ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 10 ಲೈಟ್ ಬಿಡುಗಡೆ: ಬೆಲೆ ಎಷ್ಟು?


ಜನಪ್ರಯ ಸ್ಯಾಮ್‌ಸಂಗ್ ಸಂಸ್ಥೆಯ ಬಹುನಿರೀಕ್ಷಿತ 'ಗ್ಯಾಲಕ್ಸಿ ನೋಟ್‌ 10 ಲೈಟ್' ಸ್ಮಾರ್ಟ್‌ಫೋನ್ ಇಂದು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿಗೆ ಲಾಸ್ ವೇಗಸ್‌ನಲ್ಲಿ ನಡೆದ ಕನ್ಸೂಮರ್‌ ಎಲೆಕ್ಟ್ರಾನಿಕ್ಸ್ ಕಾರ್ಯಕ್ರಮ 2020ರಲ್ಲಿ ಪ್ರದರ್ಶನ ಗೊಂಡಿತ್ತು. ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿರುವ 'ಗ್ಯಾಲಕ್ಸಿ ನೋಟ್‌ 10 ಲೈಟ್' ಫೋನ್‌ 'ಒನ್‌ಪ್ಲಸ್‌ 7T' ಫೋನಿಗೆ ನೇರ ಸ್ಪರ್ಧಿ ಎಂದೇ ಬಿಂಬಿತವಾಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಇಂದು(ಜ.21) ದೇಶಿಯ ಮಾರುಕಟ್ಟೆಗೆ ಹೊಸ 'ಗ್ಯಾಲಕ್ಸಿ ನೋಟ್‌ 10 ಲೈಟ್‌' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 8GB RAM ಆಯ್ಕೆ ಹೊಂದಿದ್ದು, Exynos 9810 ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಒಳಗೊಂಡಿದೆ. ಆರೋ ಗ್ಲೋ, ಆರೋ ಬ್ಲ್ಯಾಕ್ ಮತ್ತು ಆರೋ ರೆಡ್‌ ಬಣ್ಣಗಳ ಆಯ್ಕೆ ಪಡೆದಿರುವ ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಸೌಲಭ್ಯ ಹೊಂದಿದೆ.

ಈಗಾಗಲೆ ಗ್ಯಾಲಕ್ಸಿ ನೋಟ್‌ 10 ಲೈಟ್‌ ಫೋನಿನ ಪ್ರಿ-ಆರ್ಡರ್ ಶುರುವಾಗಿದೆ. ಇದೇ ಫೆಬ್ರುವರಿ 3 ರಂದು ಕಂಪನಿಯ ಅಧಿಕೃತ ವೆಬ್‌ತಾಣದಲ್ಲಿ ಹಾಗೂ ಆನ್‌ಲೈನ್‌ ತಾಣಗಳಲ್ಲಿ ಮೊದಲ ಸೇಲ್ ಆರಂಭವಾಗಲಿದೆ. ಇದರೊಂದಿಗೆ ಪ್ರಮುಖ ಆಫ್‌ಲೈನ್ ಶಾಪ್‌ಗಳಲ್ಲಿ ಸಹ ಖರೀದಿಗೆ ಲಭ್ಯವಾಗಲಿದೆ. ಆರಂಭಿಕ ಬೆಲೆಯು 38,999ರೂ. ಆಗಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ಮತ್ತು ಡಿಸೈನ್

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದ್ದು, ಡಿಸ್‌ಪ್ಲೇಯು ಎಡ್ಜ್ ಡು ಎಡ್ಜ್ ಇನ್‌ಫಿನಿಟಿ O ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 394ppi ಆಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.88.3%ಆಗಿದೆ. ಇನ್ನು ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‌ 6 ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ ಕಂಪನಿಯ Exynos 9810 ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ. ಇನ್ನು ಈ ಫೋನ್ 6GB RAM ಮತ್ತು 8GB RAM ಆಯ್ಕೆಯನ್ನು ಹೊಂದಿದ್ದು, 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಎಸ್‌ಡಿ ಕಾರ್ಡ್‌ ಬಳಸಿ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.

ಸ್ಪೆಷಲ್ ಕ್ಯಾಮೆರಾ

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಅಲ್ಟ್ರಾ ವೈಲ್ಡ್‌ ಲೆನ್ಸ್ ಬೆಂಬಲದೊಂದಿಗೆ 12ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. OIS ಸೇರಿದಂತೆ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಪಡೆದಿದೆ.

ಬ್ಯಾಟರಿ ಲೈಫ್

ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಗ್ಯಾಲಾಕ್ಸಿ ನೋಟ್ ಸರಣಿ ಫೋನ್‌ಗಳಂತೆ ಈ ಫೋನಿಗೂ S ಪೆನ್ ಸೌಲಭ್ಯವನ್ನು ನೀಡಲಾಗಿದ್ದು, ಈ ಎಸ್‌ ಪೆನ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ. ಸುಲಭವಾಗಿ ಮ್ಯೂಸಿಕ್, ವಿಡಿಯೊ, ಕ್ಯಾಮೆರಾ ನಿಯಂತ್ರಿಸಬಹುದಾಗಿದೆ. ಈ ಪೆನ್ ಆಯ್ಕೆ ಬಳಸಿ ನ್ಯಾವಿಗೇಶನ್ ಸಹ ಮ್ಯಾನೇಜ್ ಮಾಡಬಹುದು.

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 10 ಲೈಟ್‌ ಸ್ಮಾರ್ಟ್‌ಫೋನಿನ ಆರಂಭಿಕ 6GB RAM ವೇರಿಯಂಟ್ ಬೆಲೆಯು 38,999ರೂ.ಆಗಿದೆ. ಹಾಗೆಯೇ 8GB RAM ವೇರಿಯಂಟ್ ಬೆಲೆಯು 40,999ರೂ.ಗಳಾಗಿದೆ. ಇನ್ನು ಈ ಫೋನ್ ಆರೋ ಗ್ಲೋ, ಆರೋ ಬ್ಲ್ಯಾಕ್ ಮತ್ತು ಆರೋ ರೆಡ್‌ ಬಣ್ಣಗಳ ಆಯ್ಕೆ ಲಭ್ಯ ಇದ್ದು, ಇದೇ ಫೆಬ್ರುವರಿ 3 ರಂದು ಮಾರಾಟ ಆರಂಭಿಸಲಿದೆ.

Most Read Articles
Best Mobiles in India
Read More About: samsung galaxy s10 Launch

Have a great day!
Read more...

English Summary

Samsung has finally launched its latest smartphone, the Galaxy Note 10 Lite in India. to know more visit to kannada.gizbot.com