ಶಿಯೋಮಿಯ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್‌!


ಚೀನಾ ಮೂಲದ ಶಿಯೋಮಿ ಕಂಪನಿಯು ಇದೀಗ ಹೊಸದಾಗಿ ದೈತ್ಯ 'ರೆಡ್ಮಿ ಕೆ30' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸುದ್ದಿ ತಿಳಿದಿರುವುದೇ ಆಗಿದೆ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಹುಟ್ಟುಹಾಕಿರುವ 'ರೆಡ್ಮಿ ಕೆ30' ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 10 ರಂದು ಲಾಂಚ್ ಆಗುವುದು ಬಹುತೇಕ ಖಚಿತವಾಗಿದೆ. ಈ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.

Advertisement

ಹೌದು, ಶಿಯೋಮಿ ತನ್ನ ಹೊಸ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ ಅನ್ನು ಇದೇ ಡಿ.10 ರಂದು ಚೀನಾದಲ್ಲಿ ರಿಲೀಸ್‌ ಮಾಡುವುದಾಗಿ ಟೀಸ್ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸೋನಿ IMX686 ಬೆಂಬಲಿತ 64ಎಂಪಿ ಸೆನ್ಸಾರ್ ಪಡೆದ ಮೊದಲ ಕ್ಯಾಮೆರಾ ಆಗಿರಲಿದೆ ಎನ್ನಲಾಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್ ಮತ್ತು 4,500mAh ಬ್ಯಾಟರಿ ಈ ಸ್ಮಾರ್ಟ್‌ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿ ಇರಲಿವೆ ಎನ್ನುತ್ತಿವೆ ಲೀಕ್ ಮಾಹಿತಿಗಳು.

Advertisement

'ರೆಡ್ಮಿ ಕೆ30' ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಆಗಿರಲಿದೆ. ಅತ್ಯುತ್ತಮ ಇಮೇಜ್ ಸೆನ್ಸಾರ್ ಮೂಡಿಬರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಆಗಿರಲಿದ್ದು, ತೃತೀಯ ಕ್ಯಾಮೆರಾ ಸೆನ್ಸಾರ್ 8ಎಂಪಿ ಆ ಗಿರಲಿದೆ. ಕೊನೆಯ ಕ್ಯಾಮೆರಾವು 2 ಎಂಪಿ ಸೆನ್ಸಾರ್ ಪಡೆದಿರಲಿದೆ. ಹಾಗೆಯೇ ಡ್ಯುಯಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಇರಲಿದ್ದು, ಅವುಗಳು ಕ್ರಮವಾಗಿ 20ಎಂಪಿ ಮತ್ತು 2ಎಂಪಿ ಆಗಿರಲಿವೆ.

ಬರಲಿರುವ ರೆಡ್ಮಿ ಕೆ30 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.66 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಾಗೆಯೇ ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರಲಿದೆ. ಹಾಗೆಯೇ ಡಿಸ್‌ಪ್ಲೇಯಲ್ಲಿಯೇ ಎರಡು ಫ್ರಂಟ್ ಫೇಸಿಂಗ್ ಕ್ಯಾಮೆರಾ ಸೆನ್ಸಾರ್‌ಗಳನ್ನು ಸಹ ಒಳಗೊಂಡಿರಲಿದೆ. ಜೊತೆಗೆ ಸೈಡ್‌ ಮೌಂಟೆಡ್‌ ಫ್ರಿಂಗರ್‌ಪ್ರಿಂಟ್‌ ಸೆನ್ಸಾರ್ ಸಹ ಇರಲಿದೆ.

ಈ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ ಹೊಂದಿರಲಿದ್ದು, ಇದರೊಂದಿಗೆ ಅಡ್ರೆನೊ 618 ಗ್ರಾಫಿಕ್ಸ್‌ ಸಹ ಇರಲಿದೆ. ಹಾಗೆಯೇ ಈ ಫೋನ್ ಚೀನಾದಲ್ಲಿ 5G, ಹಾಗೆಯೇ ಭಾರತದಲ್ಲಿ 4G ವೇರಿಯಂಟ್‌ ಸಪೋರ್ಟ್ ಪಡೆದಿರಲಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 10 ಆಕ್ಸಿಜನ್ ಓಎಸ್‌ ಬೆಂಬಲ ಪಡೆದಿರಲಿದೆ. ಜೊತೆಗೆ ಕಂಪನಿಯ MIUI 11 ಅಪ್‌ಡೇಟ್ ಸಹ ಸೇರಿರಲಿದೆ. 6GB RAM ಮತ್ತು 8GB RAM ವೇರಿಯಂಟ್‌ ಆಯ್ಕೆಗಳು ಇರಲಿವೆ.

Best Mobiles in India

English Summary

Redmi K30 smartphone in China on December 10. The smartphone is expected to be the world’s first with the latest Sony IMX686 64MP. to know more visit to kannada.gizbot.com