ಅತ್ಯುತ್ತಮ ಕ್ಯಾಮೆರಾ ಇರುವ ಈ Google ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಗೂಗಲ್ ಕಂಪನಿಯು ಭಿನ್ನ ಶ್ರೇಣಿ ಮೊಬೈಲ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸಂಸ್ಥೆಯ ಗೂಗಲ್ ಪಿಕ್ಸಲ್ ಸರಣಿಯ ಫೋನ್‌ಗಳು ಹೈ ಎಂಡ್ ಮಾದರಿಯಲ್ಲಿ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಸಂಸ್ಥೆಯು ಇದೀಗ ಗೂಗಲ್ ಪಿಕ್ಸಲ್ 7a (Google Pixel 7a) ಫೋನ್ ಆಕರ್ಷಕ ಫೀಚರ್ಸ್ ಜೊತೆಗೆ ಈ ಸ್ಮಾರ್ಟ್‌ಫೋನಿನ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸೆಟ್‌ಅಪ್ ಅನ್ನು ಹೊಂದಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಗೂಗಲ್ ಸಂಸ್ಥೆಯ ಗೂಗಲ್ ಪಿಕ್ಸಲ್ 7a (Google Pixel 7a) ಮೊಬೈಲ್ ಬಿಗ್ ಡಿಸ್ಕೌಂಟ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನಿನ 128GB ಸ್ಟೋರೇಜ್‌ನ ವೇರಿಯಂಟ್ ಶೇ. 29% ರಷ್ಟು ಡಿಸ್ಕೌಂಟ್ ಪಡೆದಿದೆ. ಇದನ್ನು ಗ್ರಾಹಕರು 30,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿರುವುದಾಗಿ ಖಚಿತಪಡಿಸಿದೆ.

ಅಂದಹಾಗೆ ಗೂಗಲ್ ಪಿಕ್ಸಲ್ 7a ಮೊಬೈಲ್ ಟೆನ್ಸರ್ G2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿದ್ದು, 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಗೂಗಲ್ ಪಿಕ್ಸಲ್ 7a (Google Pixel 7a) ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ
ಗೂಗಲ್ ಪಿಕ್ಸಲ್ 7a ಮೊಬೈಲ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಫುಲ್ ಹೆಚ್‌ಡಿ+ ರೆಸಲ್ಯೂಶನ್‌ಗೆ ಸಪೋರ್ಟ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, ಪಿಕ್ಸಲ್ 6a ನಲ್ಲಿ ಇದ್ದ 60Hz ರಿಫ್ರೆಶ್ ರೇಟ್‌ಗಿಂತ ಅಧಿಕ ಅಪ್‌ಗ್ರೇಡ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾಗಾಗಿ ಮುಂಭಾಗದಲ್ಲಿ ಸಾಮಾನ್ಯ ಪಂಚ್-ಹೋಲ್ ವಿನ್ಯಾಸದ ಆಯ್ಕೆ ಪಡೆದುಕೊಂಡಿದೆ.
ವೇಗದ ಪ್ರೊಸೆಸರ್ ಸಾಮರ್ಥ್ಯ
ಗೂಗಲ್ ಪಿಕ್ಸಲ್ 7a ಫೋನ್ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದರ ಜೊತೆಗೆ 5G ಫೋನ್ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಹೊಂದಿದೆ. ಇದರೊಂದಿಗೆ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಬೆಂಬಲ ಸಹ ಪಡೆದಿದೆ. ಇದರೊಂದಿಗೆ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಪಡೆದುಕೊಂಡಿದೆ.
ಕ್ಯಾಮೆರಾ ಸೆನ್ಸಾರ್ ಹೀಗಿದೆ
ಗೂಗಲ್ ಪಿಕ್ಸಲ್ 7a ಫೋನ್ 64 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಇದರ ಜೊತೆಗೆ 13 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್ ಸಹ ಪಡೆದುಕೊಂಡಿದೆ. ಇದಲ್ಲದೇ ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ. ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಕೆಲವು ಆಕರ್ಷಕ ಆಯ್ಕೆಗಳನ್ನು ಈ ಫೋನ್ ಪಡೆದುಕೊಂಡಿದೆ.
ಬ್ಯಾಟರಿ ಹಾಗೂ ಇತರೆ ಮಾಹಿತಿ
ಗೂಗಲ್ ಪಿಕ್ಸಲ್ 7a ಫೋನ್ 4,410mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಇದರ ಜೊತೆಗೆ ವಾಯರ್‌ಲೆಸ್ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್ ಸೌಲಭ್ಯ ಕೂಡಾ ಇದ್ದು, ವಾಟರ್ ರೆಸಿಸ್ಟನ್ಸ್‌ಗಾಗಿ IP67 ರೇಟಿಂಗ್ ಆಯ್ಕೆ ಪಡೆದಿದೆ. ಇದಲ್ಲದೇ ಈ ಫೋನ್ ಚಾರ್ಕೋಲ್, ಕೋರಲ್, ಸೀ ಹಾಗೂ ಸ್ನೋ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ.


Click it and Unblock the Notifications








