Jio: UPI ಪೇಮೆಂಟ್‌ಗೆ ಜಿಯೋ ಎಂಟ್ರಿ!..ಬೆಚ್ಚಿದ ಗೂಗಲ್ ಪೇ ಮತ್ತು ಫೋನ್ ಪೇ!


ದೇಶದ ಖಾಸಗಿ ಟೆಲಿಕಾಂ ವಲಯದಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ ರಿಲಾಯನ್ಸ್‌ ಜಿಯೋ ಸಂಸ್ಥೆಯು ಇದೀಗ ತನ್ನ ಗ್ರಾಹಕರಿಗೆ ಹೊಸದಾಗಿ UPI ಪೇಮೆಂಟ್ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಜಿಯೋ, ಸದ್ಯ ಅತೀ ಹೆಚ್ಚು ಬಳಕೆಯಲ್ಲಿರುವ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಮ್ ಅಪ್ಲಿಕೇಶನ್‌ಗಳಿಗೆ ನೇರವಾಗಿ ಪೈಫೋಟಿ ನೀಡಲು ಸಜ್ಜಾಗಿದೆ.

Advertisement

ಹೌದು, ಒಟ್ಟು 370 ಮಿಲಿಯನ್ ಚಂದಾದಾರರನ್ನು ಹೊಂದಿರುವ ಜಿಯೋ ಸಂಸ್ಥೆಯು ಈಗ ಡಿಜಿಟಲ್ ಪೇಮೆಂಟ್ ಸೇವೆ ಶುರುಮಾಡಿದೆ. ಸದ್ಯ ಮೈ ಜಿಯೋ ಆಪ್‌ ನಲ್ಲಿ UPI ಪೇಮೆಂಟ್ ಆಯ್ಕೆಯನ್ನು ಸೇರಿಸಿದ್ದು, ಮುಂದಿನ ದಿನಗಳಲ್ಲಿ UPI ಪೇಮೆಂಟ್‌ಗಾಗಿಯೇ ಪ್ರತ್ಯೇಕ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಜಿಯೋದ ಹೊಸ UPI ಪೇಮೆಂಟ್ ಸೇವೆ ಬಳಕೆ ಹೇಗೆ ಮತ್ತು ಇನ್ನಷ್ಟು ಕುತೂಹಲಕಾರಿ ಮಾಹಿತಿಗಳನ್ನು ಮುಂದೆ ನೋಡೋಣ.

Advertisement
ಜಿಯೋ UPI ಪೇಮೆಂಟ್

ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜಿಯೋ ಒಟ್ಟು 370 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಈ ಮೂಲಕ ಏರ್‌ಟೆಲ್, ವೊಡಾಫೋನ್‌ ಟೆಲಿಕಾಂಗಳನ್ನು ಹಿಂದಿಕ್ಕಿದೆ. ಇದೀಗ ಜಿಯೋ ಮೈ ಜಿಯೋ ಆಪ್‌ನಲ್ಲಿ ಯುಪಿಐ ಪೇಮೆಂಟ್‌ ಸೇವೆಯನ್ನು ಮೊದಲ ಹಂತದಲ್ಲಿ ಪ್ರಾರಂಭಿಸಿದ್ದು, ಇಲ್ಲಿಯು ತನ್ನ ಪ್ರಾಬಲ್ಯ ಸ್ಥಾಪಿಸುವ ಲಕ್ಷಣಗಳನ್ನು ಹೊರಹಾಕಿದೆ.

ಪ್ರತ್ಯೇಕ ಅಪ್ಲಿಕೇಶನ್

ಜಿಯೋ ಆರಂಭಿಕ ಹಂತವಾಗಿ UPI ಪೇಮೆಂಟ್ ಸೇವೆಯನ್ನು ತನ್ನ ಮೈ ಜಿಯೋ ಆಪ್‌ನಲ್ಲಿ ಪರಿಚಯಿಸಿದೆ. ಹೀಗಾಗಿ ಸದ್ಯ ಜಿಯೋ ಚಂದಾದಾರರಿಗೆ ಮಾತ್ರ ಜಿಯೋ ಯುಪಿಐ ಪೇಮೆಂಟ್ ಸೇವೆಯು ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಯುಪಿಐ ಪೇಮೆಂಟ್‌ಗಾಗಿಯೇ ಗೂಗಲ್ ಪೇ, ಫೋನ್ ಪೇ ರೀತಿಯಲ್ಲಿ ಜಿಯೋ ಸಹ ಪ್ರತ್ಯೇಕ ಅಪ್ಲಿಕೇಶನ್ ಲಾಂಚ್ ಮಾಡಲಿದೆ ಯೋಜನೆ ಇದೆ ಎನ್ನಲಾಗಿದೆ.

ಪೈಪೋಟಿ ಹೆಚ್ಚಾಗಲಿದೆ

ಯುಪಿಐ ಪೇಮೆಂಟ್‌ ವಲಯಕ್ಕೆ ಜಿಯೋ ಟೆಲಿಕಾಂ ಎಂಟ್ರಿಯು ಗೂಗಲ್ ಪೇ, ಫೋನ್ ಪೇ ಗಳೊಂದಿಗೆ ಪೈಫೋಟಿ ಸೃಷ್ಠಿಸಲಿದೆ. ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಗೂಗಲ್ ಪೇ ಮತ್ತು ಫೋನ್‌ಪೇ ಗಳಿಗೆ ಜಿಯೋ ಆಗಮನ ತ್ರಾಸದಾಯಕ ಅನಿಸುವ ಸಾಧ್ಯತೆಗಳಿವೆ. ಏಕೆಂದರೇ ಜಿಯೋ ಟೆಲಿಕಾಂ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಅವರು ಜಿಯೋದ ಹೊಸ ಯುಪಿಐ ಪೇಮೆಂಟ್ ಆಪ್ ಬಳಕೆಗೆ ಮುಂದಾಗಬಹುದು.

ಯುಪಿಐ ಐಡಿ ರಚನೆ

ಬಳಕೆದಾರರು ಮೈ ಜಿಯೋ ಅಪ್ಲಿಕೇಶನ್‌ನಲ್ಲಿನ ಸರ್ಚ್ ಬಾರ್‌ನ ಕೆಳಗೆ ಯುಪಿಐ ಆಯ್ಕೆಯನ್ನು ಕಾಣಬಹುದಾಗಿದೆ. ಈ ಸೇವೆಗೆ ಬಳಕೆದಾರರು ಸೈನ್ ಅಪ್ ಪ್ರಕ್ರಿಯೆಯು ಪೂರ್ಣಗೊಳಿಸಿದ ನಂತರ ಯುಪಿಐ ಐಡಿ/ವಿಳಾಸ ವರ್ಚುವಲ್ ಪಾವತಿ ವಿಳಾಸ (virtual payment address-VPA) ರಚಿತವಾಗುತ್ತದೆ. ಆ ನಂತರದ ಹಂತಗಳಲ್ಲಿ ಬಳಕೆದಾರರ ಬ್ಯಾಂಕ್ ಖಾತೆ ಯುಪಿಐಗೆ ಲಿಂಕ್ ಮಾಡಲು ಮೊಬೈಲ್ ನಂಬರ್, ಬ್ಯಾಂಕ್ ಖಾತೆಯ ನಂಬರ್ ನಮೂದಿಸಬೇಕಾಗುತ್ತದೆ. ನಂತರ ಬಳಕೆದಾರರು ಯುಪಿಐ ಪಿನ್ ರಚಿಸಿಕೊಳ್ಳಬೇಕು.

ಪೇಮೆಂಟ್ ಸೇವೆ

ಯುಪಿಐ ಐಡಿಗಳು yourmobilenumber@jio ಅಥವಾ yourname@jio ಮಾದರಿಯಲ್ಲಿ ರಚಿತವಾಗಿರುತ್ತವೆ. ಯುಪಿಐ ಐಡಿ ರಚಿತವಾದ ನಂತರ ಬಳಕೆದಾರರು ಹಣ/ಪೇಮೆಂಟ್ ಸ್ವೀಕರಿಸುವ ಮತ್ತು ಕಳುಹಿಸುವ ಸೇವೆಗಳು ಚಾಲ್ತಿ ಆಗಲಿವೆ.

Best Mobiles in India

English Summary

UPI payments in MyJio app will trigger competition among existing players like PhonePe, Google Pay, and Paytm. to know more visit to kannada.gizbot.com