ಕ್ವಿಕ್ ಆಗಿ ವಿಡಿಯೋ ಎಡಿಟ್ ಮಾಡಲು ಇಲ್ಲಿವೆ ನೋಡಿ ಬೆಸ್ಟ್ ಆಪ್ಸ್!
ಮೊಬೈಲ್‌ನಲ್ಲಿ ಅಥವಾ ಕ್ಯಾಮೆರಾದಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಮತ್ತಷ್ಟು ಸೊಗಸಾಗಿಸಲು ಎಡಿಟಿಂಗ್ ಮಾಡುವುದು ಅಗತ್ಯ ಆಗಿರುತ್ತದೆ. ವಿಡಿಯೋ ಎಡಿಟಿಂಗ್ ಮಾಡಲು ಹಲವು ಅನುಕೂಲಕರ ಅಪ್ಲಿಕೇಶನ್‌ಗಳು, ಸಾಫ್ಟ್‌ವೇರ್‌ಗಳು ಲಬ್ಯ ಇವೆ. ಅವುಗಳ ಮೂಲಕ ಬಳಕೆದಾರರು ವಿಡಿಯೋ ಅಂದವನ್ನು ಹೆಚ್ಚಿಸಬಹುದಾಗಿದೆ.
ಹೌದು, ಹೊಸ ನಮೂನೆಯ ವಿಡಿಯೋ ಎಡಿಟಿಂಗ್ ಸಾಫ್ಟ್‌ವೇರ್‌ಗಳು, ಅಪ್ಲಿಕೇಶನ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಅದಾಗ್ಯೂ, ಕೆಲವು ಅವುಗಳ ಅತ್ಯುತ್ತಮ ಫೀಚರ್ಸ್ಗಳ ಮೂಲಕ ಬಳಕೆದಾರರಿಗೆ ಇಷ್ಟ ಆಗುತ್ತವೆ. ಹೀಗೆ ಸದ್ಯ ನವೆಂಬರ್ 2023ರಲ್ಲಿ ಲಭ್ಯವಿರುವ ಅತ್ಯುತ್ತಮ 10 ವಿಡಿಯೋ ಎಡಿಟಿಂಗ್ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಅವುಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಇನ್‌ಶಾಟ್ (InShot)
ಇನ್‌ಶಾಟ್ ಆಪ್ ಉಚಿತವಾಗಿರುವ ಮತ್ತು ಸುಲಭವಾಗಿ ಬಳಸಬಹುದಾದ ವೀಡಿಯೋ ಎಡಿಟರ್ ಆಗಿದೆ. ಈ ಅಪ್ಲಿಕೇಶನ್ ಸರಳ ಆಪರೇಟಿಂಗ್ ವ್ಯವಸ್ಥೆ ಹೊಂದಿದ್ದು, ಅನುಕೂಲಕರ ಆಯ್ಕೆಗಳನ್ನು ಪಡೆದಿದೆ. ವಿಡಿಯೋ ಎಡಿಟಿಂಗ್‌ಗೆ ಇನ್‌ಶಾಟ್ ಅನೇಕ ಫೀಚರ್‌ಗಳನ್ನು ಲಭ್ಯ ಮಾಡಿದೆ.
Adobe Premiere Rush
ಅಡೊಬ್ ಸಂಸ್ಥೆಯು ಅಡೊಬ್ ಪ್ರೀಮಿಯರ್ ರಶ್ ಅತ್ಯಂತ ಜನಪ್ರಿಯ ವೀಡಿಯೋ ಎಡಿಟರ್ ಆಪ್‌ಗಳಲ್ಲಿ ಒಂದಾಗಿದೆ. ಇದು ಪ್ರೊಫೆಷನಲ್ ಗ್ರೇಡ್ ಮಾದರಿಯ ವೀಡಿಯೋಗಳನ್ನು ಕ್ರಿಯೆಟ್ ಮಾಡಲು ತುಂಬಾ ಸಹಾಯ ಮಾಡುತ್ತದೆ.

ಫಿಲ್‌ಮೋರಾಗೋ
ಇದು ಸಹ ಉತ್ತಮ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಆಗಿದ್ದು, ಕೆಲವು ಬೆಸ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಫೋನ್‌ಗಳಲ್ಲಿ ವೀಡಿಯೋ ಎಡಿಟಿಂಗ್‌ಗಾಗಿ ಫಿಲ್‌ಮೋರಾಗೋ ಅತ್ಯುತ್ತಮವಾಗಿದೆ. ಇದನ್ನು ಬಳಕೆ ಮಾಡುವುದು ಕೂಡಾ ಸುಲಭ ಆಗಿದೆ.
ಪವರ್ ಡೈರೆಕ್ಟರ್ (PowerDirector)
ಪವರ್ ಡೈರೆಕ್ಟರ್ ಸಹ ಬಳಕೆದಾರರನ್ನು ಸೆಳೆದ ಅಪ್ಲಿಕೇಶನ್‌ಗಳಲ್ಲಿ ಒಂದು. ಇದು ಕೂಡಾ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದಿದ್ದು, ಸರಳ ಇಂಟರ್ಫೇಸ್ ಪಡೆದಿದೆ. ಇದು ಹಲವಾರು ವೀಡಿಯೋ, ಆಡಿಯೋ, ಫೋಟೋ ಟ್ರ್ಯಾಕ್‌ಗಳನ್ನು ಆಡ್ ಮಾಡಲು ಪವರ್‌ಡೈರೆಕ್ಟರ್ ಬಳಕೆ ಸೂಕ್ತ.

Adobe Premiere Pro
ಅಡೊಬ್ ಪ್ರೀಮಿಯರ್ ಪ್ರೊ ವಿಡಿಯೋ ಎಡಿಟಿಂಗ್ ಟೂಲ್ ಹೈ ಎಂಡ್ ಮಾದರಿಯ ಆಯ್ಕೆಗಳನ್ನು ಪಡೆದುಕೊಂಡಿದೆ. ವೃತ್ತಿಪರ ಮಾದರಿಯಲ್ಲಿ ವಿಡಿಯೋ ವೀಡಿಯೋ ಎಡಿಟಿಂಗ್‌ಗಾಗಿ ಈ ಟೂಲ್ ಅತ್ಯುತ್ತಮ ಆಗಿದೆ.
ಕೈನ್ ಮಾಸ್ಟರ್ (KineMaster)
ಕೈನ್ ಮಾಸ್ಟರ್ ವಿಡಿಯೋ ಎಡಿಟಿಂಗ್ ಟೂಲ್ ಸಹ ಗ್ರಾಹಕರನ್ನು ಆಕರ್ಷಿಸಿದೆ. ಈ ಟೂಲ್ ಅನೇಕ ವೀಡಿಯೋ ಲೇಯರ್‌ಗಳು, ಎಫೆಕ್ಟ್ಸ್‌ಗಳು, ಟ್ರಾನ್ಸಿಷನ್‌ಗಳನ್ನು ಒದಗಿಸುತ್ತದೆ. ಇದರೊಂದಿಗೆ ಮತ್ತಷ್ಟು ಗ್ರಾಹಕ ಸ್ನೇಹಿ ಆಯ್ಕೆ ಪಡೆದುಕೊಂಡಿದೆ.
ವಿಡಿಯೋ ಶೋ (VideoShow)
ವಿಡಿಯೋ ಶೋ ಅಪ್ಲಿಕೇಶನ್ ಕೂಡಾ ಸುಲಭ ಮತ್ತು ಉಚಿತವಾದ ವೀಡಿಯೋ ಎಡಿಟರ್ ಆಗಿದೆ. ಬಳಕೆದಾರರು ಈ ಆಪ್‌ನಲ್ಲಿ ಆಕರ್ಷಕ ಫಿಲ್ಟರ್ಸ್, ಸ್ಟಿಕ್ಕರ್ಸ್ ಇತ್ಯಾದಿಗಳನ್ನು ಬಳಕೆ ಮಾಡಬಹುದಾಗಿದೆ.
ಮ್ಯಾಗಿಸ್ಟೊ (Magisto) ಆಪ್
ಪ್ರಮುಖ ವಿಡಿಯೋ ಎಡಿಟಿಂಗ್ ಆಪ್‌ಗಳ ಪೈಕಿ ಮ್ಯಾಗಿಸ್ಟೊ ಸಹ ಒಂದು. ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ವೀಡಿಯೋಗಳನ್ನು ಆಟೋಮೆಟಿಕ್‌ಗಾಗಿ ಎಡಿಟ್ ಮಾಡುತ್ತದೆ. ಇದರಲ್ಲಿ ಕೆಲವು ಆಕರ್ಷಕ ಆಯ್ಕೆಗಳು ಸಹ ಲಭ್ಯ ಇವೆ.
ವಿಮೊ ವೀಡಿಯೋ ಎಡಿಟರ್ ಟೂಲ್
ಈ ಟೂಲ್‌ನಲ್ಲಿ ಬಳಕೆದಾರರಿಗೆ ಬೊಂಬಾಟ್ ಆಯ್ಕೆಗಳು ಲಭ್ಯ ಇವೆ. ಮುಖ್ಯವಾಗಿ ಇದು ಬಳಕೆದಾರರಿಗೆ ವಿಮೊ ಮೆಮ್ಸ್, ಜಿಫ್ಸ್, ಸ್ಟಿಕ್ಕರ್ಸ್ ಮೂಲಕ ವೀಡಿಯೋಗಳನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ.
ವಿವಾ ವಿಡಿಯೋ (VivaVideo)
ವಿವಾ ವೀಡಿಯೋ ಟೂಲ್ ಕೂಡಾ ಬಳಕೆದಾರರಿಗೆ ಇಷ್ಟ ಎನಿಸುವ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಆಗಿದೆ. ಇದ್ರಲ್ಲಿ ಹಲವು ಸ್ಪೆಷಲ್ ಎಫೆಕ್ಟ್ಸ್, ಫಿಲ್ಟರ್ಸ್, ಸ್ಟಿಕ್ಕರ್ಸ್ ಸೇರಿದಂತೆ ಮತ್ತಷ್ಟು ಆಕರ್ಷಕ ಆಯ್ಕೆ ಸಹ ಲಭ್ಯ ಇವೆ.


Click it and Unblock the Notifications








