ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್!
ಪ್ರಸ್ತುತ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ವಾತಾವರಣ ಇದ್ದು, ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಕೊಡುಗೆಗಳನ್ನು ನೀಡುತ್ತ ಸಾಗಿವೆ. ಕೆಲವು ಕಂಪನಿಗಳು ಬಜೆಟ್ ಪ್ರೈಸ್ನಲ್ಲಿ ಆಕರ್ಷಕ ಫೀಚರ್ಸ್ಗಳಿರುವ ಫೋನ್ ಪರಿಚಯಿಸುತ್ತ ಮುನ್ನಡೆದಿವೆ. ಆದರೆ ಕೆಲವು ಬ್ರ್ಯಾಂಡ್ಗಳ ಸ್ಮಾರ್ಟ್ಫೋನ್ಗಳು ಮಾತ್ರ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ. ಆ ಪೈಕಿ ಇತ್ತೀಚಿಗೆ ರೆಡ್ಮಿ ನೋಟ್ 11 ಫೋನ್ ಗ್ರಾಹಕರನ್ನು ಆಕರ್ಷಿಸಿದ್ದು, ಆದ್ರೆ ದಿಢೀರ್ ಇದೀಗ ಗ್ರಾಹಕರಿಗೆ ಶಾಕ್ ನೀಡಿದೆ.

ಹೌದು, ಶಿಯೋಮಿ ಕಂಪನಿಯ ಇತ್ತೀಚಿನ ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಬೆಲೆಯಲ್ಲಿ ಈಗ 500ರೂ.ಗಳ ಏರಿಕೆ ಆಗಿದೆ. ಈ ಫೋನ್ 4GB + 64GB, 6GB + 64GB ಮತ್ತು 6GB + 128 GB ಸ್ಟೋರೇಜ್ನ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಆದರೆ 4GB + 64GB ಸ್ಟೋರೇಜ್ನ ಬೇಸ್ ವೇರಿಯಂಟ್ ಬೆಲೆಯಲ್ಲಿ ಮಾತ್ರ 500ರೂ.ಗಳ ಏರಿಕೆ ಆಗಿದೆ. ಉಳಿದಂತೆ 6GB + 64 GB ಮತ್ತು 6GB + 128 GB ವೇರಿಯಂಟ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಬೆಲೆ ಏರಿಕೆ ಬಳಿಕ ಬೇಸ್ ವೇರಿಯಂಟ್ ಫೋನ್ ದರವು 13,499ರೂ. ಆಗಿದೆ. ಹಾಗಾದರೆ ರೆಡ್ಮಿ ನೋಟ್ 11 ಫೋನಿನ ಫೀಚರ್ಸ್ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್ಪ್ಲೇ ರಚನೆ ಮತ್ತು ವಿನ್ಯಾಸ
ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್ಡಿ + AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 20:9 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 680 ಪ್ರೊಸೆಸರ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 4GB + 64 GB, 6GB + 64 GB ಮತ್ತು 6GB + 128 GB ಸ್ಟೋರೇಜ್ನ ವೇರಿಯಂಟ್ ಆಯ್ಕೆಗಳನ್ನು ಆಗಿವೆ.

ಕ್ಯಾಮೆರಾ ಮತ್ತು ಬ್ಯಾಟರಿ ಬ್ಯಾಕ್ಅಪ್
ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾ ಸಹ 2 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆಯನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ. ಇದರೊಂದಿಗೆ ಈ ಫೋನ್ 5,000 mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಬೆಲೆ ಎಷ್ಟು?
ರೆಡ್ಮಿ ನೋಟ್ 11 ಸ್ಮಾರ್ಟ್ಫೋನ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಫೋನಿನ 4GB + 64 GB ಸ್ಟೋರೇಜ್ ಬೇಸ್ ವೇರಿಯಂಟ್ ಬೆಲೆಯು 13,999 ರೂ. ಆಗಿದೆ. (ಬೆಲೆ ಏರಿಕೆಯ ಮೊದಲು 13,499 ರೂ. ಆಗಿತ್ತು). ಹಾಗೆಯೇ 6GB + 64 GB ಸ್ಟೋರೇಜ್ನ ವೇರಿಯಂಟ್ ಬೆಲೆಯು 14,499 ರೂ. ದರ ಹೊಂದಿದೆ. ಇನ್ನು 6GB + 128 GB ಸ್ಟೋರೇಜ್ನ ಹೈ ಎಂಡ್ ವೇರಿಯಂಟ್ ಬೆಲೆಯು 15,999 ರೂ. ಗಳು ಆಗಿದೆ.


Click it and Unblock the Notifications