾಗೂ 50W ಸಾಮರ್ಥ್ಯದ ಸೂಪರ್ VOOC ಫಾಸ್ಟ್‌ ಚಾರ್ಜಿಂಗ ತಂತ್ರಜ್ಞಾನದ ಸೌಲಭ್ಯವನ್ನು ಒದಗಿಸಿದೆ. ಹಾಗಾದರೇ ರಿಯಲ್‌ ಮಿ ಸಂಸ್ಥೆಯ 'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. 20:9 ಅನುಪಾತದಲ್ಲಿರುವ ಡಿಸ್‌ಪ್ಲೇಯು ಸೂಪರ್‌ AMOLED (E3) ಮಾದರಿಯನ್ನು ಪಡೆದಿದೆ. HRD 10+ ಗುಣಮಟ್ಟ ಬೆಂಬಲ ಇದ್ದು, 90Hz ರಿಫ್ರೇಶ್ ರೇಟ್ ಪಡೆದಿದೆ. ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು 91.7% ಆಗಿದೆ. ಡಿಸ್‌ಪ್ಲೇ ರಕ್ಷಣೆಗೆ ಸ್ಕ್ರೀನ್‌ಗೆ ಗೊರಿಲ್ಲಾ ಗ್ಲಾಸ್‌ ಒದಗಿಸಲಾಗಿದೆ. ಡಿಸ್‌ಪ್ಲೇ ಸುತ್ತಲೂ ಅಲ್ಯುಮಿನಿಯಮ್ ಫ್ರೇಮ್ ಹೊಂದಿದ್ದು, ಹಿಂಬದಿಯಲ್ಲಿಯೂ ಗೊರಿಲ್ಲಾ ಗ್ಲಾಸ್‌ ನೀಡಲಾಗಿದೆ.

ಪ್ರೊಸೆಸರ್‌ ಸಾಮರ್ಥ್ಯ

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಪೋರ್ಟ್‌ ನೀಡಲಾಗಿದೆ. ಹಾಗೂ ColorOS 6.1 ಬೆಂಬಲ ಸಹ ಇದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 8GB + 128GB ಮತ್ತು 12GB + 256GB ವೇರಿಯಂಟ್ ಸಾಮರ್ಥ್ಯದ ಎರಡು ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸ್ಪೆಷಲ್‌

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.5 ಅಪರ್ಚರ್ನೊಂದಿಗೆ 13ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ಸಾಮರ್ಥ್ಯದಲ್ಲಿದೆ. ಇನ್ನು ನಾಲ್ಕನೇ ಕ್ಯಾಮೆರಾವು 2ಎಂಪಿಯ ಸೆನ್ಸಾರ್‌ ಪಡೆದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಆಗಿದ್ದು, ಸೋನಿಯ IMX471 ಕ್ಯಾಮೆರಾ ಸೆನ್ಸಾರ್‌ ಪಡೆದಿದೆ.

ಬ್ಯಾಟರಿ ಪವರ್

'ರಿಯಲ್‌ ಮಿ ಎಕ್ಸ್‌2 ಪ್ರೊ' ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 50W ಸೂಪರ್ VOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಕೇವಲ 35 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಪೂರ್ಣ ಚಾರ್ಜ್ ಪಡೆದುಕೊಳ್ಳುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಪಬ್‌ಜಿ ಅಂತಹ ಗೇಮ್ಸ್‌ಗಳಿಗೆ ಅತ್ಯತ್ತಮ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಹಾಗೆಯೇ ಬ್ಲೂಟೂತ್, ವೈಫೈ, ಜಿಎಸ್‌ಪಿ, ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ.

ಬೆಲೆ ಎಷ್ಟು

ಭಾರತದಲ್ಲಿ ರಿಯಲ್‌ ಮಿ ಎಕ್ಸ್‌2 ಪ್ರೊ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. ಆರಂಭಿಕ 8GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆಯು 29,999ರೂ.ಗಳಾಗಿದ್ದು, ಹಾಗೂ 12GB + 256GB ವೇರಿಯಂಟ್‌ 33,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ. ಇದೇ ನವೆಂಬರ್ 26ರಂದು ಫ್ಲಿಪ್‌ಕಾರ್ಟ್‌ ಮತ್ತು ಕಂಪನಿಯ ತಾಣದಲ್ಲಿ ಲಭ್ಯವಾಗಲಿದೆ. ವೈಟ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆ ಇದೆ.

Best Mobiles in India

English Summary

Realme X2 Pro launched in India. It is the first truly flagship device from the company for the Indian market. to know more visit to kannada.gizbot.com