ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರು ಓದಲೇ ಬೇಕಾದ ಸ್ಟೋರಿ!


ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಬಳಕೆದಾರರೇ ಇಲ್ಲಿ ಗಮನಿಸಿ. ನೀವು ಇನ್ಮುಂದೆ ನಿಮ್ಮ ಗುರುತಿನ ದೃಢೀಕರಣ ಇಲ್ಲದೇ ಈ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಲು ಆಗುವುದಿಲ್ಲ. ಏಕೆಂದರೇ ಕೇಂದ್ರ IT ಸಚಿವಾಲಯವು (IT ministry) ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಪ್ರತಿ ಬಳಕೆದಾರರು ಗುರುತಿನ ದೃಢೀಕರಣ ಮಾಡುವುದನ್ನು ಕಡ್ಡಾಯ ಮಾಡಲಿದೆ.

ಹೌದು, ಸದ್ಯ ಸಾಮಾಜಿಕ ಜಾಲತಾಣಗಳು ಮಾಹಿತಿ ಹರಡಲು ಪ್ರಬಲ ಪ್ಲಾಟ್‌ಫಾರ್ಮ್‌ಗಳಾಗಿವೆ. ನಕಲಿ ಖಾತೆಗಳನ್ನು ಸೃಷ್ಠಿಸಿ, ನಕಲಿ ಸುದ್ದಿಗಳನ್ನು ಹರಿಬಿಡುವ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಇಂತಹ ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಐಟಿ ಸಚಿವಾಲಯವು ಸಾಮಾಜಿಕ ಜಾಲತಾಣಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗಿದೆ. ಸದ್ಯದಲ್ಲಿಯೇ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ (identity verification rule) ಗುರುತನ್ನು ದೃಢೀಕರಣ ಮಾಡುವುದು ನಿಯಮ ಜಾರಿ ಆಗಲಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಜನಾಂಗೀಯ ಕೆಸರೆರಚಾಟ, ಪ್ರಚೋದನಕಾರಿ ಘೋಷಣೆಗಳು, ತಪ್ಪು ಮಾಹಿತಿ, ದುರುದ್ದೇಶಪೂರಿತ ವಿಷಯ ಮತ್ತು ಲಿಂಗ ನಿಂದನೆ ಸೇರಿದಂತೆ ಅಹಿತಕರ ವಿಷಯಗಳ ನಕಲಿ ಸುದ್ದಿ ಹರಡುವ ಘಟನೆಗಳು ಅಧಿಕವಾಗಿ ನಡೆಯುತ್ತಿವೆ. ಇಂತಹ ಘಟನೆಗಳಿಗೆ ತಡೆಯಲು ಐಟಿ ಸಚಿವಾಲಯ ಹೊಸ ನಿಯಮ ಜಾರಿ ಮಾಡಲು ತಯಾರಿ ನಡೆಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಗುರುತಿನ ದೃಢೀಕರಣವಾದರೆ, ನಕಲಿ ಸುದ್ದಿಗಳನ್ನು ನಿಯಂತ್ರಿಸಬಹುದು ಮತ್ತು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿರುತ್ತದೆ. ಇದರಿಂದ ನಕಲಿ ಸೋಶಯಲ್ ಜಾಲತಾಣಗಳ ಖಾತೆಗಳಿಗೆ ಬೀಗ ಬೀಳುತ್ತೆ ಹಾಗೂ ನಕಲಿ ಸುದ್ದಿಯ ಮೂಲ, ಎಷ್ಟು ಶೇರ್ ಆಗಿದೆ ಬಳಕೆದಾರರು ಯಾರು ಎಂಬ ಮಾಹಿತಿಗಳು ಲಭ್ಯವಾಗಲಿದೆ.

ಇನ್ನು ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ ತಾಣಗಳ ಉದ್ದೇಶತ 'ವೈಯಕ್ತಿಕ ಖಾಸಗಿ ಮಾಹಿತಿ ರಕ್ಷಣೆಯ ಮಸೂದೆ ಸಹ ಸದ್ಯದಲ್ಲಿಯೇ ಜಾರಿ ಆಗಲಿದೆ ಎನ್ನಲಾಗಿದೆ. ಈ ಆಪ್ಸ್‌ಗಳಲ್ಲಿ ಬಳಕೆದಾರರೇ ತಮ್ಮ ಗುರುತಿನ ದೃಢೀಕರಣ (voluntary verification) ಮಾಡುವ ಆಯ್ಕೆ ಸೇರಲಿದೆ. ಹಾಗೆಯೇ significant data fiduciary ನಿಯಮ ಜಾರಿಯ ಮಾತು ಮುನ್ನೆಲೆಗೆ ಬಂದಿದ್ದು, ಈ ನಿಯಮದಲ್ಲಿ ಬಳಕೆದಾರರು ಹೊಂದಿರುವ ವೈಯಕ್ತಿಕ ಖಾಸಗಿ ಮಾಹಿತಿಯನ್ನು ಆಧರಿಸಿರುತ್ತದೆ. ಒಂದು ಸಣ್ಣ ತಪ್ಪು ಮಾಹಿತಿಯು ಸಹ ಹರಡದಂತೆ ನಿಗಾ ಇಡಬಹುದಾಗಿದೆ ಎನ್ನಲಾಗಿದೆ.

Most Read Articles
Best Mobiles in India
Read More About: tiktok whatsapp facebook news

Have a great day!
Read more...

English Summary

Users of various social media platforms may soon have to be verified to prevent the spread of fake news and misinformation. to know more visit to kannada.gizbot.com