ಶಿಯೋಮಿ ಫೋನ್‌ ಬ್ಯಾಟರಿ ಫುಲ್‌ ಆಗಲು ಇನ್ನು ಹೆಚ್ಚು ಸಮಯ ಬೇಕಾಗಲ್ಲ!


ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಯೇ ಮುಖ್ಯ ಜೀವಾಳ ಎನಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗುತ್ತಿದೆ. ಹಾಗೂ ಅದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸುತ್ತಿವೆ. ಸ್ಯಾಮ್‌ಸಂಗ್ ಸಂಸ್ಥೆ ಸೇರಿದಂತೆ ಚೀನಾ ಮೂಲದ ಶಿಯೋಮಿ, ವಿವೋ, ಒಪ್ಪೊ ಮತ್ತು ರಿಯಲ್‌ ಮಿ ಸಹ ಹೊಸ ಫಾಸ್ಟ್‌ ಚಾರ್ಜಿಂಗ್ ಟೆಕ್ನಾಲಜಿ ಪರಿಚಯಿಸಿವೆ. ಆದ್ರೆ ಶಿಯೋಮಿ ಈಗ ಗ್ರಾಹಕರು ಹುಬ್ಬೆರಿಸುವಂತ ಸುದ್ದಿ ನೀಡಿದೆ.

Advertisement

ಹೌದು, ಶಿಯೋಮಿ ಸಂಸ್ಥೆಯು ತನ್ನ ಬಹುನಿರೀಕ್ಷಿತ '100W ಸಾಮರ್ಥ್ಯ ಸೂಪರ್ ಫಾಸ್ಟ್‌ ಚಾರ್ಜ್ ಟರ್ಬೋ ತಂತ್ರಜ್ಞಾನ'ವನ್ನು ಚೀನಾದಲ್ಲಿ ನಡೆದ ಶಿಯೋಮಿ ಡೆವಲಪರ್ಸ್‌ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ತಂತ್ರಜ್ಞಾನವು 4,000mAh ಸಾಮರ್ಥ್ಯ ಫೋನ್ ಬ್ಯಾಟರಿಯನ್ನು ಕೇವಲ 17 ನಿಮಿಷದಲ್ಲಿಯೇ ಪೂರ್ಣ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ.

Advertisement

ಶಿಯೋಮಿಯು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗದ ಚಾರ್ಜರ್ ಒದಗಿಸುವ ಗುರಿಯನ್ನು ಹೊಂದಿದ್ದು, ಅದಕ್ಕಾಗಿ 100W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಅನಾವರಣ ಮಾಡಿದೆ. ಈ ತಂತ್ರಜ್ಞಾನವು ಒಟ್ಟು 9 ಫೋಲ್ಡ್‌ ಲೇಯರ್‌ ಚಾರ್ಜ್ ಪ್ರೊಟೆಕ್ಷನ್ ಅನ್ನು ಪಡೆದಿದ್ದು, ಜೊತೆಗೆ ಹೈ ವೊಲ್ಟೇಜ್‌ ಪಂಪ್‌ಗಳನ್ನು ಒಳಗೊಂಡಿರಲಿದೆ. ಮೊಬೈಲ್ ಚಾರ್ಜಿಂಗ್ ವಯಲದಲ್ಲಿ ಹೊಸ ರೂಪ ಇದಾಗಲಿದೆ. ಬಹುಶಃ ಮುಂಬರುವ ಫ್ಲ್ಯಾಗ್‌ಶಿಫ್‌ ಫೋನುಗಳಿಗೆ ಈ ಚಾರ್ಜಿಂಗ್ ತಂತ್ರಜ್ಞಾನ ಒದಗಿಸುವ ಸಾಧ್ಯತೆ ಇದೆ.

ಹಾಗೆಯೇ ಇತ್ತೀಚಿಗೆ ವಿವೋ ಕಂಪನಿಯು ಸಹ 120w ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನವು ಅಭಿವೃದ್ಧಿ ಪಡಿಸುವುದಾಗಿ ಹೇಳಿಕೊಂಡಿತ್ತು. ಆ ಹೊಸ ತಂತ್ರಜ್ಞಾನವು 4000mAh ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಕೇವಲ 13 ನಿಮಿಷದಲ್ಲಿ ಪೂರ್ಣಗೊಳಿಸಲಿದೆ. ಮತ್ತು ಈ ಮೂಲಕ ಅತೀ ವೇಗದ ಸ್ಮಾರ್ಟ್‌ಫೋನ್‌ ಚಾರ್ಜರ್‌ ಎನಿಸಿಕೊಳ್ಳಲಿದೆ. ಎನ್ನುವ ಸಂಗತಿಗಳನ್ನು ಹೊರಹಾಕಿತ್ತು.

ಪ್ರಸ್ತುತ ಬಹುತೇಕ ಎಲ್ಲ ಕಂಪನಿಗಳು ವೇಗದ ಚಾರ್ಜರ್‌ ತಂತ್ರಜ್ಞಾನವನ್ನುಪರಿಚಯಿಸುತ್ತಿದ್ದು, ಈ ವಿಷಯದಲ್ಲಿ ಚೀನಾ ಮೂಲದ ಕಂಪನಿಗಳು ಸಹ ಹಿಂದೆ ಬಿದ್ದಿಲ್ಲ. ಒಪ್ಪೊ ಸೂಪರ್ VOOC ತಂತ್ರಜ್ಞಾನ, ಹುವಾವೆ ಮೇಟ್ 20 ಪ್ರೊ ಫೋನ್‌ನಲ್ಲಿ ಹುವಾವೆ ಕಂಪನಿ 40W ಚಾರ್ಜಿಂಗ್ ಸೌಲಭ್ಯ ನೀಡಿದೆ. ಹಾಗೆಯೇ ಒನ್‌ಪ್ಲಸ್‌, ಸ್ಯಾಮ್‌ಸಂಗ್‌, ರಿಯಲ್‌ ಮಿ, ಕಂಪನಿಗಳು ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿವೆ.

Best Mobiles in India

English Summary

Xiaomi’s super-fast battery charging at 100W power technology has now gone official. to know more visit to kannada.gizbot.com